ಸುಶಾಂತ್ ಹೆಸರು ಹೇಳಿದ್ದಕ್ಕೆ ಕುಟುಂಬಸ್ಥರಲ್ಲಿ ಕ್ಷಮೆ ಕೇಳಿದ ನಟಿ ಸ್ವರಾ ಭಾಸ್ಕರ್..!

By Suvarna News  |  First Published Jul 22, 2020, 3:29 PM IST

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ನಂತರ ಭಾರೀ ಚರ್ಚೆಯಾಗುತ್ತಿರುವ ಬಾಲಿವುಡ್ ನೆಪೊಟಿಸಂ ವಿಚಾರವಾಗಿ ಸ್ವರಾ ಭಾಸ್ಕರ್, ತಾಪ್ಸಿ ಪನ್ನು, ರಿಚಾ ಚಡ್ಡಾ, ಕಂಗನಾ ಹೆಸರು ಕೇಳಿ ಬರುತ್ತಲೇ ಇದೆ. ಇವರೆಲ್ಲದ ಹೆಸರಿನ ಜೊತೆ ಟ್ವೀಟ್ ದಾಳಿಯಲ್ಲಿ ಸುಶಾಂತ್ ಹೆಸರೂ ಕೆಳಿ ಬರ್ತಿದೆ. ಈ ಬಗ್ಗೆ ನಟಿ ಸ್ವರಾ ಭಾಸ್ಕರ್ ಸುಶಾಂತ್ ಕುಟುಂಬಸ್ಥರಿಗೆ ಕ್ಷಮೆ ಕೇಳಿದ್ದಾರೆ.


ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ನಂತರ ಭಾರೀ ಚರ್ಚೆಯಾಗುತ್ತಿರುವ ಬಾಲಿವುಡ್ ನೆಪೊಟಿಸಂ ವಿಚಾರವಾಗಿ ಸ್ವರಾ ಭಾಸ್ಕರ್, ತಾಪ್ಸಿ ಪನ್ನು, ರಿಚಾ ಚಡ್ಡಾ, ಕಂಗನಾ ಹೆಸರು ಕೇಳಿ ಬರುತ್ತಲೇ ಇದೆ.

ಇವರೆಲ್ಲದ ಹೆಸರಿನ ಜೊತೆ ಟ್ವೀಟ್ ದಾಳಿಯಲ್ಲಿ ಸುಶಾಂತ್ ಹೆಸರೂ ಕೇಳಿ ಬರ್ತಿದೆ. ಈ ಬಗ್ಗೆ ನಟಿ ಸ್ವರಾ ಭಾಸ್ಕರ್ ಸುಶಾಂತ್ ಕುಟುಂಬಸ್ಥರಿಗೆ ಕ್ಷಮೆ ಕೇಳಿದ್ದಾರೆ. ಹಲವು ದಿನಗಳಿಂದ ನಡೆಯುತ್ತಿದ್ದ ಆನ್‌ಲೈನ್‌ ಟ್ವೀಟ್ ವಾರ್‌ನಲ್ಲಿ ಸುಶಾಂತ್ ಹೆಸರು ಎಳೆದಿದ್ದಕ್ಕಾಗಿ ಕುಟುಂಬಸ್ಥರ ಕ್ಷಮೆ ಕೋರಿದ್ದಾರೆ ನಟಿ ಸ್ವರಾ ಭಾಸ್ಕರ್.

Tap to resize

Latest Videos

ಹಾಗೇ ಎಲ್ಲರೂ ಸುಶಾಂತ್ ಕುಟುಂಬಸ್ಥರಲ್ಲಿ ಕ್ಷಮೆ ಕೇಳಬೇಕೆಂದು ಅವರು ತಮ್ಮ ಸಹುದ್ಯೋಗಿಗಳಿಗೆ ಹೇಳಿದ್ದಾರೆ. ನೆಪೊಟಿಸಂ ಕುರಿತ ಭಾರೀ ಬಿಸಿ ಬಿಸಿ ಚರ್ಚೆಯಲ್ಲಿ ಸುಶಾಂತ್ ಹೆಸರೂ ಕೇಳಿ ಬರುತ್ತಿತ್ತು. ಸುಶಾಂತ್‌ ಸ್ಮರಣೆಯನ್ನು ನೆನಪಿಸಬೇಕಾದ ಕ್ಷಣ ಎಂದೂ ಹೇಳಿದ್ದಾರೆ.

ಸುಶಾಂತ್ ಕುಟುಂಬಸ್ಥರ ಜೊತೆ ನಾವೆಲ್ಲರೂ ಕ್ಷಮೆ ಕೇಳಬೇಕು. ದಿಲ್‌ ಬಿಚಾರ ಹಿಟ್ ಆಗುತ್ತಿದ್ದು, ಪ್ರತಿ ಚರ್ಚೆಯಲ್ಲಿಯೂ ನಟನ ಹೆಸರು ಕೇಳಿ ಬರುತ್ತಿದೆ ಎಂದಿದ್ದಾರೆ. ಸುಶಾಂತ್ ಪುಣ್ಯ ಸ್ಮರಣೆಯ ಸಮಯ. ಇಂತಹ ಕೆಲವೊಂದು ವಿಚಾರ ಮರೆತು ಎಲ್ಲರ ಕಡೆಯೂ ಕರುಣೆಯಿಂದಿರಬೇಕೆಂದು ನಟಿ ಹೇಳಿದ್ದಾರೆ.

ಕರಣ್‌- ಆಲಿಯಾ ಭಟ್ ಪರ ನಿಂತ ಸ್ವರಾ ಭಾಸ್ಕರ್; ಸುಶಾಂತ್ ಡೆತ್ ನೋಟ್ ಬರ್ದಿದ್ನಾ?

ಕಂಗನಾ ರಣಾವತ್ ಸ್ವರಾ, ತಾಪ್ಸಿ ಹಾಗೂ ರಿಚಾ ಅವರನ್ನು ಬಿ ಗ್ರೇಡ್ ನಟಿಯರು ಎಂದು ಕರೆಯೋ ಮೂಲಕ ನಟಿಯರ ಮಧ್ಯೆ ಟ್ವಿಟರ್ ವಾರ್ ಶುರುವಾಗಿತ್ತು. ಒಳಗಿನವರು, ಹೊರಗಿನವರು, ಬಾಲಿವುಡ್ ನೆಪೊಸಿಸಂ ಬಗ್ಗೆ ಕಂಗನಾ ಸತತವಾಗಿ ಮಾತನಾಡುತ್ತಲೇ ಇದ್ದಾರೆ.

ಇನ್ನೂ ಬಾಲಿವುಡ್‌ನಲ್ಲಿ ಬೆಳೆಯುತ್ತಿರುವ ನಟಿಯರು ತಮ್ಮ ಮೇಲೆ ಜವಾಬ್ದಾರಿ ಇರುವುದರಿಂದಲೇ ನೆಪೊಟಿಸಂ ವಿಚಾರವಾಗಿ ತನಗೆ ಬೆಂಬಲಿಸುತ್ತಿಲ್ಲವೆಂದು ನಟಿ ಕಂಗನಾ ಆರೋಪಿಸಿದ್ದರು.

click me!