Muhurta: ಯಾರು ಯಾರಿಗೆ ಒಳ್ಳೇದು, ಕೆಟ್ಟದ್ದು ಮಾಡ್ತಾರೆ... ಕೆಎ-18ನಲ್ಲಿ ಆ ರಹಸ್ಯ ಬಿಚ್ಚಿಟ್ಟ ತನಿಷಾ ಕುಪ್ಪಂಡ!

Published : Jun 22, 2026, 05:13 PM IST
Tanisha Kuppanda

ಸಾರಾಂಶ

KA-18 Kannada Movie: ಶೀರ್ಷಿಕೆಯಿಂದಲೇ ಗಮನ ಸೆಳೆದ ‘ಕೆಎ-18’ ಚಿತ್ರಕ್ಕೆ ಮುಹೂರ್ತ ಆಗಿದೆ. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ ಅವರು ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

ಶೀರ್ಷಿಕೆಯಿಂದಲೇ ಗಮನ ಸೆಳೆದ ‘ಕೆಎ-18’ ಚಿತ್ರಕ್ಕೆ ಮುಹೂರ್ತ ಆಗಿದೆ. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ ಅವರು ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ನಟ ಮನೋಜ್‌ ಕ್ಯಾಮೆರಾ ಆನ್‌ ಮಾಡಿದರು. ಹಿರೇಮಗಳೂರಿನ ಎ.ಟಿ.ಎಂ.ಮಂಜು ನಿರ್ಮಾಣ ಮಾಡುವ ಜೊತೆಗೆ ನಾಯಕನಾಗಿ ನಟಿಸುತ್ತಿರುವ ಚಿತ್ರವಿದು. ಮೋಹನ್‌ ಚಿಕ್ಕಿ ಚಿತ್ರದ ನಿರ್ದೇಶಕರು. ಉತ್ತರಕಾಂಡ ಮೂಲದ ಸೋನಿಯಾ ರಾವುತ್ ಸಹ ನಿರ್ಮಾಣದ ಜೊತೆಗೆ ಒಂದು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಮೋಹನ್‌ ಚಿಕ್ಕಿ, ‘ಗೆಳೆಯ ನಿರ್ದೇಶಕ ಆರ್ಯ ಮಹೇಶ್ ಸಹಕಾರ ಎಂದಿಗೂ ಮರೆಯಲಾಗದು. ನಿರ್ಮಾಪಕರು ಹೇಳಿದ ಒಂದು ಏಳೆಯನ್ನು ಬಳಸಿಕೊಂಡು ಅದನ್ನು ವಿಸ್ತಾರ ಮಾಡಿಕೊಳ್ಳಲಾಗಿದೆ. ಚಿತ್ರವು ಎರಡು ಪಾತ್ರಗಳ ಸುತ್ತ ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಡೆಯುವ ಘಟನೆಯಲ್ಲಿ ನಾಲ್ಕೈದು ಎಲಿಮೆಂಟ್ಸ್ ಬರುತ್ತದೆ. ಚಿಕ್ಕಮಗಳೂರು ಸ್ಥಳದಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲು ಯೋಜನೆ ಹಾಕಲಾಗಿದೆ’ ಎಂದರು.

ನಟಿ ತನಿಷಾ ಕುಪ್ಪಂಡ, ಅಂಕಿತಾ ಹೆಸರಿನಲ್ಲಿ ಕಾಡು ದಾರಿಯಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಪಯಣಿಸುವಾಗ ಸಣ್ಣ ಪುಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಯಾರು ಯಾರಿಗೆ ಒಳ್ಳೇದು, ಕೆಟ್ಟದ್ದು ಮಾಡುತ್ತಾರೆ ಎಂಬುದನ್ನು ಹೇಳ ಹೊರಟಿದ್ದಾರೆ ಎಂದರು.

ರಕ್ಷಣೆ ಸಿಗುತ್ತದಾ?

ಶಾಲೆ ಕಾಲೇಜು ದಿನಗಳಿಂದಲೂ ನಾಟಕ ಪ್ರೇಮಿ. ಅಂದಿನಿಂದಲೇ ಸಿನಿಮಾ ಮಾಡಬೇಕೆಂಬ ಹುಚ್ಚು ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. 2000 ಇಸವಿಯಲ್ಲಿ ಅಪ್ಪನೊಂದಿಗೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಅಲ್ಲಿ ನೋಡಿದಂತ ಘಟನೆಯನ್ನು ನಿರ್ದೇಶಕರಿಗೆ ಹೇಳಿದೆ. ಈ ಸ್ಥಳ ಹಾಗೂ ಆ ಸ್ಥಳದ ಮಧ್ಯೆ ಮೂಲಭೂತ ಸೌಕರ್ಯವಿಲ್ಲದ ಹಾದಿಯಲ್ಲಿ ಮುಖ್ಯ ಕಾರಣವನ್ನು ಸಂಶೋಧನೆ ಮಾಡಲು ಹೋಗುತ್ತಿದ್ದಾಗ ಒಂದಷ್ಟು ಅಡಚಣೆಗಳು ಬರುತ್ತದೆ. ಕೊನೆಗೆ ಅದರಿಂದ ರಕ್ಷಣೆ ಸಿಗುತ್ತದಾ? ಇಲ್ಲವಾ ಎಂಬುದನ್ನು ಹೇಳ ಹೊರಟದ್ದೀವೆ. ಅಲ್ಲದೆ ಮೂಢನಂಬಿಕೆ ಅಂಶವನ್ನು ತೆಗೆದುಕೊಳ್ಳಲಾಗಿದೆ ಎಂದು ಎ.ಟಿ.ಎಂ.ಮಂಜು ಹೇಳಿದರು. ತನಿಷಾ ಕುಪ್ಪಂಡ, ದೀಪು, ವರ್ಧನ್, ವಿಜಿ, ಪೂಜಾ ಮುಖ್ಯ ಪಾತ್ರಧಾರಿಗಳು. ಮುಂಜಾನೆ ಮಂಜು ಕ್ಯಾಮೆರಾ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sathish Ninasam: ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾದ ನೀನಾಸಂ ಸತೀಶ್, 'ಅಯೋಗ್ಯ 2' ನಟನ ವಿರುದ್ಧ ಕ್ರಮ?
Trailer ಕಟ್ ಮಾಡಲು ಹೆದರಿದ ಸಿಂಪಲ್ ಸುನಿ, ಮಾಧವನ್‌ಗೂ ಅಚ್ಚರಿ: ‘ಮೋಡ ಕವಿದ ವಾತಾವರಣ’ದಲ್ಲಿ ಏನಿದೆ?