
ನಟಿ ಸುಧಾರಾಣಿ ಅವರು, ಬಿಗ್ಬಾಸ್ ಕನ್ನಡದ ಸೀಸನ್ 12ನಲ್ಲಿ (Bigg Boss Season 12) ಕಾಣಿಸಿಕೊಳ್ಳಲಿದ್ದಾರೆ ಎಂದು ಬಹಳ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡುತ್ತಲೇ ಇತ್ತು. ಇದಕ್ಕೆ ದೊಡ್ಡ ಕಾರಣ ಅವರ ನಟನೆಯ ಶ್ರೀರಸ್ತು ಶುಭಮಸ್ತು ಸೀರಿಯಲ್ (Shreerastu Shubhamastu) ಮುಗಿದಿರುವುದಕ್ಕೆ. ಇದಾಗಲೇ ಬಿಗ್ಬಾಸ್ ಹವಾ ಜೋರಾಗಿದ್ದು, ಯಾರ್ಯಾರು ಇದರಲ್ಲಿ ಹೋಗಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಲೇ ಇದೆ. ಇದಾಗಲೇ ಹಲವಾರು ಮಂದಿಯ ಹೆಸರು ವೈರಲ್ ಆಗಿದೆ. ಆದರೆ ಅದರಲ್ಲಿ ಅಂತಿಮವಾಗಿ ಯಾರು ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಬಗ್ಗೆ ಸೆಪ್ಟೆಂಬರ್ 28ರಂದೇ ತಿಳಿಯಬೇಕಿದೆ ಅಷ್ಟೇ.
ಅದರ ಮಧ್ಯೆಯೇ ಸುಧಾರಾಣಿ (Sudharani) ಹೆಸರು ಕೂಡ ಜೋರಾಗಿ ಕೇಳಿಬರುತ್ತಿತ್ತು. ಕೊನೆಗೆ ಅವರೇ ಖುದ್ದಾಗಿ ತಮಾಷೆಯ ರೀತಿಯಲ್ಲಿ ತಾವು ಷೋನಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು. ಅದರೆ ಇದರ ಬೆನ್ನಲ್ಲೇ, ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಸುಧಾರಾಣಿ ರಿಯಾಲಿಟಿ ಷೋನಲ್ಲಿ ಭಾಗವಹಿಸಿರುವುದನ್ನು ನೋಡಬಹುದು. ಹಾಗೆಂದು ಇದೇನೂ ಬಿಗ್ಬಾಸ್ ರಿಯಾಲಿಟಿ ಷೋ ಅಲ್ಲ. ಬದಲಿಗೆ ಜೀ ಪವರ್ನಲ್ಲಿ ಪ್ರಸಾರ ಆಗ್ತಿರೋ ‘ಹಳ್ಳಿ ಪವರ್’ ಶೋ ಕಾರ್ಯಕ್ರಮ. ಕೆಲವೊಂದು ಊರುಗಳಲ್ಲಿ ಈ ಷೋ ನಡೆಯುತ್ತಿದೆ. ಕಳೆದ ವಾರ ಬೆಳಗಾವಿಯ ಸಂಗೊಳ್ಳಿಯಲ್ಲಿ ಇದರ ಕಾರ್ಯಕ್ರಮ ನಡೆದಿತ್ತು. ಆ ಸಮಯದಲ್ಲಿ ಸುಧಾರಾಣಿ ಅವರು ವೇದಿಕೆಯ ರಂಗೇರಿಸಿದ್ದರು.
