
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಜೀವನದಲ್ಲಿ ಏನಾಗಿದೆ? ಅವಳ್ಯಾಕೆ ಗಂಡನಿಂದ ದೂರ ಇದ್ದಾಳೆ, ಗಂಡ ಬದುಕಿದ್ದಾನಾ ಎಂಬ ಪ್ರಶ್ನೆ ವೀಕ್ಷಕರಿಗೆ ಕಾಡುತ್ತಲೇ ಇತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸುಧಾಳ ಕಷ್ಟದ ಬದುಕು!
ತಾನು ಗೌತಮ್ ದಿವಾನ್ ತಂಗಿ, ದಿವಾನ್ ಕಂಪೆನಿ ಶೇರ್ ಹೋಲ್ಡರ್ ಎನ್ನೋದು ಸುಧಾಗೆ ಗೊತ್ತಿರಲಿಲ್ಲ. ತಾಯಿ ಜೊತೆಗೆ ಅವಳು ಬದುಕುತ್ತಿದ್ದಳು. ಅಷ್ಟೇ ಅಲ್ಲದೆ ಪುಟಾಣಿ ಮಗಳನ್ನು ಸಾಕಲು ಒದ್ದಾಡುತ್ತಿದ್ದಳು. ಆ ನಂತರ ಗೌತಮ್ ತಂಗಿ ಎನ್ನೋದು ಗೊತ್ತಾಗಿ ಅವಳೀಗ ತವರು ಮನೆಯಲ್ಲಿದ್ದಾಳೆ.
ಸೃಜನ್ ಕಂಡ್ರೆ ಲಕ್ಷ್ಮೀಗೂ ಇಷ್ಟ!
ಈಗ ತವರು ಮನೆಯಲ್ಲಿ ಸೃಜನ್ ಜೊತೆ ಸುಧಾಗೆ ಒಂದಷ್ಟು ಜಗಳ ಆಗುತ್ತಿತ್ತು. ಇವರಿಬ್ಬರು ಹಾವು-ಮುಂಗುಸಿ ಥರ ಕಿತ್ತಾಡುತ್ತಿದ್ದರು. ಸಚಿನ್ ಮಾಡಿದ್ದೆಲ್ಲವೂ ಸುಧಾಗೆ ತಪ್ಪಾಗಿ ಅರ್ಥ ಆಗುತ್ತಿತ್ತು. ಇನ್ನು ಸುಧಾ ಮಗಳು ಲಕ್ಷ್ಮೀಗೂ ಕೂಡ ಸೃಜನ್ ಅಂದ್ರೆ ತುಂಬ ಇಷ್ಟ. ಇನ್ನೊಂದು ಕಡೆ ಸುಧಾಗೆ ತಾನು ತನ್ನ ಬದುಕಿನ ಬಗ್ಗೆ ಏನು ನಿರ್ಧಾರ ತಗೋಬೇಕು ಎನ್ನೋದು ಕೂಡ ಗೊತ್ತಾಗಲಿಲ್ಲ.
ಸುಧಾ ಮನಸ್ಸಿನಲ್ಲಿ ಸೃಜನ್ ಹೆಸರು!
ಸೃಜನ್ ಬಗ್ಗೆ ಸುಧಾ ತನ್ನ ಮಗಳ ಬಳಿ ಒಂದಷ್ಟು ಪ್ರಶ್ನೆ ಕೇಳಿದ್ದಾಳೆ. “ಸೃಜನ್ ಅಂದ್ರೆ ಇಷ್ಟಾನಾ? ಸೃಜನ್ ಅಂಕಲ್ ನಿನಗೆ ಅಪ್ಪ ಆದರೆ ಓಕೆನಾ?” ಅಂತ ಅವಳು ಮಗಳ ಬಳಿ ಕೇಳಿದ್ದಾಳೆ. ಆಗ ಲಕ್ಷ್ಮೀ, “ನನ್ನ ಫ್ರೆಂಡ್ಸ್‌ಗೆ ಎಲ್ಲರಿಗೂ ಅಪ್ಪ ಇದ್ದಾರೆ, ನನಗೆ ಮಾತ್ರ ಇಲ್ಲ ಅಂತ ಬೇಜಾರು ಆಗಿತ್ತು. ಈ ವಿಷಯ ಹೇಳಿದ್ರೆ ನಿನಗೆ ಬೇಜಾರಾಗತ್ತೆ ಅಂತ ಸುಮ್ನಾಗಿದ್ದೆ. ಸೃಜನ್ ಅಂಕಲ್ ನನ್ನ ಅಪ್ಪ ಆದರೆ ನನಗೆ ತುಂಬ ಖುಷಿ” ಎಂದು ಹೇಳಿದ್ದಳು. ಈ ಮಾತು ಕೇಳಿ ಸುಧಾ ಕೂಡ “ಮಗಳಿಗೋಸ್ಕರ ಆದರೂ ಕೂಡ ನಾನು ಮದುವೆ ಆಗಬಹುದಾ?” ಅಂತ ಅನಿಸಿದೆ.
