Elephant Whisperers ಗೆಲುವಿನ ಬಳಿಕ ತೆಪ್ಪಕಾಡಿಗೆ ಹರಿದು ಬರುತ್ತಿರುವ ಪ್ರವಾಸಿಗರ ದಂಡು

Published : Mar 14, 2023, 02:31 PM ISTUpdated : Mar 14, 2023, 02:38 PM IST
Elephant Whisperers ಗೆಲುವಿನ ಬಳಿಕ ತೆಪ್ಪಕಾಡಿಗೆ ಹರಿದು ಬರುತ್ತಿರುವ ಪ್ರವಾಸಿಗರ ದಂಡು

ಸಾರಾಂಶ

ಭಾರತೀಯ ಸಾಕ್ಷ್ಯಾಚಿತ್ರ ಎಲಿಫೆಂಟ್ ವಿಸ್ಪರರ್ಸ್‌ಗೆ ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು, ಇದಾದ ಬಳಿಕ ಆನೆ ರಘು ಇರುವ ತಮಿಳುನಾಡಿನ ತೆಪ್ಪಕಾಡು ಆನೆ ಕ್ಯಾಂಪ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.  

ತೆಪ್ಪಕಾಡು:  ಭಾರತೀಯ ಸಾಕ್ಷ್ಯಾಚಿತ್ರ ಎಲಿಫೆಂಟ್ ವಿಶ್ಪರ್ಸ್‌ ಇತ್ತೀಚೆಗೆ ಆಸ್ಕರ್ ಪ್ರಸಸ್ತಿ ಸಿಕ್ಕಿದ್ದು, ಇದಾದ ಬಳಿಕ ಆನೆ ರಘು ಇರುವ ತಮಿಳುನಾಡಿನ ತೆಪ್ಪಕಾಡು ಆನೆ ಕ್ಯಾಂಪ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.  ಆನೆ ರಘುವನ್ನು ನೋಡುವುದಕ್ಕಾಗಿ ಈ ತೆಪ್ಪಕಾಡು ಅರಣ್ಯಕ್ಕೆ ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಈ ವೇಳೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪ್ರವಾಸಿಗರೊಬ್ಬರು, ಇಲ್ಲಿಗೆ ಬಂದಿರುವುದಕ್ಕೆ ಖುಷಿ ಆಗಿದೆ. ಇದೊಂದು ಉತ್ತಮ ಕ್ಷಣ. ಆನೆ ನನ್ನ ಅಚ್ಚುಮೆಚ್ಚಿನ ಪ್ರಾಣಿ ಮತ್ತು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿರುವುದು ನನಗೆ ಸಂತೋಷ ಮತ್ತು ಉತ್ಸುಕತೆಯನ್ನುಂಟು ಮಾಡಿದೆ ಎಂದು ಹೇಳಿದರು. 

