
ಸೆಲೆಬ್ರಿಟಿಗಳೆಂದ ಮೇಲೆ ಅವರ ಫ್ಯಾನ್ಸ್ ಪೇಜ್ ಕಾಮನ್. ಆದರೆ ಅವರದ್ದೇ ವೈಯಕ್ತಿಕ ಖಾತೆಯಂತೆ ಪ್ರೊಫೈಲ್ ಸೃಷ್ಟಿಯಾಗುವುದನ್ನು ಎಲ್ಲರೂ ವಿರೋಧಿಸುತ್ತಾರೆ. ಈ ಬಗ್ಗೆ ಈಗಾಗಲೇ ಹಲವು ಸಿನಿ ತಾರೆಯರು ಮಾತನಾಡಿದ್ದಾರೆ. ಆದರೆ ಇದೇ ಮೊದಲಿಗೆ ಸುಮಲತಾ ಅಂಬರೀಷ್ ಎಫ್‌ಬಿ ಫೇಕ್ ಅಕೌಂಟ್ ವಿಚಾರವನ್ನು ಸಿಕ್ಕಾಪಟ್ಟೆ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ.
ಪ್ರತಿಯೊಬ್ಬರ ಮೆಸೇಜ್, ಪೋಸ್ಟ್ ಹಾಗೂ ವಿಶ್ ಎಲ್ಲವಕ್ಕೂ ಖುಷ್ ಖುಷಿಯಾಗಿಯೇ ಸ್ಪಂದಿಸುತ್ತಾರೆ ಸುಮಲತಾ. ಆದರೆ, ಫೇಕ್ ಅಕೌಂಟ್ ಬಗ್ಗೆ ಅತ್ಯಂತ ದುಃಖ ವ್ಯಕ್ತಪಡಿಸಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿಈ ಬಗ್ಗೆ ಬರೆದು ಕೊಂಡಿದ್ದಾರೆ.
ಸುಮಲತಾ - ಅಂಬರೀಶ್ ಪ್ರೇಮ್ ಕಹಾನಿ...
'ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಇರುವುದನ್ನು ನಾನು ಈಗಷ್ಟೇ ಗಮನಿಸಿದೆ. ಅದೂ ನಾನೇ ಫೋಟೋ ಪೋಸ್ಟ್ ಮಾಡಿ ಬಳಸುತ್ತಿರುವ ರೀತಿಯಲ್ಲಿದೆ. ನಿಮಗೆಲ್ಲ ಇದರ ಬಗ್ಗೆ ತಿಳಿಸಬೇಕಾಗಿತ್ತು. ದಯವಿಟ್ಟು ಇಂಥ ಖಾತೆಗಳಿಂದ ಬರುವ ಮೆಸೇಜ್‌ಗೆ ರಿಪ್ಲೈ ಮಾಡುವುದು ಅಥವಾ ರಿಕ್ವೆಸ್ಟ್ ಒಪ್ಪಿಕೊಳ್ಳುವುದನ್ನು ಮಾಡಬೇಡಿ...’ ಎಂದು ಫಾಲೋಯರ್ಸ್ ಅನ್ನು ಆಗ್ರಹಿಸಿದ್ದಾರೆ.
ಸೋಷಿಯಲ್ ಮಿಡಿಯದಲ್ಲಿರುವ ಪ್ರತಿಯೊಂದು ಅಕೌಂಟ್‌ನಲ್ಲಿಯೂ ಸುಮಲತಾ, ಅಂಬರೀಷ್ ಅವರದ್ದೇ ಫೋಟೋ ಹಾಕಿಕೊಂಡಿದ್ದಾರೆ.
ಅಂಬಿ ಕೊಟ್ಟ ಈ ತೊಟ್ಟಿಲಲ್ಲೇ ಯಶ್ ಮಗಳು ಬೆಳೆಯುತ್ತಾಳೆ; ಇಲ್ಲಿದೆ ಫೋಟೋ
ಅಂಬರೀಷ್ ನವೆಂಬರ್‌ನಲ್ಲಿ ಕೊನೆಯುಸಿರೆಳೆದಿದ್ದು, ಈ ದುಃಖದಿಂದ ಹೊರ ಬರಲು ಸುಮಲತಾರಿಗಿನ್ನೂ ಸಾಧ್ಯವಾಗಿಲ್ಲ. ಪತಿಯ ನೆನಪಿನಲ್ಲಿಯೇ ಇರುವ ಅವರು, ತಮ್ಮೆಲ್ಲಾ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿಯೂ ರೆಬೆಲ್ ಸ್ಟಾರ್ ಹೊಳೆಯುತ್ತಿರುವಂಥ ಪೋಟೋಗಳನ್ನೇ ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.