Govinda: 'ಹೀರೋಗಳಿಗೆ ಇದೆಲ್ಲಾ ಕಾಮನ್'..: ಗಂಡನ ಅಫೇರ್‌ಗಳ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪತ್ನಿ ಸುನಿತಾ!

Published : Jun 28, 2026, 05:17 PM IST
Govinda

ಸಾರಾಂಶ

Sunita Ahuja Interview: ರಿಯಾಲಿಟಿ ಶೋ 'ಲಾಕ್ ಅಪ್'ನಲ್ಲಿ ಗೋವಿಂದ ಪತ್ನಿ ಸುನಿತಾ ಅಹುಜಾ, ತಮ್ಮ ಪತಿಯ ಅಫೇರ್‌ಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಬಿಂದಾಸ್ ಮಾತುಗಳಿಗೆ ಫೇಮಸ್ ಆಗಿರೋ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ, ಜೂನ್ 27ರಂದು 'ಲಾಕ್ ಅಪ್: ಸಚ್ ಯಾ ಸಜಾ' ಶೋಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನೇರ ನುಡಿ ಹಾಗೂ ಲವಲವಿಕೆಯ ವ್ಯಕ್ತಿತ್ವದಿಂದ ಅವರು ಈಗಾಗಲೇ ಜನರ ಮನಸ್ಸು ಗೆದ್ದಿದ್ದಾರೆ. ಶೋಗೆ ಬಂದ ಬೆನ್ನಲ್ಲೇ, ತಮ್ಮ ಪತಿ ಚಿಚಿ ಅಲಿಯಾಸ್ ಗೋವಿಂದ ಅವರ ಅಫೇರ್‌ಗಳ ಬಗ್ಗೆ ಸುನಿತಾ ಮಾತನಾಡಿದ್ದಾರೆ. ಕೆಲವರು ಇದನ್ನು ವ್ಯಂಗ್ಯ ಅಂದರೆ, ಇನ್ನು ಕೆಲವರು ಸುನಿತಾ ಹೆಚ್ಚು ಮಾತನಾಡುತ್ತಿದ್ದಾರೆ ಎಂದರು. ಅಸಲಿಗೆ ಅವರು ಹೇಳಿದ್ದೇನು ಅಂತ ನೀವೇ ನೋಡಿ.

ಗೋವಿಂದ ಅಫೇರ್‌ಗಳ ಬಗ್ಗೆ ಸುನಿತಾ ಮಾತು

ಶೋನಲ್ಲಿ ಸುನಿತಾ ಬಗ್ಗೆ ಬಂದಿದ್ದ ಒಂದು ಹೆಡ್‌ಲೈನ್ ಓದಲಾಯ್ತು. "ನನಗೆ ಗೋವಿಂದನಂತ ಗಂಡ ಬೇಡ, ಮಗ ಬೇಕು" ಅನ್ನೋದು ಆ ಹೆಡ್‌ಲೈನ್ ಆಗಿತ್ತು. ಇದನ್ನು ವಿವರಿಸಿದ ಸುನಿತಾ, "ಪ್ರೀತಿಯಲ್ಲಿದ್ದಾಗ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಜೀವನದಲ್ಲಿ ತುಂಬಾ ಅಫೇರ್‌ಗಳನ್ನು ಮಾಡಿಕೊಂಡಿದ್ದರು. ಅದೂ ಅಲ್ಲದೆ, ಹೀರೋ-ಹೀರೋಯಿನ್‌ಗಳ ಮಧ್ಯೆ ಇದೆಲ್ಲಾ ಇದ್ದಿದ್ದೇ. ಇಷ್ಟು ವರ್ಷ ಅವರ ಜೊತೆ ನಾನು ನಿಂತಿದ್ದೇನೆ. ನನಗೆ ಅವರ ಥರದ ಮಗ ಬೇಕು ಅಂತ ಅನಿಸುತ್ತೆ" ಎಂದು ಹೇಳಿದ್ದಾರೆ.

ಗೋವಿಂದ ಶೂಟ್ ಮಾಡಿಕೊಂಡಿದ್ದ ಘಟನೆ

ಗೋವಿಂದ ಆಕಸ್ಮಿಕವಾಗಿ ಕಾಲಿಗೆ ಗುಂಡು ಹಾರಿಸಿಕೊಂಡ ಘಟನೆ ಬಗ್ಗೆಯೂ ಸುನಿತಾ ಮಾತನಾಡಿದ್ದಾರೆ. "ಕೇಳಿಸಿಕೊ, ಜೀವನದಲ್ಲಿ ಯಾರಾದ್ರೂ ಬಂದಾಗ ಮಾತ್ರ ಮೊಣಕಾಲಿಗೆ ಗುಂಡು ತಾಗೋದು. ಆ ವಿಷಯದಲ್ಲಿ ನಾನು ಸುಳ್ಳು ಹೇಳಿಲ್ಲ. ನಾನೇ ಸತ್ಯ. ಆಗ ನಾನು ಬಾಂಬೆಯಲ್ಲೇ ಇರಲಿಲ್ಲ, ಆದರೂ ನಾನೇ ಹೊಡೆದೆ ಅಂತ ಎಷ್ಟೋ ಜನ ಅಂದರು. ನನ್ನ ಗುರಿ ಯಾವತ್ತೂ ತಪ್ಪಲ್ಲ" ಎಂದು ಸುನಿತಾ ಹೇಳಿದ್ದಾರೆ.

'ಲಾಕ್ ಅಪ್ ಸೀಸನ್ 2' ಬಗ್ಗೆ

ಫರಾ ಖಾನ್ ಮತ್ತು ರಿತೇಶ್ ದೇಶಮುಖ್ 'ಲಾಕ್ ಅಪ್ ಸೀಸನ್ 2' ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ರಾಮ್ ಕಪೂರ್, ಧೀರಜ್ ಧೂಪರ್, ಹರ್ಷದ್ ಚೋಪ್ಡಾ, ಶಿವಾಂಗಿ ಜೋಶಿ, ಶ್ರೇಯಾ ಕಲ್ರಾ, ಯೋಗೇಶ್ ರಾವತ್, ಆಕಾಂಕ್ಷಾ ಚೌಧರಿ ಸೇರಿದಂತೆ ಹಲವು ಸ್ಪರ್ಧಿಗಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Samantha: ಗರ್ಭಿಣಿಯಾಗಿದ್ದರೂ ಶೂಟಿಂಗ್ ನಿಲ್ಲಿಸಲಿಲ್ಲ ಸಮಂತಾ: ಸಿಕ್‌ನೆಸ್‌ನಲ್ಲೇ ಹೈ-ಎನರ್ಜಿ ಹಾಡಿಗೆ ಡ್ಯಾನ್ಸ್
Nivin Pauly-Alphonse Puthren: 10 ವರ್ಷದ ಬಳಿಕ ಮತ್ತೆ ಒಂದಾದ 'ಪ್ರೇಮಂ' ಜೋಡಿ; ಆಲ್ಫೋನ್ಸ್ ಪುತ್ರೆನ್ 'ವಿಜಯಂ' ಚಿತ್ರಕ್ಕೆ ನಿವಿನ್‌ ಪೌಲಿ ಹೀರೋ!