
ಸಾಹಸಸಿಂಹ ಖ್ಯಾತಿಯ ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ!
ನಾಳೆ (18 September 2025) ರಂದು ಸಾಹಸಸಿಂಹ ಖ್ಯಾತಿಯ ನಟ, ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಅಚರಿಸಲು ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ನಟ ವಿಷ್ಣುವರ್ಧನ್ ಅವರನ್ನು ಅಂತ್ಯ ಸಂಸ್ಕಾರ ಮಾಡಿದ್ದ ಜಾಗ ಅಭಿಮಾನ್ ಸ್ಟುಡಿಯೋದಲ್ಲಿ ಈಗ ವಿಷ್ಣುವರ್ಧನ್ ಅವರ ಸ್ಮಾರಕವೂ ಇಲ್ಲ, ಅಲ್ಲಿ ಅವರಿಗೆ ಜಾಗವೂ ಇಲ್ಲ. ನಾಳೆ ಅಲ್ಲಿ ಹುಟ್ಟಿಹಬ್ಬದ ಆಚರಣೆಗೆ ಅವಕಾಶವೂ ಇಲ್ಲ ಎಂದು ಹೈಕೋರ್ಟ್ ಆದೇಶವೂ ಆಗಿದೆ. ಅಲ್ಲಿಗೆ, ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಸಾಂಪ್ರದಾಯಿಕವಾಗಿ ಎಲ್ಲಿ ಆಚರಿಸುವುದು?
ವಿಷ್ಣುವರ್ಧನ್ ಮನೆಯಲ್ಲಿ ಅಥವಾ ಮೈಸೂರು ಸ್ಮಾರಕದಲ್ಲಿ ಆಚರಿಸಬಹುದು. ಅಥವಾ ರಸ್ತೆಗಳಲ್ಲಿ, ಸರ್ಕಲ್‌ಗಳಲ್ಲಿ ಫೋಟೋ ಇಟ್ಟು ಪೂಜಿಸಿ, ಆಚರಿಸಿಬಹುದು. ರಕ್ತದಾನ, ಅನ್ನದಾನದ ಮೂಲಕ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಹಲವು ಕಡೆ ಆಚರಿಸಿಬಹುದು. ಆದರೆ, ಅಭಿಮಾನಿಗಳು ಎಲ್ಲರೂ ಒಟ್ಟಾಗಿ ಆಚರಿಸುವುದು ಎಲ್ಲಿ? ಅಭಿಮಾನ್ ಸ್ಟುಡಿಯೋ ಬದಲು ಎಲ್ಲೋ ಒಂದು ಕಡೆ ವ್ಯವಸ್ಥೆ ಆಗಿರಬಹುದು. ಅದು ಎಲ್ಲಿ ಎಂಬುದು ಕರ್ನಾಟಕ ರತ್ನ ವಿಷ್ಣುವರ್ಧನ್ ಅಭಿಮಾನಿಗಳಿಗೆ ಮಾಹಿತಿ ಇದೆಯಾ?
ಕನ್ನಡ ಚಿತ್ರರಂಗದಲ್ಲಿ ನಟ ವಿಷ್ಣುವರ್ಧನ್ ಕೂಡ ಮೇರು ನಟರಲ್ಲಿ ಒಬ್ಬರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಆ ಕಾಲದಲ್ಲೇ ಕನ್ನಡವಷ್ಟೇ ಅಲ್ಲದೇ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸಿ 'ಪ್ಯಾನ್ ಇಂಡಿಯಾ' ಪಟ್ಟವನ್ನು ಪಡೆದಿರುವ ನಟ. ಆದರೆ 'ಹಣೆಬರಹ' ಎಂಬಂತೆ ಅವರಿಗೆ ಸಿಗಬೇಕಾದ ಯಾವುದೇ ಮಾನ್ಯತೆ ಅವರಿಗೆ ದೊರಕಲಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಿಗೆ ಇದೆ.
ಕರ್ನಾಟಕ ರತ್ನ ಕೂಡ ಅವರಿಗೆ ನಿಧನರಾಗಿ ಹಲವಾರು ವರ್ಷ ಕಳೆದ ಬಳಿಕ ದೊರಕಿದೆ. ಇಷ್ಟೇ ಅಲ್ಲ, ಇದೀಗ ಹುಟ್ಟುಹಬ್ಬವನ್ನು ಆಚರಿಸಲು ಸರಿಯಾದ ಸ್ಥಳ ಕೂಡ ರಾಜಧಾನಿ ಬೆಂಗಳೂರಿನಲ್ಲಿ ಇಲ್ಲ. ಅದೇನೇ ಆಗಲಿ, ನಾಳೆ ಅಂದರೆ ಸೆಪ್ಟೆಂಬರ್ 18ರಂದು ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವಿದೆ. ಅದನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಅನೇಕ ಸಾಮಾಜಿಕ ಕಳಕಳಿ ಹಾಗೂ ಸೇವಾಮನೋಭಾವಗಳಿಂದ ಆಚರಿಸಲಿದ್ದಾರೆ.
ಒಟ್ಟಿನಲ್ಲಿ ಈಗ ನಾಳೆ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಯಾವೆಲ್ಲಾ ರೀತಿಯಲ್ಲಿ ಆಚರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅದಕ್ಕೆ ಉತ್ತರ ನಾಳೆ ಸಿಗಲಿದೆ. ಏನೇ ಆಗಲಿ ಏನೇ ಹೋಗಲಿ, ಕನ್ನಡದ ಇನ್ನೊಬ್ಬರಿಗೆ ತುಂಬಾ ತಡವಾಗಿಯಾದರೂ ‘ಕರ್ನಾಟಕ ರತ್ನ' ಪ್ರಶಸ್ತಿ ದೊರಕಿದೆ ಎಂಬುದು ಅಭಿಮಾನಿಗಳೂ ಸೇರಿದಂತೆ ಕನ್ನಡದ ಎಲ್ಲಾ ಸಿನಿಪ್ರೇಕ್ಷಕರಿಗೆ ಸಂತಸ ತಂದಿರುವ ಸಂಗತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.