ನಟ ಕೋಮಲ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿದ್ದು ಆತ ಮದ್ಯ ಸೇವನೆ ಮಾಡಿದ್ದಾನೆಯೇ ಎಂಬ ಪರೀಕ್ಷೆ ನಡೆಯುತ್ತಿದೆ.
ಬೆಂಗಳೂರು[ಆ. 13] ನಟ ಕೋಮಲ್ ಕುಮಾರ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಶ್ರೀರಾಮ್ ಪುರ ನಿವಾಸಿ ವಿಜಿ ಎಂಬಾತನನ್ನು ಬಂಧಿಸಲಾಗಿದೆ.
ಮಾಹಿತಿ ನೀಡಿರುವ ಡಿಸಿಪಿ ಶಶಿಕುಮಾರ್, ಹಲ್ಲೆ ಮಾಡಿದ ವಿಜಿ ಶ್ರೀರಾಮ್ ಪುರ ನಿವಾಸಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಾ ಇದ್ದಾನೆ. ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ ಪ್ರಚೋದನೆ ಮಾಡಿ ಕಾರಿಂದ ಕೆಳಗಿಳಿಸಿ ಹಲ್ಲೆ ಮಾಡಿದ್ದಾನೆ ಹೀಗಾಗಿ ಆತನ ಮೇಲೆ 307 ಕೇಸ್ ದಾಖಲು ಮಾಡಿದ್ದೇವೆ ಎಂದಿದ್ದಾರೆ.
ಕೋಮಲ್ ಥಳಿಸಿದ ಯುವಕರು.. ದೃಶ್ಯ ಸಿಸಿಟಿಯಲ್ಲಿ ಸೆರೆ
ಆರೋಪಿಯ ವಿಚಾರಣೆ ನಡೆಯುತ್ತಿದ್ದು ಆತ ಮದ್ಯ ಸೇವನೆ ಮಾಡಿದ್ದಾನೆಯೇ ಎಂದು ಪರಿಶೀಲನೆ ಮಾಡುತ್ತಿದ್ದೇವೆ. ವೈದ್ಯಕೀಯ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ. ಸ್ಯಾಂಡಲ್ ವುಡ್ ನಟ ಕೋಮಲ್ ಕುಮಾರ್ ಮೇಲೆ ಶ್ರೀರಾಮಪುರದ ಬಳಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು.
ಬೆಂಗಳೂರಿನಲ್ಲಿ ನಟ ಕೋಮಲ್ ಮೇಲೆ ಹಲ್ಲೆ, ಬಾಯಲ್ಲಿ ರಕ್ತ
ನನ್ನ ತಮ್ಮ ಅಥವಾ ನಟ ಅಂತ ಅಲ್ಲ, ಯಾವ ಜನರಿಗೂ ಕೂಡ ಹೀಗೆ ಆಗಬಾರದು. ಕುಡಿದು, ಗಾಂಜಾ ಹೊಡೆದು ಈ ರೀತಿ ಬೆಂಗಳೂರು ನಗರದಲ್ಲಿ ನಡೆದಿದೆ ಅಂದರೆ ಏನು ಅರ್ಥ? ಯಾರು ಏನ್ ಮಾಡಿದ್ದಾರೆ ಅಂತ ಗೊತ್ತಾಗುತ್ತೆ? ಇಂಡಸ್ಟ್ರಿಯವರು ಮಾಡಿದ್ದಾರಾ? ಅಥವಾ ಬೇರೆಯವರು ಮಾಡಿದ್ದಾರ ಗೊತ್ತಿಲ್ಲ ಎಂದು ಜಗ್ಗೇಶ್ ಆತಂಕ ವ್ಯಕ್ತಪಡಿಸಿದ್ದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