ಈ ಎಲಿಫೆಂಟ್ ವಿಶ್ಪರಸ್‌ ಸಾಕ್ಷ್ಯಾಚಿತ್ರದ ಹಿಂದೆ  ಇರುವುದು ಇಬ್ಬರು ಮಹಿಳೆಯರು, ನಿರ್ಮಾಪಕಿ ಗುನೀತ್ ಮೊಂಗಾ ಹಾಗೂ ನಿರ್ದೇಶಕ ಕಾರ್ತಿಕಿ ಗೋನ್ಸಾವೆಸ್ (Kartiki Gonsalves) ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದರು.  ಪ್ರಶಸ್ತಿ ಬಳಿಕ ಮಾತನಾಡಿದ ಗೊನ್ಸಾಲ್ವೆಸ್, ನಮ್ಮ ಮತ್ತು ನಮ್ಮ ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಂಧದ ಬಗ್ಗೆ ಮಾತನಾಡಲು ನಾನು ಇಂದು ಇಲ್ಲಿ ನಿಂತಿದ್ದೇನೆ. ಸ್ಥಳೀಯ ಸಮುದಾಯಗಳ (indigenous communities) ಗೌರವಕ್ಕಾಗಿ ಇತರ ಜೀವಿಗಳ ಕಡೆಗೆ ಅಸ್ತಿತ್ವಕ್ಕಾಗಿ, ನಾವು ನಮ್ಮ ಜಾಗವನ್ನು ಹಂಚಿಕೊಳ್ಳುತ್ತೇವೆ. ಮತ್ತು ಅಂತಿಮವಾಗಿ ಸಹಬಾಳ್ವೆ. ಸ್ಥಳೀಯ ಜನರು ಮತ್ತು ಪ್ರಾಣಿಗಳನ್ನು ಎತ್ತಿ ತೋರಿಸುವ ನಮ್ಮ ಚಲನಚಿತ್ರವನ್ನು ಗುರುತಿಸಿದ್ದಕ್ಕಾಗಿ ಅಕಾಡೆಮಿಗೆ ಧನ್ಯವಾದಗಳು. ಈ ಚಿತ್ರದ ಶಕ್ತಿಯನ್ನು ನಂಬಿದ್ದಕ್ಕಾಗಿ ನೆಟ್‌ಫ್ಲಿಕ್ಸ್‌ಗೆ (Netflix). ನನ್ನ ನಿರ್ಮಾಪಕರಿಗೆ ಮತ್ತು ನನ್ನ ಇಡೀ ತಂಡಕ್ಕೆ ಮತ್ತು ಅಂತಿಮವಾಗಿ, ನನ್ನ ತಾಯಿ ತಂದೆ ಮತ್ತು ಸಹೋದರಿಗೆ ಗುನೀತ್‌ಗೆ ನೀವೆಲ್ಲಾ ನನ್ನ ಬ್ರಹ್ಮಾಂಡದ ಕೇಂದ್ರವಾಗಿದ್ದೀರಿ ಹಾಗೂ ಕೊನೆಯದಾಗಿ ನನ್ನ ತಾಯಿನಾಡು ಭಾರತಕ್ಕೆ ಎಂದು ಗೊನ್ಸಾಲ್ವೆಸ್ ಪ್ರಶಸ್ತಿ ಸ್ವೀಕರಿಸಿ ಹೇಳಿದ್ದರು.

ಅನಾಥ ಆನೆ ಮರಿಗಳನ್ನು ಮಕ್ಕಳಂತೆ ಸಾಕಿದ ಬೊಮ್ಮನ್-ಬೆಳ್ಳಿ ದಂಪತಿಯ ಸ್ಫೂರ್ತಿದಾಯಕ ಜೀವನಕ್ಕೆ 'ಆಸ್ಕರ್' ಗರಿ

ಮದುಮಲೈ ಅರಣ್ಯ ಶಿಬಿರದಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿತ್ತು. ಅನಾಥ ಆನೆ ಮರಿಗಳ ಆರೈಕೆ ಮಾಡುವ ಬೊಮ್ಮನ್ ಹಾಗೂ ಬೆಳ್ಳಿಯ ಸ್ಪೂರ್ತಿದಾಯಕ ಕತೆಯೇ ಈ ಚಿತ್ರದ ತಿರುಳು. ಈ ಸಾಕ್ಷ್ಯಚಿತ್ರ ಆಸ್ಕರ್ (Oscar) ಗೆದ್ದ ಸಂಭ್ರಮವನ್ನು ಬೆಳ್ಳಿ ಏಷ್ಯಾನೆಟ್ ನ್ಯೂಸ್ ಜೊತೆ ಹಂಚಿಕೊಂಡಿದ್ದರು.. ಆನೆ ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಕಷ್ಟಪಡಬೇಕು. ಆದರೆ ಆನೆಯ ಪ್ರೀತಿಯ ಮುಂದೆ ನನ್ನ ಕಷ್ಟ ಏನೂ ಅಲ್ಲ. ನನಗೆ ಆನೆಯ ಪ್ರೀತಿಯೇ ಮಿಗಿಲು. ನನಗೆ ಕಷ್ಟವೇ ಗೊತ್ತಾಗಲಿಲ್ಲ  ಎಂದಿದ್ದಾರೆ. ಈಗ ಶಿಬಿರಕ್ಕೆ ಪ್ರವಾಸಿಗರು ಬಂದು ಮಾತನಾಡಿಸುತ್ತಾರೆ. ನಿಮ್ಮ ಚಿತ್ರ ನೋಡಿದ್ದೇವೆ. ತುಂಬಾ ಸಂತೋಷವಾಗಿದೆ ಎನ್ನುತ್ತಿದ್ದಾರೆ. ಬಹುತೇಕರು ಆನೆಯ ಫೋಟೋ ತೆಗೆಯುವ ಬದಲು ನನ್ನ ಜೊತೆ ನಿಂತು ಫೋಟೋ ತೆಗೆಯುತ್ತಿದ್ದಾರೆ. ನಾನು ಮನೆಯಲ್ಲಿದ್ದರೆ, ಇಲ್ಲಿಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿರುವುದು ಅತೀವ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 

