
ಈ ಹಿಂದೆ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುತ್ತೇನೆ ಎಂದಿದ್ದೀರಿ. ಅದು ಯಾವಾಗ ಸಾಧ್ಯವಾಗಬಹುದು?
ಖಂಡಿತಾ. ಪುನೀತ್ ಅವರು ದೊಡ್ಡ ಸ್ಟಾರ್ ನಟರು. ಅವರೊಂದಿಗೆ ನಟಿಸಬೇಕು ಎನ್ನುವ ಆಸೆ ನನಗಿದೆ. ಅದೆಲ್ಲಕ್ಕೂ ಕಾಲ ಕೂಡಿ ಬರಬೇಕು.
ನೀವು ಕನ್ನಡದ ಪಾಲಿಗೆ ಕೇವಲ ಐಟಂ ಸಾಂಗ್‌ಗಳಿಗಷ್ಟೇ ಸೀಮಿತವಾಗಿದ್ದೀರಲ್ಲಾ ಯಾಕೆ?
ಹಾಗೇನಿಲ್ಲ. ನನಗೆ ಕನ್ನಡದಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಅದಕ್ಕೆ ಕಾಲ ಕೂಡಿ ಬರಬೇಕು. ಒಳ್ಳೆಯ ಕತೆ, ಒಳ್ಳೆಯ ತಂಡ ಸಿಕ್ಕಬೇಕು. ಈಗಾಗಲೇ ಹಲವಾರು ದೊಡ್ಡ ದೊಡ್ಡ ನಿರ್ಮಾಪಕರು ಕನ್ನಡಕ್ಕೆ ಬರುವಂತೆ ಆಫರ್ ನೀಡಿದ್ದಾರೆ. ನಾನು ಎಲ್ಲವನ್ನೂ ನೋಡಿ ಖಂಡಿತ ಕನ್ನಡಕ್ಕೆ ಬರುವೆ. ಇನ್ನು ಬಹಳಷ್ಟು ಮಂದಿಗೆ ಸ್ಪೆಷಲ್ ಸಾಂಗ್‌ಗೆ ಸ್ಟೆಪ್ ಹಾಕಿದರೆ ಕೆರಿಯರ್‌ಗೆ ಪ್ರಾಬ್ಲಂ ಆಗುತ್ತೆ ಎನ್ನುವ ಫೀಲ್ ಇದೆ. ಆದರೆ ಇಂದು ಇದೆಲ್ಲಾ ಸುಳ್ಳಾಗಿದೆ. ಕತ್ರಿನಾ ಕೈಫ್, ಕರೀನಾ ಕಪೂರ್ ಮೊದಲಾದವರೆಲ್ಲರೂ ಒಂದು ಹಾಡಿನಲ್ಲಿ ಕಾಣಿಸಿಕೊಂಡ ಚಿತ್ರಗಳೂ ಇವೆ ಅಲ್ಲವೇ. ಹಾಗಾಗಿಯೇ ನಾನು ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳಲು ಯಾವುದೇ ಹಿಂದೇಟು ಹಾಕುವುದಿಲ್ಲ.
- ‘ಕೆಜಿಎಫ್’ ಬಗ್ಗೆ ಹೇಳುವುದಾದರೆ?
‘ಕೆಜಿಎಫ್’ ನನಗೆ ತುಂಬಾ ಖುಷಿ ಕೊಟ್ಟ ಕನ್ನಡ ಚಿತ್ರ. ಯಶ್ ಡೆಡಿಕೇಷನ್, ಪ್ರಶಾಂತ್ ಕೆಲಸ ಎಲ್ಲವೂ ಸೂಪರ್. ಒಂದು ಸಾಂಗ್‌ನಲ್ಲಿ ಕಾಣಿಸಿಕೊಂಡರೂ ಸಹಿತ ಇಡೀ ಚಿತ್ರತಂಡದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಕನ್ನಡದಲ್ಲಿ ಮುಂದೆ ಚಿತ್ರ ಮಾಡಬೇಕು ಎನ್ನುವ ನನ್ನ ಆಸೆ ಹೆಚ್ಚಿಸಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.