
Sumalatha Ambareesh post in Instagram-letter to Yash after watched his Toxic movie, Appreciated Rocking Star Yash performance and personality-ಟಾಕ್ಸಿಕ್ ಸಿನಿಮಾ ನೋಡಿ ಮೆಚ್ಚಿದ ಸುಮಲತಾ ಅಂಬರೀಷ್, ಯಶ್ ಬಗ್ಗೆ ಮಾಡಿರುವ ಪೋಸ್ಟ್‌ನಲ್ಲಿ ಏನಿದೆ?
ಸದ್ಯಕ್ಕೆ ಕರ್ನಾಟಕ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಕನ್ನಡದ ನಟ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ್ದೇ ಸದ್ದು ಹಾಗೂ ಸುದ್ದಿ. ಸಿನಿಮಾ ಬಿಡುಗಡೆಯಾಗಿ 5ನೇ ದಿನಕ್ಕೇ ಬರೋಬ್ಬರಿ 286 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ಟಾಕ್ಸಿಕ್ ಸಿನಿಮಾ, ಮಿಶ್ರ ಪ್ರತಿಕ್ರಿಯೆ ಮಧ್ಯೆಯೂ ತನ್ನ ನಾಗಾಲೋಟ ಮುಂದುವರೆಸಿದೆ. ಕೇವಲ 6 ದಿನಕ್ಕೇ 300 ಕೋಟಿ ಗಳಿಕೆ ಮಾಡುವ ತಾಕತ್ತು ಚಿಕ್ಕದೇನೂ ಅಲ್ಲ!
ಬಿಡುಗಡೆ ದಿನ ನೋಡಲಾಗದ ಅದೆಷ್ಟೋ ಸಿನಿಮಾರಂಗದ ಘಟಾನುಘಟಿ ತಾರೆಯರು ಈಗ ಒಬ್ಬೊಬ್ಬರಾಗಿ ಈ ಸಿನಿಮಾ ನೋಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಮಾಸ್ಟರ್ ಆನಂದ್, ರಕ್ಷಿತಾ ಪ್ರೇಮ್ ಬಳಿಕ ಇದೀಗ ಮಾಜಿ ಸಚಿವೆ 'ಜೋಡೆತ್ತು'ಗಳ ಅಮ್ಮ ಸುಮಲತಾ ಅಂಬರೀಷ್ ಅವರು 'ಟಾಕ್ಸಿಕ್' ಸಿನಿಮಾ ನೋಡಿ, ಯಶ್ ಅಭಿನಯ ಹಾಗೂ ಸಿನಿಮಾವನ್ನು ಮೆಚ್ಚಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಪತ್ರದಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಿ, ಯಶ್ ಅವರ ಸಾಧನೆ ಹಾಗೂ ವ್ಯಕ್ತಿತ್ವದ ಗುಣಗಾನ ಮಾಡಿದ್ದಾರೆ.
ಓವರ್ ಟು ಸುಮಲತಾ ಅಂಬರೀಷ್..
'"ಈಗಷ್ಟೇ 'ಟಾಕ್ಸಿಕ್' ಸಿನಿಮಾ ನೋಡಿದೆ, ನಿಮಗೆ ಇದನ್ನು ಹೇಳಲೇಬೇಕೆಂದು ಅನ್ನಿಸಿತು.
ನೀವು ನಿರ್ಭೀತರು ಮತ್ತು ಇತರರನ್ನು ಅನುಸರಿಸುವ ಬದಲು ನಿಮ್ಮದೇ ಆದ ಹಾದಿಯನ್ನು ಆರಿಸಿಕೊಳ್ಳುತ್ತೀರಿ ಎಂದು ನನಗೆ ಯಾವಾಗಲೂ ತಿಳಿದಿತ್ತು. ಆದರೆ ಈ ಸಿನಿಮಾದಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಎದ್ದು ಕಾಣಿಸಿದ್ದು ನೀವೇ. ನಿಮ್ಮ ನಟನೆ ಅಪ್ರತಿಮವಾಗಿತ್ತು - ನಿಜಕ್ಕೂ ಅದ್ಭುತ.
ಇಡೀ ಚಿತ್ರವು ಒಂದು ದೃಶ್ಯ ವೈಭವವಾಗಿದೆ ಮತ್ತು ನಿಸ್ಸಂದೇಹವಾಗಿ ಇದು ನಿಮಗೆ ಹಾಗೂ ಚಿತ್ರದ ನಿರ್ದೇಶಕರಿಗೆ ಒಂದು ಮಹತ್ವದ ಮೈಲಿಗಲ್ಲು. ಆದರೆ ಪ್ರತಿಯೊಂದು ಫ್ರೇಮ್‌ನಲ್ಲೂ ನೀವು ನಿಮ್ಮನ್ನೇ ಮೀರಿಸಿರುವುದನ್ನು ಕಂಡು ನನಗೆ ಎಷ್ಟು ಹೆಮ್ಮೆ ಎನಿಸಿತು ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ನಟನಾಗಿ ನೀವು ತುಂಬಾ ಬೆಳೆದಿದ್ದೀರಿ ಮತ್ತು ಪ್ರಬುದ್ಧರಾಗಿದ್ದೀರಿ. ನಿಮ್ಮ ಈ ಪಯಣವನ್ನು ನೋಡುವುದು ನನ್ನ ಹೃದಯವನ್ನು ಅಪಾರ ಹೆಮ್ಮೆಯಿಂದ ತುಂಬುತ್ತದೆ.
