‘ದಿ ವಿಲನ್’ ಚಿತ್ರದ ಅವಧಿ 2 ಗಂಟೆ 55 ನಿಮಿಷ

By Kannadaprabha NewsFirst Published 11, Sep 2018, 10:32 AM IST
Highlights

ಚಿತ್ರದ ಅವಧಿ 2 ಗಂಟೆ 55 ನಿಮಿಷ. ಚಿತ್ರಕ್ಕೆ U/A ಸರ್ಟಿಫಿಕೇಟ್. ಇವು ‘ದಿ ವಿಲನ್’ ಚಿತ್ರದ ಸದ್ಯದ ಸುದ್ದಿ. ಈ ಚಿತ್ರ ಅಷ್ಟೊಂದು ಉದ್ದ ಯಾಕೆ? ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ? ಯಾವಾಗ ರಿಲೀಸು? ಇತ್ಯಾದಿ ಪ್ರಶ್ನೆಗಳಿಗೆ ನಿರ್ದೇಶಕ ಪ್ರೇಮ್ ಉತ್ತರ ಕೊಟ್ಟಿದ್ದಾ

  • ಸೆನ್ಸಾರ್ ಕಡೆಯಿಂದ ಚಿತ್ರಕ್ಕೆ ಮೊದಲು ‘A’ ಸರ್ಟಿಫಿಕೇಟ್ ಸಿಕ್ಕಿದ್ದಕ್ಕೆ ಎರಡು ಕಾರಣಗಳಿದ್ದವು. ಎರಡು ಕಡೆಗಳಲ್ಲಿ ಬ್ಲಡ್ ಶೇಡ್ ಜಾಸ್ತಿ ಇದೆ ಅನ್ನೋದು ಅದಕ್ಕಿದ್ದ ಮೊದಲ ಕಾರಣ. ಆನಂತರದ್ದು ಒಂದು ಡೈಲಾಗ್. ಎರಡು ಕಟ್ ಮತ್ತು ಆಕ್ಷೇಪಾರ್ಹ ಡೈಲಾಗ್ ಮ್ಯೂಟ್ ಮಾಡುವುದಾದರೆ ‘A’ ಬದಲಿಗೆ ‘U/A’ಸರ್ಟಿಫಿಕೇಟ್ ನೀಡುವುದಾಗಿ ಸೆನ್ಸಾರ್ ಮಂಡಳಿ ಅಂದೇ ಹೇಳಿತ್ತು. ಆರಂಭದಲ್ಲಿ ನಾವು ಒಪ್ಪಿಕೊಂಡಿರಲಿಲ್ಲ. ಆದರೆ ಮರು ಚಿಂತನೆ ನಡೆಸಿ, ಬ್ಲಡ್ ಶೇಡ್ ದೃಶ್ಯಗಳನ್ನು ತೆಗೆದು ಹಾಕುವುದರ ಜತೆಗೆ ಆಕ್ಷೇಪಾರ್ಹ ಡೈಲಾಗ್ ಮ್ಯೂಟ್ ಮಾಡುವುದಕ್ಕೆ ಒಪ್ಪಿಕೊಂಡೆವು. ಅದರ ಆಧಾರದಲ್ಲಿ ಈಗ ಚಿತ್ರಕ್ಕೆ ಸೆನ್ಸಾರ್‌ನಿಂದ ‘U/A’ ಪ್ರಮಾಣ ಪತ್ರ ನೀಡಿದೆ.
  • ನನ್ನ ಪ್ರಕಾರ ಸೆಪ್ಟೆಂಬರ್ 27ರ ಒಳಗಾಗಿ ಸಿನಿಮಾ ಮುಗಿಯುವುದು ಕಷ್ಟ. ಹಾಗಾಗಿ ಸೆಪ್ಟೆಂಬರ್ 27ರಂದೇ ‘ದಿ ವಿಲನ್’ ರಿಲೀಸ್ ಕನ್‌ಫರ್ಮ್ ಇಲ್ಲ.
  • ನನ್ನ ಪ್ರಕಾರ 2 ಗಂಟೆ 55 ನಿಮಿಷದ ಸಿನಿಮಾ ಅನ್ನೋದು ದೊಡ್ಡ ವಿಷಯವೇ ಅಲ್ಲ. ಈಗಲೂ ಹಿಂದಿಯಲ್ಲಿ ಹಲವು ಸಿನಿಮಾಗಳು ಮೂರು ಗಂಟೆಯಷ್ಟು ಅವಧಿಯಲ್ಲಿ ತೆರೆಗೆ ಬಂದಿವೆ. ಆ ದೃಷ್ಟಿಯಲ್ಲಿ ಹೇಳೋದಾದ್ರೆ ‘ದಿ ವಿಲನ್’ಗೆ ಟೈಮ್ ಮುಖ್ಯವೇ ಆಗೋದಿಲ್ಲ. ಸಿನಿಮಾ ಶುರುವಾದರೆ ಮುಗಿಯುವುದೇ ಗೊತ್ತಾಗುವುದಿಲ್ಲ. ಪ್ರೇಕ್ಷಕರಿಗೆ ಅದು ಅಷ್ಟು ರಂಜಿಸುತ್ತೆ ಎನ್ನುವ ಬಲವಾದ ವಿಶ್ವಾಸ ನನಗಿದೆ.
Last Updated 19, Sep 2018, 9:22 AM IST