ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ಟಾಪ್ ನಟಿ, ಬಹು ಬೇಡಿಕೆಯಲ್ಲಿರುವ ಚೆಲುವೆ ಸಿನಿಮಾಗೆ ಕೇಳೋ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೆ. ನಟ ಪ್ರಭಾಸ್ ಜೊತೆ ನಟಿಸೋಕೆ ದೀಪಿಕಾ ಕೇಳಿದ ಮೊತ್ತ ಎಷ್ಟು..? ಇಲ್ಲಿ ಓದಿ.
ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ಟಾಪ್ ನಟಿ, ಬಹು ಬೇಡಿಕೆಯಲ್ಲಿರುವ ಚೆಲುವೆ ಸಿನಿಮಾಗೆ ಕೇಳೋ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೆ. ನಟ ಪ್ರಭಾಸ್ ಜೊತೆ ನಟಿಸೋಕೆ ದೀಪಿಕಾ ಕೇಳಿದ ಮೊತ್ತ ನಟಿಯರಿಗೆ ನೀಡುವ ಅತ್ಯಧಿಕ ಸಂಭಾವನೆಯಾಗಿ ದಾಖಲೆ ಮಾಡಲಿದೆ.
ಪ್ರಭಾಸ್ ಜೊತೆ ಹಿರೋಯಿನ್ ಆಗಿ ದೀಪಿಕಾ ವರನ್ನು ತೆರೆಯ ಮೇಲೆ ತರುವುದು ಸಲುಭದ ಕೆಲಸವಲ್ಲ. ಪ್ರಿಯಾಂಕ ದತ್ತಾ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ದೀಪಿಕಾ ಪ್ರಭಾಸ್ ಜೋಡಿಯಾಗಿ ನಟಿಸಲಿದ್ದಾರೆ.
ಬಾಹುಬಲಿ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ ದೀಪಿಕಾ ಪಡುಕೋಣೆ
ಸಂಭಾವನೆ ವಿಚಾರದಲ್ಲಿ ನಿರ್ಮಾಪಕರಿಗೆ ಈ ನಟಿಯನ್ನು ಸಿನಿಮಾಗೆ ತರೋಕಾಗಲ್ಲ ಎನಿಸಿದ್ರೂ, , ಸ್ವತಃ ದೀಪಿಕಾ ಅವರೇ ಒಪ್ಪಿಕೊಳ್ಳುವಂತಹ ಮೊತ್ತ ಫೈನಲ್ ಮಾಡಿದ್ದಾರೆ ನಿರ್ಮಾಪಕರು.
ಸಿನಿಮಾದ ಹೀರೋಗೆ ನೀಡಲಾಗುವ ಅಷ್ಟೇ ಸಂಭಾವನೆಯನ್ನು ದೀಪಿಕಾ ಅವರೂ ಪಡೆಯುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಸಂಭಾವನೆ ನೀಡುವಲ್ಲಿ ಉಂಟಾಗುವ ಲಿಂಗ ಅಸಮಾನತೆಯನ್ನೂ ಮೀರಿ ಬೆಳೆದಿದ್ದಾರೆ ದೀಪಿಕಾ.
ಕೊನೆಗೂ ಒಂದಾದ ದೀಪಿಕಾ ಪಡುಕೋಣೆ- ಪ್ರಭಾಸ್: ಪ್ಯಾನ್ ಇಂಡಿಯಾ ಸಿನಿಮಾ ಹೆಸರೇನು?
ಬಾಹುಬಲಿ ನಟ ಪ್ರಭಾಸ್‌ಗೆ ಸಮನಾಗಿ ದೀಪಿಕಾಗೆ ಸಂಭಾವನೆ ಇಲ್ಲದಿದ್ದರೂ, ಮೂಲಗಳ ಪ್ರಕಾರ ನಟಿಗೆ ಸುಮಾರು 20 ಕೋಟಿ ರೂಪಾಯಿ ಸಂಭಾವನೆ ಫಿಕ್ಸ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಪ್ರಭಾಸ್ ಪಡೆಯುತ್ತಿರೋ ಸಂಭಾವನೆ ಬರೋಬ್ಬರಿ 50 ಕೋಟಿ ರೂಪಾಯಿ ಹತ್ತಿರ.
ಇನ್ನೂ ಕುತೂಹಲದ ವಿಷಯವೇನೆಂದರೆ ಪ್ರಭಾಸ್ ಸಿನಿಮಾದಲ್ಲಿ ದೀಪಿಕಾ ಅವರದ್ದು ಬಹಳ ಮುಖ್ಯ ಪಾತ್ರವೇನಲ್ಲ. ಆದರೆ ಈಗ ಸಂಭಾವನೆ ಮತ್ತು ದೀಪಿಕಾ ಅವರ ಖ್ಯಾತಿಗನುಗುಣವಾಗಿ ಪಾತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.