ನೀವು ನಾನು ಕಂಡ ಅತ್ಯಂತ ಬುದ್ಧಿವಂತ ಮತ್ತು ಸಂಯಮಶೀಲ ವ್ಯಕ್ತಿಗಳಲ್ಲಿ ಒಬ್ಬರು. ನಿಮ್ಮ ಬಗ್ಗೆ ನಡೆಯುತ್ತಿರುವ ನೆಗೆಟಿವ್ ಚರ್ಚೆಗಳನ್ನು ನೀವು ಅಷ್ಟೇನೂ ತಲೆಕೆಡಿಸಿಕೊಳ್ಳದೆ, ಹಗುರವಾಗಿ ತೆಗೆದುಕೊಳ್ಳುತ್ತೀರಿ ಎಂದು ನನಗೆ ಖಾತ್ರಿಯಿದೆ. ಬಹುಶಃ 'ಟಾಕ್ಸಿಕ್' ಸಿನಿಮಾ ತನ್ನ ಕಾಲಕ್ಕಿಂತ ಬಹಳ ಮುಂದಿದೆ. ಅಥವಾ ನಿಮ್ಮ ಬೆಳವಣಿಗೆಯನ್ನು ಕಂಡು ಅರಗಿಸಿಕೊಳ್ಳಲಾಗದವರು ಅಥವಾ ನೀವು ಮುಂದೆ ಏನಾಗಬಹುದು ಎಂದು ಊಹಿಸಿ ಅಸ್ವಸ್ಥರಾದವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು ಅಥವಾ ಅನ್ಯಾಯವಾಗಿ ವಿಮರ್ಶಿಸಿರಬಹುದು. ನಿಮ್ಮಂತಹ ಯಶಸ್ಸು ಎಲ್ಲಾ ರೀತಿಯ ಅಸೂಯೆಯನ್ನು ಆಕರ್ಷಿಸುತ್ತದೆ. ಆದರೆ ನೀವು ಅಂತಹದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳುವವರಲ್ಲ ಎಂದು ನನಗೆ ತಿಳಿದಿದೆ.
ಅದು ಏನೇ ಇರಲಿ, ನೀವು ಈ ಎಲ್ಲವನ್ನೂ ಮೆಟ್ಟಿನಿಂತು ಮತ್ತಷ್ಟು ದೊಡ್ಡದಾಗಿ ಮತ್ತು ಶಕ್ತಿಯುತವಾಗಿ ಹೊರಹೊಮ್ಮುತ್ತೀರಿ ಎಂಬ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ನೀವು ಮತ್ತೆ ಭರ್ಜರಿ ಯಶಸ್ಸನ್ನು ಸಾಧಿಸುತ್ತೀರಿ - ಆ ಬಗ್ಗೆ ನನಗೆ ಕಿಂಚಿತ್ತೂ ಸಂಶಯವಿಲ್ಲ.
ಸದ್ಯಕ್ಕೆ, ನಿಮಗೊಂದು ದೊಡ್ಡ ಸಲ್ಯೂಟ್! ನಿಮ್ಮ ಪ್ರಯತ್ನ, ದೃಢತೆ ಮತ್ತು ಕಠಿಣ ಪರಿಶ್ರಮಕ್ಕೆ ಅಭಿನಂದನೆಗಳು. ಈಗ ಮಾತ್ರವಲ್ಲ, ಎಂದಿಗೂ ನಿಲ್ಲಬೇಡಿ.
ನಿಮ್ಮ ಸಾಧನೆಯನ್ನು ನಾನು ಯಾವಾಗಲೂ ಪ್ರೀತಿ ಮತ್ತು ಅಪಾರ ಹೆಮ್ಮೆಯಿಂದ ನೋಡುತ್ತಿರುತ್ತೇನೆ.
ನಿಮಗೆ ತುಂಬುಹೃದಯದ ಪ್ರೀತಿಯ ಅಪ್ಪುಗೆಗಳು (Sending you lots of hugs. ❤️) ''
ಎಂದು ನಟಿ, ಮಾಜಿ ಸಚಿವೆ ಸುಮಲತಾ ಅಂಬರೀಷ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸುಮಲತಾರ ಪೋಸ್ಟ್ ಮೆಚ್ಚಿ ಹಲವಾರು ಕಾಮೆಂಟ್‌ಗಳು, ಲೈಕ್‌ಗಳು ಬಂದಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.