ವಿವಾದದ ನಂತ್ರ ಜಿವಾ ರಿಯಾಕ್ಷನ್ – ಕೃತಿ ಸನೋನ್ ಜಾಹೀರಾತಿನ ವಿಡಿಯೋ ಡಿಲೀಟ್

Published : Aug 26, 2026, 12:14 PM IST
Kriti Sanon

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗ್ತಿದ್ದಂತೆ ಜಿವಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೃತಿ ಸನೋನ್ ಕಾಣಿಸಿಕೊಂಡಿದ್ದ ರಕ್ಷಾಬಂಧನ ಜಾಹಿರಾತನ್ನು ಡಿಲೀಟ್ ಮಾಡಿದೆ.

ಬಾಲಿವುಡ್ ನಟಿ ಕೃತಿ ಸನೋನ್ ಅವರ ರಕ್ಷಾಬಂಧನ ಜಾಹೀರಾತನ್ನು ಜಿವಾ ಆಭರಣ ಬ್ರಾಂಡ್ ತೆಗೆದುಹಾಕಿದೆ. ಕೃತಿ ಸನೋನ್ ಅವರ ಡ್ರೆಸ್ ವಿವಾದಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ರಕ್ಷಾಬಂಧನ ಜಾಹೀರಾತಿನಲ್ಲಿ ಕೃತಿ ಅವರು ಧರಿಸಿದ್ದ ಡ್ರೆಸ್ ನೋಡಿ ಅವರನ್ನು ಟ್ರೋಲ್ ಮಾಡಿದ್ದರು. ಬುಧವಾರ ಅಂದ್ರೆ ಆಗಸ್ಟ್ 26 ಇಂದು ಜೀವಾ ಜಾಹೀರಾತನ್ನು ತೆಗೆದು ಹಾಕಿದೆ. ಅಲ್ಲದೆ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದೆ.

ಕೃತಿ ಸನೋನ್ ಜಾಹೀರಾತು ಡಿಲಿಟ್

ಜೀವಾ, ಕೃತಿ ಸನೋನ್ ಕಾಣಿಸಿಕೊಂಡಿದ್ದ ರಕ್ಷಾಬಂಧನ ಜಾಹೀರಾತನ್ನು ಡಿಲೀಟ್ ಮಾಡಿದೆ. ಆದ್ರೆ ಅದ್ರಲ್ಲಿ ಕೃತಿ ಡ್ರೆಸ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಜೀವಾ, ನಾವು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಆಳವಾಗಿ ಗೌರವಿಸುತ್ತೇವೆ. ಒಂದು ಬ್ರ್ಯಾಂಡ್ ಆಗಿ, ನಾವು ಯಾವಾಗಲೂ ಇಡೀ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಆಚರಿಸುವಲ್ಲಿ ನಂಬಿಕೆ ಇಡುತ್ತೇವೆ ಎಂದಿದೆ.

ಈ ಬಾರಿ, ನಾವು ನಮ್ಮ ಸಾಕುಪ್ರಾಣಿಗಳನ್ನು ಈ ಪ್ರೀತಿ ಮತ್ತು ಆಚರಣೆಯಲ್ಲಿ ಸೇರಿಸಿಕೊಳ್ಳಲು ಬಯಸಿದ್ದೇವೆ. ನಮ್ಮ ಇತ್ತೀಚಿನ ಜಾಹೀರಾತು ಅಜಾಗರೂಕತೆಯಿಂದ ಸಮಾಜದ ಯಾವುದೇ ವರ್ಗದ ಭಾವನೆಗಳಿಗೆ ನೋವುಂಟುಮಾಡಿದ್ದರೆ, ಅದು ಎಂದಿಗೂ ನಮ್ಮ ಉದ್ದೇಶವಾಗಿರಲಿಲ್ಲ ಎಂದು ಕಂಪನಿ ಹೇಳಿದೆ. ಗೌರವದಿಂದ, ನಾವು ಎಲ್ಲಾ ಮಾಧ್ಯಮ ವೇದಿಕೆಗಳಿಂದ ಜಾಹೀರಾತನ್ನು ತೆಗೆದುಹಾಕಿದ್ದೇವೆ ಎಂದು ಜಿವಾ ಹೇಳಿಕೆ ನೀಡಿದೆ.

ಕೃತಿ ಸಮರ್ಥಿಸಿಕೊಂಡ ರಾಹುಲ್ ಗಾಂಧಿ

ಜಾಹೀರಾತಿನ ವಿವಾದದಲ್ಲಿ ಸಿಲುಕಿರುವ ನಟಿ ಕೃತಿ ಸನೋನ್ ಅವರನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದರು. ಮಹಿಳೆಯರ ಉಡುಪು, ಕೆಲಸ ಮತ್ತು ಅವರು ಎಲ್ಲಿ ವಾಸಿಸುತ್ತಾರೆ ಎಂಬುದರ ಕುರಿತು ನಿರ್ಧಾರಗಳು ಅವರ ಹಕ್ಕು ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ, ಕೃತಿ ಸನೋನ್ ಅವರ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಂಡಿದ್ದರು.

ತಿರುಗೇಟು ನೀಡಿದ್ದ ಕೃತಿ

ಸೋಶಿಯಲ್ ಮೀಡಿಯಾದಲ್ಲಿ ಕೃತಿ ಸನೋನ್ ಅವರ ರಕ್ಷಾಬಂಧನದ ಜಾಹೀರಾತು ಪ್ರಸಾರ ಆಗ್ತಿದ್ದಂತೆ ಬಳಕೆದಾರರು ವಿರೋಧ ವ್ಯಕ್ತಪಡಿಸಿದ್ದರು. ಕೃತಿ ಡ್ರೆಸ್ ಹಾಗೂ ಕೃತಿ ನಾಯಿಗೆ ಕಟ್ಟುವ ರಾಖಿ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಕೃತಿ ಪ್ರತಿಕ್ರಿಯೆ ನೀಡಿದ್ದರು. ಸಂಸ್ಕೃತಿ ಸಂಪ್ರದಾಯ ಇರುವುದು ಹೆಣ್ಣಿನ ಮನಸ್ಸಿನಲ್ಲಿ, ಉಡುಪಿನಲ್ಲಿ ಅಲ್ಲ ಅಂತ ಕೃತಿ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Toxic Review: ಟಾಕ್ಸಿಕ್ ವಿಮರ್ಶೆ- ರಾಯನ ಆರ್ಭಟ-ಟಿಕೆಟ್ ಆಟ.. ಯಶ್ ದರ್ಬಾರ್! 'ಪ್ರತಿಯೊಂದು ಆಯ್ಕೆಗೂ ತಕ್ಕ ಬೆಲೆ ತೆರಲೇಬೇಕು'.. ಏನದು ಸೀಕ್ರೆಟ್!?
Irumudi: 5 ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಮೂವಿ! ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ರವಿತೇಜ ಸಿನಿಮಾ