ಸಾಹಸ ಪ್ರದರ್ಶನ ವೇಳೆ ತಮಿಳು ಸ್ಟಂಟ್ ಮಾಸ್ಟರ್‌ ರಾಜು ಸಾವು

Kannadaprabha News   | Kannada Prabha
Published : Jul 15, 2025, 05:13 AM IST
stunt master mohan raj

ಸಾರಾಂಶ

ನಟ ಆರ್ಯ ಅಭಿನಯದ ಸಿನಿಮಾವೊಂದರ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಕಾರು ಸ್ಟಂಟ್‌ ಮಾಡುವಾಗ ದುರಂತ ಸಂಭವಿಸಿ ಖ್ಯಾತ ಸ್ಟಂಟ್‌ ಮಾಸ್ಟರ್‌ ಮೋಹನ ರಾಜು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಚೆನ್ನೈ: ನಟ ಆರ್ಯ ಅಭಿನಯದ ಸಿನಿಮಾವೊಂದರ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಕಾರು ಸ್ಟಂಟ್‌ ಮಾಡುವಾಗ ದುರಂತ ಸಂಭವಿಸಿ ಖ್ಯಾತ ಸ್ಟಂಟ್‌ ಮಾಸ್ಟರ್‌ ಮೋಹನ ರಾಜು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.ಜು.13ರಂದು ನಾಗಪಟ್ಟಿಣಂನಲ್ಲಿ ನಿರ್ದೇಶಕ ಪಾ ರಜನೀತ್‌ ಅಭಿನಯದ ವೆಟ್ಟುವ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಕಾರನ್ನು ರ್‍ಯಾಂಪ್‌ ಮೇಲೆ ಹತ್ತಿಸಿ ಗಾಳಿಯಲ್ಲಿ ತೇಲಿಸಿ ಜಂಪ್‌ ಮಾಡಿಸುವ ದೃಶ್ಯ ಅದಾಗಿದ್ದು, ಎಸ್‌ಯುವಿ ಕಾರನ್ನು ರಾಜು ಚಲಾಯಿಸುತ್ತಿದ್ದರು.

ಆಗ ವೇಗವಾಗಿ ಬಂದ ಎಸ್‌ಯುವಿ, ರ‍್ಯಾಂಪ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ, ಅದು ಗಾಳಿಯಲ್ಲಿ ನಿಯಂತ್ರಣ ತಪ್ಪಿ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ ಹಾಗೂ ರಭಸವಾಗಿ ಉರುಳಿ ಬಿದ್ದಿದೆ. ಚಿತ್ರೀಕರಣ ವೀಕ್ಷಿಸುತ್ತಿದ್ದವರು ಓಡಿ ಹೋಗಿ ಧ್ವಂಸಗೊಂಡ ಕಾರನ್ನು ತಲುಪಿದಾಗ, ರಾಜು ತೀವ್ರವಾಗಿ ಗಾಯಗೊಂಡಿದ್ದು ಕಂಡುಬಂದಿದೆ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.

ಅವರು ಕಾರು ಪಲ್ಟಿ ಹೊಡೆಯುವ ವಿಡಿಯೋಗಳು ವೈರಲ್ ಆಗಿದ್ದು ಅದರಲ್ಲಿ ಸೆಟ್‌ನಲ್ಲಿದವರು ರಾಜುವನ್ನು ರಕ್ಷಿಸಲು ಓಡುತ್ತಿರುವುದು, ಅವರನ್ನು ಕಾರಿನಿಂದ ಹೊರ ತೆಗೆಯಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ. ನಟ ವಿಶಾಲ್‌ ಸೇರಿ ಸಿನಿರಂಗದ ಹಲವರು ಸಂತಾಪ ಸೂಚಿಸಿದ್ದಾರೆ.

  • ನಟ ಆರ್ಯ ಅಭಿನಯದ ಸಿನಿಮಾವೊಂದರ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಕಾರು ಸ್ಟಂಟ್‌ ಮಾಡುವಾಗ ದುರಂತ
  • ಖ್ಯಾತ ಸ್ಟಂಟ್‌ ಮಾಸ್ಟರ್‌ ಮೋಹನ ರಾಜು ಸಾವು
  • ಜು.13ರಂದು ನಾಗಪಟ್ಟಿಣಂನಲ್ಲಿ ನಿರ್ದೇಶಕ ಪಾ ರಜನೀತ್‌ ಅಭಿನಯದ ವೆಟ್ಟುವ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು
  • ಕಾರನ್ನು ರ್‍ಯಾಂಪ್‌ ಮೇಲೆ ಹತ್ತಿಸಿ ಗಾಳಿಯಲ್ಲಿ ತೇಲಿಸಿ ಜಂಪ್‌ ಮಾಡಿಸುವ ದೃಶ್ಯ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈ ಹಿಟ್ ಹಾಡಿಗೆ ನಡೆದದ್ದು ಬರೋಬ್ಬರಿ 16 ದಿನ ಶೂಟಿಂಗ್ , ರಕ್ತ ಹರಿದರೂ ನೃತ್ಯ ನಿಲ್ಲಿಸದ Aishwarya Rai
ಮಂಗಳೂರಿನಲ್ಲಿ ಕಟ್ಟಿದ 3 ಕೋಟಿ ಮನೆ ತಿಂಗಳಲ್ಲೇ ನಾಶ; ಮತ್ತೆ ಲಕ್ಷುರಿ ಮನೆ ಕಟ್ಟಿದ Madhyama Kutumba; ಖರ್ಚು?