ಆಗಸ್ಟ್ 30 ಕ್ಕೆ ತೆರೆಗೆ ಬರಲಿದೆ ಸಾಹೋ | ಸಾಹೋ ಸಿನಿಮಾಗೆ 100 ಕೋಟಿ ಸಂಭಾವನೆ ಪಡೆದ್ರಾ ಪ್ರಭಾಸ್? ಎಂದಿಗಿಂತ ಕಡಿಮೆ ಸಂಭಾವನೆ ಇದಂತೆ!
ತೆಲುಗು ನಟ ಪ್ರಭಾಸ್ ಬಾಹುಬಲಿ ಸಕ್ಸಸ್ ನಂತರ ಇನ್ನೊಂದು ಬಿಗ್ ಬಜೆಟ್ ಸಿನಿಮಾ ಸಾಹೋಗೆ ಕೈ ಹಾಕಿದ್ದಾರೆ.
ತೆಲುಗು ಸೂಪರ್ ಸ್ಟಾರ್ ಎಂದರೆ ಕೇಳಬೇಕಾ? ಸಂಭಾವನೆ ಕೂಡಾ ಅಷ್ಟೇ ಇರುತ್ತದೆ. ಸಾಹೋ ಸಿನಿಮಾಗೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಬರೋಬ್ಬರಿ 100 ಕೋಟಿ ರೂ ಎನ್ನಲಾಗುತ್ತಿದೆ. ಇನ್ನೂ ಅಚ್ಚರಿ ಎಂದರೆ ಪ್ರಭಾಸ್ ಎಂದಿನ ಸಂಭಾವನೆಗಿಂತ ಇದು ಕಡಿಮೆಯಂತೆ! ಇದು ನಿಜವೇ ಆಗಿದ್ದರೆ ಪ್ರಭಾಸ್, ಸಲ್ಮಾನ್ ಖಾನ್, ರಜನೀಕಾಂತ್, ಶಾರೂಕ್ ಖಾನ್ ರನ್ನು ಹಿಂದಿಕ್ಕಿ ಅತೀ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಮೊದಲಿಗರಾಗುತ್ತಾರೆ.
ಆಹಾ..! ಪ್ರಭಾಸ್ ಮದ್ವೆಯಂತೆ! ಕನ್ಯೆ ಯಾರು ನೋಡುವಿರಂತೆ!
ಪ್ರಭಾಸ್ ಸಂಭಾವನೆ ಬಗ್ಗೆ ಸಾಹೋ ಟೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಹೋ ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂಗೆ ಆಗಿದ್ದರೆ ಆಗಸ್ಟ್ 15 ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಟೆಕ್ನಿಕಲ್ ಕಾರಣಗಳಿಂದಾಗಿ ಬರುವುದು ವಿಳಂಬವಾಗುತ್ತಿದೆ. ಆಗಸ್ಟ್ 30 ಕ್ಕೆ ರಿಲೀಸ್ ಆಗಲಿದೆ. ಸುಜೀತ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಪ್ರೇಮಿಗಳಿಗೆ ಲವ್ ಆ್ಯಂಥಮ್ ಕೊಟ್ಟ ಸಾಹೋ !
ಪ್ರಭಾಸ್ ಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದಾರೆ. ಅರುಣ್ ವಿಜಯ್, ನಿತಿನ್ ಮುಕೇಶ್, ಜಾಕಿ ಶ್ರಾಫ್, ಚುಂಕಿ ಪಾಂಡೆ ಈ ಚಿತ್ರದಲ್ಲಿ ನಟಿಸಿದ್ದಾರೆ.