
ಈ ಹಿಂದೆ ‘ಮಾಮೂ ಟೀ ಅಂಗಡಿ’ ಎನ್ನುವ ಚಿತ್ರ ನಿರ್ದೇಶಿಸಿದ್ದ ಪರಮೇಶ್ ಅವರೇ ‘ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದ ನಿರ್ದೇಶಕರು. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅಹಲ್ಯಾ ಸುರೇಶ್ ಚಿತ್ರದ ಕುರಿತು ಹೇಳುವುದೇನು?
- ಕಮರೊಟ್ಟು ಚೆಕ್‌ಪೋಸ್ಟ್ ಒಂದು ವಿಶೇಷವಾದ ಸಿನಿಮಾ. ಯಾಕೆಂದರೆ ಭೂತ, ವರ್ತಮಾನದಲ್ಲಿ ನಡೆಯುವ ಸನ್ನಿವೇಶಗಳು, ಸೈಕಲಾಜಿಕಲ್ಲಾಗಿ ನೋಡುಗರ ಮನಸ್ಥಿತಿಯನ್ನು ಅರಿತುಕೊಂಡು ಕತೆಯನ್ನು ಮಾಡಲಾಗಿದೆ.
ಮಕ್ಕಳ ಚಿತ್ರಕ್ಕೆ ಯಶ್-ರಾಧಿಕಾ ಧ್ವನಿಕಾಣಿಕೆ!
- ಈ ಚಿತ್ರದ ಮತ್ತೊಂದು ಹೈಲೈಟ್ ತುಳು ನಾಡಿನ ಭೂತರಾಧನೆಯ ಆಚರಣೆಯನ್ನು ಬಳಸಿಕೊಂಡು ಮಾಡಿರುವ ಸಿನಿಮಾ ಇದು. ಚಿತ್ರದಲ್ಲಿ ಭಾಗದ ಭಾಷೆಯನ್ನೇ ಆಧರಿಸಿ ಒಂದು ಹಾಡನ್ನು ಕೂಡ ಮಾಡಲಾಗಿದೆ. ಅಂದಹಾಗೆ ಈ ಹಾಡನ್ನು ಹಾಡಿರುವುದು ನಟ ನವೀನ್ ಕೃಷ್ಣ ಅವರು.
- ಈಗಾಗಲೇ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಕಾಗೆಯನ್ನು ಒಳಗೊಂಡ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದಾಗಲೇ ಸಿನಿಮಾ ಬಗ್ಗೆ ಕುತೂಹಲ ಮೂಡಿತು. ಅದು ಟ್ರೇಲರ್‌ನಿಂದ ಮತ್ತಷ್ಟು ಹೆಚ್ಚಾಗಿದೆ.
- ನನಗೆ ಆದಿ ಪುರಾಣ ಚಿತ್ರ ಮುಗಿದ ಮೇಲೆ ಸಿಕ್ಕ ಅವಕಾಶ ಇದು. ಒಳ್ಳೆಯ ಪಾತ್ರವಿದು. ಒಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುವುದೇ ಸವಾಲು. ಅದನ್ನು ನಾನು ಇಲ್ಲಿ
ನಿಭಾಯಿಸಿದ್ದೇನೆ ಎನ್ನುವ ಭಾವನೆ ಇದೆ.
ಅತ್ತೆ, ಮಾವ ರಾಧಿಕಾಗೆ ಕೊಟ್ರು ಸ್ಪೆಷಲ್ ಗಿಫ್ಟ್! ಏನದು?
- ಈ ಚಿತ್ರದ ನಂತರ ಮತ್ತೊಂದು ಸಿನಿಮಾ ಬರುತ್ತಿದೆ. ಅದರ ಹೆಸರು ‘ಲುಂಗಿ’ ಎಂಬುದು. ಅಕ್ಷಿತ್ ಶೆಟ್ಟಿ ಎಂಬುವವರು ಈ ಚಿತ್ರದ ನಿರ್ದೇಶಕರು. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಆಗಿದೆ. ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ.
- ಈ ಎರಡೂ ಸಿನಿಮಾಗಳು ತೆರೆಗೆ ಬಂದ ಮೇಲೆ ಕನ್ನಡದಲ್ಲಿ ನನಗೆ ಮತ್ತಷ್ಟು ಒಳ್ಳೆಯ ಸಿನಿಮಾಗಳು ಸಿಗುತ್ತವೆಂಬ ನಂಬಿಕೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.