‘ಪ್ರೇಮಲೋಕ’ ಕ್ಕೆ ಮಲ್ಲಿಕಾ ಎಂಬ ಮೋಹಕ ಚೆಲುವೆ ಎಂಟ್ರಿ!

By Web Desk  |  First Published Aug 14, 2019, 10:12 AM IST

ಪ್ರೇಮಲೋಕ ಅದ್ಭುತ ಕತೆ ಹೊಂದಿರುವ ಧಾರಾವಾಹಿ: ದಿವ್ಯಾ ರಾವ್‌ | ಸ್ಟಾರ್‌ ಸುವರ್ಣ ವಾಹಿನಿಯ ಪ್ರೇಮಲೋಕ ಧಾರಾವಾಹಿ ಖಳ ನಾಯಕಿ ಜತೆ ಮಾತುಕತೆ


ಸ್ಟಾರ್‌ ಸುವರ್ಣದ ‘ಪ್ರೇಮಲೋಕ’ ಧಾರಾವಾಹಿಗೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಕಥಾ ನಾಯಕ ಸೂರ್ಯ ಹಾಗೂ ನಾಯಕಿ ಪ್ರೇರಣಾ ನಡುವೆ ಈಗ ಮಲ್ಲಿಕಾ ಎನ್ನುವ ಮೋಹಕ ಚೆಲುವೆ ಎಂಟ್ರಿ ಕೊಟ್ಟಿದ್ದಾಳೆ.

ನಾಯಕ-ನಾಯಕಿಯಷ್ಟೇ ಹೆಚ್ಚು ಪ್ರಾಮುಖ್ಯತೆ ಮಲ್ಲಿಕಾಗೂ ಇದು. ಆದರೆ ಆಕೆ ಬಂದಿದ್ದು ಯಾಕೆ ಎನ್ನುವುದೀಗ ಕುತೂಹಲ. ಈ ಪಾತ್ರದೊಂದಿಗೀಗ ಪ್ರೇಮಲೋಕಕ್ಕೆ ಸೇರ್ಪಡೆ ಆದವರು ಬೆಂಗಳೂರಿನ ಬೆಡಗಿ ದಿವ್ಯಾ ರಾವ್‌. ಬಣ್ಣದ ಲೋಕದ ಜರ್ನಿ, ಪಾತ್ರದ ವೈಶಿಷ್ಟ್ಯತೆ, ನಟನೆಯ ಕನಸು.. ಇತ್ಯಾದಿ ಕುರಿತು ಮಲ್ಲಿಕಾ ಅಲಿಯಾಸ್‌ ದಿವ್ಯಾ ರಾವ್‌ ಜತೆಗೆ ಮಾತುಕತೆ.

Tap to resize

Latest Videos

undefined

ಜಮೀರ್‌ ಅಹಮದ್‌ ಪುತ್ರ ಜಾಯೇದ್‌ ನಟನೆಯ ಚಿತ್ರ ಸದ್ಯದಲ್ಲೇ ತೆರೆಗೆ

ದಿವ್ಯಾ ರಾವ್‌ ಹಿನ್ನೆಲೆ ಏನು?

ಮೂಲತಃ ಬೆಂಗಳೂರು ಹುಡುಗಿ. ಹುಟ್ಟಿದ್ದು, ಬೆಳೆದಿದ್ದು ಜತೆಗೆ ಓದಿದ್ದೆಲ್ಲವೂ ಇಲ್ಲಿಯೇ. ವಿಜಯ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದೆ. ಮಿಸ್‌ ಸೌತ್‌ ಇಂಡಿಯಾ ವಿನ್ನರ್‌ ಕೂಡ ಆಗಿದ್ದೆ. ಆದ್ರೂ ನಟಿ ಆಗ್ಬೇಕು ಅನ್ನೋದು ಬಾಲ್ಯದ ಕನಸಾಗಿತ್ತು.

‘ನನ್‌ ಹೆಂಡ್ತಿ ಎಂಬಿಬಿಎಸ್‌’ ಎನ್ನುವ ಧಾರಾವಾಹಿ ಮೂಲಕ ಅದು ನನಸಾಗಿದ್ದು ನನ್ನ ಸೌಭಾಗ್ಯ. ಆದಾದ ನಂತರ ಈಗ ‘ಪ್ರೇಮಲೋಕ’. ಇದು ಎರಡನೇ ಧಾರಾವಾಹಿ. ನಾನಿಲ್ಲಿ ನಿರ್ವಹಿಸುತ್ತಿರುವ ಪಾತ್ರದ ಹೆಸರು ಮಲ್ಲಿಕಾ.

