ವಿನೀಶ್‌ನನ್ನು ದರ್ಶನ್ ಸೆಟ್‌ಗೆ ಕರೆತಂದ ವಿಜಯಲಕ್ಷ್ಮಿ

By Kannadaprabha NewsFirst Published 11, Sep 2018, 10:19 AM IST
Highlights

ಯಜಮಾನ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳಲಿರುವ ದರ್ಶನ್ ಪುತ್ರ ವಿನೀಶ್‌ ದರ್ಶನ್

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ‘ಯಜಮಾನ’ ಚಿತ್ರೀಕರಣದ ಸೆಟ್‌ನಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಸುದ್ದಿಗೆ ದಾರಿ ಮಾಡಿಕೊಟ್ಟಿದೆ. ಜತೆಗೆ ಸಿನಿಮಾ ಸೆಟ್‌ನಲ್ಲಿ ಇಬ್ಬರು ಇರುವ ಫೋಟೋಗಳು ಸದ್ದು ಮಾಡುತ್ತಿದ್ದು, ಬೇರೆ ಬೇರಿ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಆದರೆ, ಈ ಅರ್ಥಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊತ್ತಿಲ್ಲ. ಆದರೆ, ವಿಜಯಲಕ್ಷ್ಮೀ ದರ್ಶ ನ್ ಅವರು ‘ಯಜಮಾನ’ ಚಿತ್ರೀಕರಣದ ಸೆಟ್‌ಗೆ ಹೋಗಿದ್ದರ ಹಿಂದೆ ಬೇರೆಯದ್ದೇ ಆದ ಕತೆ ಇದೆ.
‘ಯಜಮಾನ’ ಚಿತ್ರದಲ್ಲಿ ದರ್ಶನ್ ಜತೆ ಪುಟ್ಟ ಪಾತ್ರದಲ್ಲಿ ಅವರ ಪುತ್ರ ವಿನೀಶ್ ನಟನೆ ಮಾಡುತ್ತಿದ್ದಾರೆ. ತಮ್ಮ ಪುತ್ರನನ್ನು ಸೆಟ್‌ಗೆ ಕರೆದುಕೊಂಡು ಹೋಗಿ ಬರುವ ಸಲುವಾಗಿ ಪಿ ಕುಮಾರ್ ನಿರ್ದೇಶನದ ‘ಯಜಮಾನ’ ಚಿತ್ರೀಕರಣ ಸ್ಥಳದಲ್ಲಿ ವಿಜಯಲಕ್ಷ್ಮೀ ದರ್ಶನ್ ಕಾಣಿಸಿಕೊಂಡಿದ್ದರು. ಹೀಗೆ ಸೆಟ್‌ಗೆ ಹೋದಾಗ ನಟ ದರ್ಶನ್ ಕೂಡ ಎದುರಾಗಿದ್ದಾರೆ. ವಿನೀಶ್ ‘ಯಜಮಾನ’ ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಇವರ ಲುಕ್ ಹೇಗಿರುತ್ತದೆ ಎಂಬುದನ್ನು ನೋಡಲು ಗಣೇಶನ ಹಬ್ಬದವರೆಗೂ ಕಾಯ– ಬೇಕಿದು. ಅಂದು ವಿನೀಶ್ ಲುಕ್ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್. ವಿನೀಶ್ ಈ ಹಿಂದೆ ‘ಐರಾವತ’ ಚಿತ್ರದಲ್ಲೂ ಪೊಲೀಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು.

Last Updated 19, Sep 2018, 9:22 AM IST