ನಟರಾಜ್‌ನ ಎಂಟ್ರಿ!
ಹೀಗಿರುವಾಗ ಸುಧಾ ಬದುಕಿಗೆ ನಟರಾಜ್ ಎಂಟ್ರಿಯಾಗಿದೆ. “ಕೋಳಿಗೂಡಿನಲ್ಲಿದ್ದೆ, ಈಗ ಅರಮನೆಯಲ್ಲಿ ಬದುಕುತ್ತಿದ್ದೀಯಾ. ನಿನಗೆ ಮಗಳ ಅಗತ್ಯ ಇಲ್ಲ. ನನ್ನ ಮಗಳನ್ನು ನನಗೆ ಕೊಡು” ಎಂದು ಆವಾಜ್ ಹಾಕಿ ಹೋಗಿದ್ದಾನೆ. ನಟರಾಜ್‌ನನ್ನು ನೋಡಿ ಲಕ್ಷ್ಮೀ ಬೆಚ್ಚಿ ಬಿದ್ದಿದ್ದಾಳೆ. ನಟರಾಜ್ ಎಂಟ್ರಿ ಸುಧಾಗೆ ಭಯಮೂಡಿಸಿದೆ.
ಈಗ ಇರುವ ಪ್ರಶ್ನೆ ಏನು?
ಹೀಗಿರುವಾಗ ಸುಧಾಳ ಗಂಡ ನಟರಾಜ್ ಕೂಡ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಅವನು ಗೌತಮ್ ಮುಂದೆ ಏನು ಹೇಳ್ತಾನೆ? ಗೌತಮ್ ಅವನನ್ನು ನಂಬ್ತಾನಾ ಎಂಬ ಪ್ರಶ್ನೆಯೂ ಎದುರಾಗಿದೆ. ಇನ್ನೊಂದು ಕಡೆ ಸುಧಾಗೆ ಇಷ್ಟು ವರ್ಷ ತನ್ನ ಜೀವನದಲ್ಲಿ ಏನಾಯಿತು ಎಂದು ಎಲ್ಲರ ಮುಂದೆ ಹೇಳಿಕೊಳ್ಳೋ ಅವಕಾಶ ಸಿಗತ್ತಾ ಎಂದು ಕಾದು ನೋಡಬೇಕಿದೆ.
ನಟರಾಜ್‌ನ ಜೊತೆ ಸುಧಾಳನ್ನು ಗೌತಮ್ ಕಳಿಸಿಕೊಡ್ತಾನಾ? ನಟರಾಜ್‌ನನ್ನು ನಂಬುತ್ತಾನಾ ಎಂದು ಕಾದು ನೋಡಬೇಕಿದೆ.
ಕಥೆ ಏನು?
ಗೌತಮ್ ಹಾಗೂ ಭೂಮಿಕಾ ಮದುವೆಯಾಗಿದೆ. ಗೌತಮ್‌ಗೆ ಸುಧಾ ಎಂಬ ತಂಗಿ ಇದ್ದಾಳೆ. ಮಲತಾಯಿ ಶಕುಂತಲಾಳ ಕುತಂತ್ರದಿಂದ ಸುಧಾ ತನ್ನ ಕುಟುಂಬದಿಂದ ದೂರ ಇರುವಂತೆ ಆಯ್ತು. ಈಗ ಸುಧಾ ತನ್ನ ತವರು ಮನೆ ಸೇರಿದ್ದಾಳೆ. ಸುಧಾ ಲೈಫ್ ಏನಾಯಿತು ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಭೂಮಿ- ನಟಿ ಛಾಯಾ ಸಿಂಗ್
ಗೌತಮ್ ದಿವಾನ್- ನಟ ರಾಜೇಶ್ ನಟರಂಗ
ಜಯದೇವ್- ನಟ ರಾಣವ್
ಮಲ್ಲಿ- ನಟಿ ಅನ್ವಿತಾ ಸಾಗರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.