ಇದನ್ನೂ ಓದಿ: ಕ್ರಿಮಿನಲ್ಸ್ಗೆ ಇಲ್ಲದ ಶಿಕ್ಷೆ ನಾಯಿಗಳಿಗೆ ಯಾಕೆ? ನಮ್ಮದೇ ತಪ್ಪು ಇಟ್ಕೊಂಡು... ನೊಂದು ನುಡಿದ ಸುಧಾರಾಣಿ
ಇನ್ನು Halli Power ರಿಯಾಲಿಟಿ ಷೋ ಕುರಿತು ಹೇಳುವುದಾದರೆ, ಅಕುಲ್ ಬಾಲಾಜಿ ಇದನ್ನು ನಿರೂಪಿಸುತ್ತಿದ್ದಾರೆ. ಜೀ ಪವರ್ನಲ್ಲಿ ಇದು ಮೂಡಿ ಬರ್ತಿದೆ. ಕಳೆದ ಬಾರಿ ಇದರ ತಂಡ ಉತ್ತರ ಕರ್ನಾಟಕದ ಸಂಗೊಳ್ಳಿ ಗ್ರಾಮದಲ್ಲಿ ಬಿಡುಬಿಟ್ಟಿತ್ತು. ಇದರಲ್ಲಿ ಸುಧಾರಾಣಿ ಬಂದು ಕಳೆ ಹೆಚ್ಚಿಸಿದ್ದರು. ಥೇಟ್ ಹಳ್ಳಿಯ ಹೆಂಗಸಿನ ಗೆಟಪ್ನಲ್ಲಿ ಮುದ್ದಾಗಿ ಕಾಣಿಸಿಕೊಂಡರು ಸುಧಾರಾಣಿ. ನನಗೆ ನನ್ನ ತವರಿಗೆ ಬಂದಷ್ಟೇ ಖುಷಿಯಾಯಿತು ಎಂದು ಅವರು ಹೇಳಿದರು.
ಇನ್ನು ಸುಧಾರಾಣಿಯವರು ಈಚೆಗೆ ತಮ್ಮ ಮುಂದಿನ ಗುರಿಯ ಬಗ್ಗೆ ಮಾತನಾಡಿದ್ದರು. ಸುಧಾರಾಣಿ ಅವರು ಮುಂದೇನು ಮಾಡಲಿದ್ದಾರೆ, ಅವರ ಮುಂದಿನ ಗುರಿಯೇನು ಎನ್ನುವ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಆ ಬಗ್ಗೆ ಅವರು ಹೇಳಿದ್ದರು. ಈ ವರ್ಷ ನನಗೆ ಗುರಿಯ ಪೈಕಿ ಎರಡು ಗುರಿ ಈಡೇರಿದೆ. ಒಂದು ಷಾರ್ಟ್ ಫಿಲಮ್ ಪ್ರೊಡ್ಯೂಸ್ ಮಾಡಿದ್ದೇನೆ, ಇನ್ನೊಂದು ಯುಟ್ಯೂಬ್ ಚಾನೆಲ್ ಶುರು ಮಾಡಿದ್ದು ಎಂದಿದ್ದರು. ಮುಂದಿನ ಪ್ಲ್ಯಾನ್ ಬಗ್ಗೆ ಸುಧಾರಾಣಿ ಇದೀಗ ಮಾತನಾಡಿದ್ದಾರೆ. ಇದುವರೆಗೆ ನನ್ನ ಈ ಬಯಕೆ ಈಡೇರಿಲ್ಲ ಎಂದಿದ್ದಾರೆ. ಅದು ಭರತನಾಟ್ಯ ಮುಂದುವರೆಸಬೇಕು ಎನ್ನುವುದು ನನ್ನ ದೊಡ್ಡ ಗುರಿ. ನನ್ನ ಮಗಳು ನಿಧಿ ಹೇಳಿಕೊಡ್ತೇನೆ ಎಂದಾಗಲೆಲ್ಲಾ ಏನೋ ಆಗುತ್ತೆ. ಟೈಮೇ ಸಾಕಾಗ್ತಿಲ್ಲ ಎಂದಿದ್ದಾರೆ ಸುಧಾರಾಣಿ. ಎರಡು ದಿನ ಫುಲ್ ಜೋಶ್ನಲ್ಲಿ ಶುರುಮಾಡಿದೆ. ಮೂರನೆಯ ದಿನ ಬಿದ್ದು ಕಾಲಿಗೆ ಏಟು ಮಾಡಿಕೊಂಡೆ ಎಂದಿದ್ದಾರೆ. ಆದರೂ ಅದನ್ನು ಮುಂದುವರಿಸುವ ಗುರಿ ಇದೆ ಎಂದಿದ್ದಾರೆ.
ಇದನ್ನೂ ಓದಿ: ಇನ್ನೂ ಈಡೇರಿಲ್ಲ Sudharani ಬಹುದೊಡ್ಡ ಕನಸು: ಸೀರಿಯಲ್ ಮುಗಿಸಿದ ನಟಿಯ ಮುಂದಿನ ಪ್ಲ್ಯಾನ್ ಏನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.