ಈ ಮಲ್ಲಿಕಾ ಯಾರು?

ಪ್ರಭಾವಿ ರಾಜಕಾರಣಿ ಮಗಳು. ಸೌಂದರ್ಯ ಮತ್ತು ಐಶ್ವರ್ಯ ಎರಡರಲ್ಲೂ ಸಿರಿವಂತೆ. ಹಠ ಮತ್ತು ಸಿಟ್ಟಿಗೂ ಹೆಸರುವಾಸಿ. ಅನಿಸಿದ್ದನ್ನು ಹೇಗಾದರೂ ಸರಿ ತನ್ನ ವಶ ಪಡೆಯುವ ಅಂದವಾದ ರಾಕ್ಷಸಿ. ಅಷ್ಟೇ ಮಹತ್ವಕಾಂಕ್ಷೆಯ ಚೆಲುವೆಯೂ ಕೂಡ. ಕಥಾ ನಾಯಕ ಸೂರ್ಯ, ನಾಯಕಿ ಪ್ರೇರಣಾ ನಡುವೆ ಆಕೆ ಯಾಕಾಗಿ ಬಂದಳು ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್‌.

Man vs Wild : ಮೋದಿ ಸಾಹಸಕ್ಕೆ ಜೈ ಎಂದ ಬಾಲಿವುಡ್

ಮಲ್ಲಿಕಾ ಪಾತ್ರಕ್ಕೆ ನೀವು ಆಯ್ಕೆ ಆಗಿದ್ದು ಹೇಗೆ?

ಫಸ್ಟ್‌ ಟೈಮ್‌ ನಾನು ಬಣ್ಣ ಹಚ್ಚಿದ ಧಾರಾವಾಹಿ ‘ನನ್‌ ಹೆಂಡ್ತಿ ಎಂಬಿಬಿಎಸ್‌’. ಇದು ಸ್ಟಾರ್‌ ಸುವರ್ಣದಲ್ಲೇ ಪ್ರಸಾರವಾದ ಸೀರಿಯಲ್‌. ಇದು ಮುಗಿದ ನಂತರ ಮನೆಯಲ್ಲೇ ಇದ್ದೆ. ಒಂದು ದಿನ ಸ್ಟಾರ್‌ ಸುವರ್ಣದಿಂದಲೇ ಫೋನ್‌ ಕಾಲ್‌ ಬಂತು.

‘ಪ್ರೇಮಲೋಕ’ ಅಂತ ಧಾರಾವಾಹಿ, ಅದರಲ್ಲಿ ಆ್ಯಕ್ಟ್ ಮಾಡ್ತೀರಾ ಅಂತ ಕೇಳಿದ್ರು. ಹಾಗೆನೇ ಪಾತ್ರದ ವಿವರ ಕೂಡ ಕೊಟ್ಟರು. ನೆಗೆಟಿವ್‌ ಶೇಡ್‌ ಪಾತ್ರ, ಆದ್ರೂ ತುಂಬಾ ಚೆನ್ನಾಗಿತ್ತು. ನಾರ್ಮಲ್‌ ವಿಲನ್‌ ಅಲ್ಲ ಅಂತ ಗೊತ್ತಾಯಿತು. ಹಾಗಾಗಿ ಒಪ್ಪಿಕೊಂಡೆ.

ನೆಗೆಟಿವ್‌ ಶೇಡ್‌ ಪಾತ್ರ ಅಂದ್ರೆ ಇಷ್ಟನಾ?

ರೆಗ್ಯುಲರ್‌ ವಿಲನ್‌ ರೀತಿಯ ಪಾತ್ರ ಆಗಿದ್ರೆ ಒಪ್ಪಿಕೊಳ್ಳುತ್ತಿರಲಿಲ್ಲ. ಯಾಕಂದ್ರೆ ಅಂತಹ ಪಾತ್ರಗಳಲ್ಲಿ ಅಭಿನಯಿಸುವುದಕ್ಕೂ ನಂಗಿಷ್ಟಇಲ್ಲ. ಆದ್ರೆ ಮಲ್ಲಿಕಾ ಪಾತ್ರ ತುಂಬಾ ಡಿಫರೆಂಟ್‌. ಪಾತ್ರದ ಬಗ್ಗೆ ಕೇಳುತ್ತಾ ಹೋದಾಗ ಅದು ನೆಗೆಟಿವ್‌ ಪಾತ್ರ ಅಂತೆನಿಸಲಿಲ್ಲ. ಕನ್ನಡದ ಕಿರುತೆರೆ ವೀಕ್ಷಕರು ಇದುವರೆಗೂ ಇಂತಹ ಪಾತ್ರ ನೋಡಿರುವುದಕ್ಕೆ ಸಾಧ್ಯವೇ ಇಲ್ಲ.

