
ಚುವಾವಣೆ ಗೆದ್ದ ದಿನ ವಿಜಯ್ ಮನೆಗೆ ಬಂದು ಹೇಳಿದ್ದೇನು? ತಾಯಿ ಶೋಭಾ ಬಿಚ್ಚಿಟ್ಟ ಆ 'ಬಿಗ್ ಸೀಕ್ರೆಟ್' ಇಲ್ಲಿದೆ!
ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ಬೆಳ್ಳಿತೆರೆಯ ಮೇಲೆ 'ದಳಪತಿ'ಯಾಗಿ ಅಬ್ಬರಿಸುತ್ತಿದ್ದ ವಿಜಯ್ (Thalapathy Vijay), ಈಗ ತಮಿಳುನಾಡಿನ ಅಧಿಪತಿಯಾಗಿ ರಾಜ್ಯವನ್ನೇ ಆಳುತ್ತಿದ್ದಾರೆ. ಇಂದು ಈ ಜನನಾಯಕನ 52ನೇ ಹುಟ್ಟುಹಬ್ಬ! ಇಡೀ ತಮಿಳುನಾಡು ಹಬ್ಬದಂತೆ ಈ ದಿನವನ್ನು ಆಚರಿಸುತ್ತಿದೆ. ಆದರೆ, ಈ ಸಂಭ್ರಮದ ನಡುವೆ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಬಿಚ್ಚಿಟ್ಟಿರುವ ಒಂದು ಸೀಕ್ರೆಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಗೆದ್ದ ದಿನ ಮನೆಗೆ ಬಂದು ಅಪ್ಪನಿಗೆ ಹೇಳಿದ್ದೇನು?
ಸಿನಿಮಾಗಳಲ್ಲಿ ಸ್ಟೈಲಿಶ್ ಆಗಿ ಡೈಲಾಗ್ ಹೊಡೆಯುವ ವಿಜಯ್, ನಿಜ ಜೀವನದಲ್ಲಿ ತುಂಬಾ ಸರಳ ಮತ್ತು ಮಿತಭಾಷಿ. ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ, ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ದಿನ ವಿಜಯ್ ಮನೆಗೆ ಬಂದಾಗ ನಡೆದ ಘಟನೆಯನ್ನು ಅವರ ತಾಯಿ ನೆನಪಿಸಿಕೊಂಡಿದ್ದಾರೆ. "ವಿಜಯ್ ಮನೆಗೆ ಬಂದವನೇ ತನ್ನ ತಂದೆ ಎಸ್.ಎ. ಚಂದ್ರಶೇಖರ್ ಬಳಿ ಹೋಗಿ, 'ಅಪ್ಪಾ, ನಿಮ್ಮ ಆಸೆ ಈಡೇರಿದೆ' ಎಂದು ಹೇಳಿದನು. ಆ ಒಂದು ಮಾತು ಕೇಳಿದಾಗ ನಮ್ಮ ಕಣ್ಣಲ್ಲಿ ಆನಂದಬಾಷ್ಪ ಹರಿಯಿತು" ಎಂದು ಶೋಭಾ ಭಾವನಾತ್ಮಕವಾಗಿ ನುಡಿದಿದ್ದಾರೆ. ವಿಜಯ್ ಅವರ ಈ ಯಶಸ್ಸು ಕೇವಲ ಒಬ್ಬ ರಾಜಕಾರಣಿಯ ಗೆಲುವಲ್ಲ, ಅದು ಒಂದು ಕುಟುಂಬದ ದಶಕಗಳ ಕಾಲದ ಕನಸಿನ ಸಾಕಾರ!
