ತಾಪ್ಸಿ ಪನ್ನು ಶೀಘ್ರದಲ್ಲಿ ಕನ್ನಡಕ್ಕೆ

By Kannadaprabha NewsFirst Published 11, Sep 2018, 10:42 AM IST
Highlights

ಈಗೀಗ ಬಾಲಿವುಡ್ ಮಂದಿ ಕನ್ನಡದ ಕಡೆ ಮುಖ ಮಾಡುವುದು ಹೆಚ್ಚಾಗಿದೆ. ಈ ಸಾಲಿಗೆ ಈಗ ಸೇರಲು ಬಯಸುತ್ತಿರುವ ತಾರೆ ತಾಪ್ಸಿ ಪನ್ನು. ಸದ್ಯ ‘ಮನ್‌ಮರ್ಜಿಯಾನ್’ ಸಿನಿಮಾದ ಪ್ರಮೋಷನ್‌ನಲ್ಲಿ ತೊಡಗಿರುವ ಈ ಬೆಡಗಿಗೆ ಮತ್ತೊಂದು ಆಸೆ ಇದೆ. 

 ಅದೇನು ಗೊತ್ತೇ, ವರ್ಷಕ್ಕೆ ಕನಿಷ್ಟ ಒಂದಾದರೂ ಸೌತ್ ಇಂಡಿಯಾದ ಸಿನಿಮಾಗಳಲ್ಲಿ ನಟಿಸುವುದು. ಯಾಕೆ ತಾಪ್ಸಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಇಲ್ಲವೇ? ಯಾಕೆ ಸೌತ್ ಇಂಡಿಯನ್ ಸಿನಿಮಾ ಕಡೆ ಮುಖ ಮಾಡುತ್ತಿದ್ದಾರೆ ಎಂದು ಕೇಳಿದರೆ ಅಲ್ಲಿಯೂ ಕೂಡ ತಾಪ್ಸಿಯದೊಂದು ಸಣ್ಣ ಸ್ವಾರ್ಥ ಅಡಗಿದೆ. ಅದೇನೆಂದರೆ ತಾಪ್ಸಿ ಹೇಳುತ್ತಾರೆ ‘ಕೇವಲ ಬಾಲಿವುಡ್, ಹಿಂದಿ ಸಿನಿಮಾಕಷ್ಟೇ ನನ್ನ ಪ್ರತಿಭೆ ಸೀಮಿತವಾಗಬಾರದು. ಸೌತ್ ಇಂಡಿಯಾದಲ್ಲಿ ನನ್ನ ಅಭಿಮಾನಿಗಳು ತುಂಬಾ ಇದ್ದಾರೆ. ಅವರಿಗಾಗಿ ಮತ್ತು ನನ್ನ ವೈಯಕ್ತಿಕ ಬೆಳವಣಿಗೆಗಾಗಿ ವರ್ಷಕ್ಕೆ ಒಂದಾದರೂ ಸೌತ್ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವೆ. ಇದರಲ್ಲಿ ತಮಿಳು, ತೆಲುಗು, ಕನ್ನಡ, ಮಲೆಯಾಳಿ ಎಲ್ಲವೂ ಮಸೇರಿರುತ್ತವೆ. ಈ ಬಗ್ಗೆ ನನ್ನ ಮ್ಯಾನೇಜರ್‌ಗಳಿಗೂ ತಿಳಿಸಿದ್ದೇನೆ’ ಎಂದು. ಹಾಗಾದರೆ ಮುಂದಿನ ಮೂರ‌್ನಾಲ್ಕು ವರ್ಷಗಳಲ್ಲಿ ತಾಪ್ಸಿ ಕನ್ನಡದ ಚಿತ್ರಕ್ಕೆ ಬಣ್ಣ ಹಚ್ಚಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

‘ಕೇವಲ ಬಾಲಿವುಡ್, ಹಿಂದಿ ಸಿನಿಮಾಕಷ್ಟೇ ನನ್ನ ಪ್ರತಿಭೆ ಸೀಮಿತವಾಗಬಾರದು. ಸೌತ್ ಇಂಡಿಯಾದಲ್ಲಿ ನನ್ನ ಅಭಿಮಾನಿಗಳು ತುಂಬಾ ಇದ್ದಾರೆ’ ತಾಪ್ಸಿ ಪನ್ನು

Last Updated 19, Sep 2018, 9:22 AM IST