ಅಂಥದ್ದೇನು ಆ ಪಾತ್ರದ ವಿಶೇಷ?

ಇದುವರೆಗೂ ವೀಕ್ಷಕರು ಕಂಡಂತಿಲ್ಲ ಆ ಪಾತ್ರ. ಸಾಮಾನ್ಯವಾಗಿ ಧಾರಾವಾಹಿಗಳ ವಿಲನ್‌ ಎಂಟ್ರಿ ಆಸ್ತಿ ಕಬಳಿಸುವುದಕ್ಕೆ, ಕಥಾ ನಾಯಕನನ್ನು ತನ್ನ ವಶ ಮಾಡಿಕೊಳ್ಳುವುದಕ್ಕಾಗಲಿ, ಇಲ್ಲವೇ ನಾಯಕಿ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಬರುವುದು ಸಾಮಾನ್ಯ. ಆದರೆ ಮಲ್ಲಿಕಾ ಅದಕ್ಕೆಲ್ಲ ತದ್ವಿರುದ್ಧ. ಜತೆಗೆ ಆ ಪಾತ್ರವನ್ನು ತೋರಿಸಿರುವ ರೀತಿಯೂ ತುಂಬಾ ಡಿಫರೆಂಟ್‌. ನೆಗೆಟಿಲ್‌ ಶೇಡ್‌ ಇದ್ದರೂ ತುಂಬಾ ಸುಂದರವಾಗಿ, ಮುದ್ದಾಗಿ ತೋರಿಸುತ್ತಿರುವುದು ಇಲ್ಲಿನ ವಿಶೇಷ.

ಸೂರ್ಯ ಮತ್ತು ಪ್ರೇರಣಾ ನಡುವೆ ಮಲ್ಲಿಕಾ ಬಂದಿದ್ದು ಯಾಕೆ?

ಆಕೆಯ ಎಂಟ್ರಿಗೂ ಒಂದು ಉದ್ದೇಶ ಇದೆ. ಸದ್ಯಕ್ಕೆ ಅದನ್ನು ರಿವೀಲ್‌ ಮಾಡುವಂತಿಲ್ಲ. ಆದರೂ ಆಕೆಯ ಎಂಟ್ರಿಯ ಸಂದರ್ಭ ಮಾತ್ರ ವಿಶೇಷವಾದದ್ದು.ಸೂರ್ಯ ಮತ್ತು ಪ್ರೇರಣಾ ಈಗಾಗಲೇ ಪ್ರೀತಿಯ ಸೆಳೆತಕ್ಕೆ ಸಿಲುಕಿದವರು. ಆದರೆ ಅದಕ್ಕೆ ಅಷ್ಟಾಗಿ ಸ್ಪಷ್ಟತೆ ಸಿಕ್ಕಿಲ್ಲ.

ಈ ನಡುವೆಯೇ ಸಾಲದ ಸುಳಿಗೆ ಸಿಲುಕಿ ತನ್ನ ತಂದೆ ವಯಸ್ಸಿನ ನವೀನ್‌ ಎಂಬಾತನನ್ನು ವಿವಾಹವಾಗಲು ಒಪ್ಪಿಕೊಂಡಿದ್ದಾಳೆ. ಅವರಿಬ್ಬರ ನಿಶ್ಚಿತಾರ್ಥವೂ ನಡೆದಿದೆ. ಈ ನಡುವೆಯೇ ಮಲ್ಲಿಕಾ ಎಂಟ್ರಿ ಆಗಿದ್ದಾಳೆ. ಮುಂದಿನ ಕತೆ ಏನು ಎನ್ನುವುದು ಕುತೂಹಲ.

ಚಿತ್ರೀಕರಣದ ಅನುಭವದ ಬಗ್ಗೆ ಹೇಳುವುದಾದರೆ...

ನನಗಿದು ಎರಡನೇ ಧಾರಾವಾಹಿ. ಚಿತ್ರೀಕರಣದ ಅನುಭವ ಅದ್ಭುತವಾಗಿದೆ. ಇಡೀ ತಂಡ ಒಂದು ಫ್ಯಾಮಿಲಿ ರೀತಿಯಲ್ಲಿ ಫೀಲ್‌ ಮಾಡುತ್ತಿದೆ. ನಮ್ಮಂತಹ ಹೊಸಬರಿಗೆ ಚಿತ್ರೀಕರಣದ ಸ್ಥಳಗಳು ಹೀಗಿದ್ದರೆ, ಸಾಕಷ್ಟುಕಲಿಯಬಹುದು.
 

click me!