ಮಗ ಮುಖ್ಯಮಂತ್ರಿಯಾದ ಖುಷಿಗೆ ತಾಯಿ ಶೋಭಾ ಏನು ಉಡುಗೊರೆ ನೀಡಿದ್ದಾರೆ ಗೊತ್ತಾ? ಅವರು ವಿಜಯ್‌ಗೆ ಒಂದು ವಿಶೇಷವಾದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. "ಮಗ ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಗೆ ಆತ ಮಗನೇ. ಆತನ ಈ ಗೆಲುವು ನಮ್ಮ ಇಡೀ ಕುಟುಂಬಕ್ಕೆ ಹೆಮ್ಮೆ ತಂದಿದೆ" ಎನ್ನುತ್ತಾರೆ ಅವರು.
ಯಶಸ್ಸಿನ ಹಿಂದೆ ತಂದೆಯ 'ಮಾಸ್ಟರ್ ಪ್ಲಾನ್':
ವಿಜಯ್ ಇಂದು ಮುಖ್ಯಮಂತ್ರಿ ಸ್ಥಾನಕ್ಕೇರಲು ಅವರ ತಂದೆ ಎಸ್.ಎ. ಚಂದ್ರಶೇಖರ್ (SAC) ಅವರ ಪಾತ್ರ ಬಹಳ ದೊಡ್ಡದಿದೆ. ವಿಜಯ್ ಕೇವಲ ನಟನಾಗಿ ಉಳಿಯಬಾರದು, ಜನರ ಸೇವಕನಾಗಬೇಕು ಎಂದು ಹದಿನೈದು ವರ್ಷಗಳ ಹಿಂದೆಯೇ ಕನಸು ಕಂಡವರು SAC. ವಿಜಯ್ ಅವರ ಅಭಿಮಾನಿ ಸಂಘಗಳನ್ನು ಒಂದು ವ್ಯವಸ್ಥಿತ ಜನಾಂದೋಲನವಾಗಿ ರೂಪಿಸಿದ್ದು ಇದೇ ತಂದೆ. ಸಿನಿಮಾಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ನೀಡುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ವಿಜಯ್ ಅವರಲ್ಲಿ ಬೆಳೆಸಿದ್ದೇ ಅವರ ತಂದೆ ಎನ್ನುವುದನ್ನು ಶೋಭಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
ಈ ಬಾರಿಯ ವಿಜಯ್ ಹುಟ್ಟುಹಬ್ಬ ಹಿಂದೆಂದಿಗಿಂತಲೂ ಸ್ಪೆಷಲ್. ಯಾಕೆಂದರೆ, ಇದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ. ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ವಿಜಯ್‌ಗೆ ಶುಭ ಕೋರುತ್ತಿದ್ದಾರೆ. ಟಿವಿಕೆ (TVK) ಕಾರ್ಯಕರ್ತರು ರಾಜ್ಯಾದ್ಯಂತ ಅನ್ನದಾನ, ರಕ್ತದಾನ ಶಿಬಿರಗಳನ್ನು ಆಯೋಜಿಸಿ ತಮ್ಮ ನಾಯಕನ ಮೇಲಿನ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ, ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡುತ್ತಿದ್ದ ವಿಜಯ್, ಈಗ ರಾಜಕೀಯದ ಅಖಾಡದಲ್ಲೂ ಮ್ಯಾಜಿಕ್ ಮಾಡಿ ತೋರಿಸಿದ್ದಾರೆ. ತಾಯಿಯ ಪ್ರೀತಿ, ತಂದೆಯ ಮಾರ್ಗದರ್ಶನ ಮತ್ತು ಕೋಟ್ಯಂತರ ಅಭಿಮಾನಿಗಳ ಹಾರೈಕೆಯೇ ಇಂದು ವಿಜಯ್ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ.
ತಮಿಳುನಾಡು ಸಿಎಂ, ನಟ ದಳಪತಿ ವಿಜಯ್ ಅವರಿಗೆ ಜಗತ್ತಿನಾದ್ಯಂತ ಇರುವ ಅಭಿಮಾನಿಗಳಿಂದ 'ಹ್ಯಾಪಿ ಬರ್ತ್‌ಡೇ ಸಿಎಂ ವಿಜಯ್' ಎಂದ ಶುಭಾಶಯಗಳು ಹರಿದುಬರುತ್ತಿವೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.