ಆನೆ, ಆನೆ ಮರಿಗಳನ್ನು ಆರೈಕೆ ಮಾಡುವ, ಮಾವುತರ ಜೀವನ, ಆನೆ ಹಾಗೂ ಮಾನವನ (Human) ನಡುವಿನ ಪ್ರೀತಿ ಸೇರಿದಂತೆ ಹಲವು ವಿಚಾರಗಳು ಈ  ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರದಲ್ಲಿ ಅನಾವರಣಗೊಂಡಿದೆ. ಕಾಡು ಪ್ರಾಣಿ (Wild Elephant) ಆನೆಯನ್ನು ಸಂರಕ್ಷಿಸಬೇಕಾದ ಅಗತ್ಯತೆಯನ್ನೂ ಈ ಸಾಕ್ಷ್ಯಚಿತ್ರ ಒತ್ತಿ ಹೇಳಿದೆ. ಮದುಮಲೈ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಈ ಚಿತ್ರ ಚಿತ್ರೀಕರಿಸಲಾಗಿದೆ. ಮದುಮಲೈಯ (Madumalai) ಎಲ್ಲಾ ಅರಣ್ಯ ಸಿಬ್ಬಂದಿ ಕೊಡುಗೆ ಈ ಚಿತ್ರಕ್ಕಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಚಿತ್ರದ ಕುರಿತು ಮದುಮಲೈ ಅರಣ್ಯಾಧಿಕಾರಿ ವೆಂಕಟೇಶ್ ಏಷ್ಯಾನೆಟ್ ನ್ಯೂಸ್ ಜೊತೆ ಮಾತನಾಡಿದ್ದಾರೆ. ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

Oscars 2023: ಭಾರತಕ್ಕೆ ಮೊದಲ ಗೆಲುವು: ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಶಾರ್ಟ್‌ ಫಿಲ್ಮ್ ಪ್ರಶಸ್ತಿ

ಈ ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವೇಸ್ ಮದುಮಲೈ ಕೇಂದ್ರಕ್ಕೆ ಹೆಚ್ಚಿನ ಸಮಯ ಭೇಟಿ ನೀಡುತ್ತಿದ್ದರು. ಹೀಗಾಗಿ ಮದುಮಲೈ ಶಿಬಿರದಲ್ಲಿನ ಎಲ್ಲಾ ಚುಟುವಟಿಕೆ, ಆನೆಗಳ ಆರೈಕೆ ಕುರಿತ ಸಂಪೂರ್ಣ ಮಾಹಿತಿ ಅವರಿಗಿತ್ತು. ಅರಣ್ಯದಲ್ಲಿ ಅನಾಥವಾದ ಆನೆ ಮನೆ ಶಿಬಿರಕ್ಕೆ ಬಂದಿರುವ ಮಾಹಿತಿ ಪಡೆದ ಕಾರ್ತಿಕಿ, ಸರ್ಕಾರದಿಂದ ಎಲ್ಲಾ ಅನುಮತಿ ಪಡೆದು ಚಿತ್ರ ನಿರ್ದೇಶನಕ್ಕೆ ಮುಂದಾದರು. ಕಾರ್ತಿಕ್ ಗೋನ್ಸಾಲ್ವೇಸ್ ಊಟಿ ಮೂಲದವರಾಗಿರುವ ಕಾರಣ ಆನೆ ಹಾಗೂ ಆನೆ ಮರಿ ಕುರಿತು ತಿಳಿದುಕೊಂಡಿದ್ದಾರೆ ಎಂದು ಡಿಎಫ್ಒ ವೆಂಕಟೇಶ್ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?