Latest Videos

ಇಂದು ಹರಿಶ್ಚಂದ್ರಘಾಟ್‌ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರ!

By Kannadaprabha NewsFirst Published Aug 9, 2023, 6:15 AM IST
Highlights

ಬ್ಯಾಂಕಾಕ್‌ನಲ್ಲಿ ಅಕಾಲಿಕ ಮರಣಕ್ಕೀಡಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಸಂಸ್ಕಾರ ಬುಧವಾರ ಅಪರಾಹ್ನ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರಘಾಟ್‌ನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಬೆಂಗಳೂರು (ಆ.09): ಬ್ಯಾಂಕಾಕ್‌ನಲ್ಲಿ ಅಕಾಲಿಕ ಮರಣಕ್ಕೀಡಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಸಂಸ್ಕಾರ ಬುಧವಾರ ಅಪರಾಹ್ನ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರಘಾಟ್‌ನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಪೂರ್ವಾಹ್ನ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗುತ್ತದೆ.

ಮಂಗಳವಾರ ರಾತ್ರಿಯೇ ಪ್ರಕ್ರಿಯೆಗಳನ್ನೆಲ್ಲಾ ಪೂರೈಸಿ ಥಾಯ್ಲೆಂಡ್‌ ಏರ್‌ಲೈನ್ಸ್‌ನ ವಿಶೇಷ ವಿಮಾನದ ಮೂಲಕ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಗಿದೆ. ಥಾಯ್ಲೆಂಡ್‌ನಲ್ಲಿದ್ದ ವಿಜಯ ರಾಘವೇಂದ್ರ, ಬಿ.ಕೆ. ಶಿವರಾಮ್‌ ಹಾಗೂ ಸೋದರ ರಕ್ಷಿತ್‌ ಶಿವರಾಮ್‌ ಆಗಮನದ ಬಳಿಕ ಮುಂದೆ ನಡೆಸಬೇಕಾದ ಕ್ರಮಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಂಗಳವಾರ ರಾತ್ರಿಯಿಂದಲೇ ವಿಜಯ ರಾಘವೇಂದ್ರ ಹಾಗೂ ಶಿವರಾಮ್‌ ಕುಟುಂಬದ ಸದಸ್ಯರು, ಸ್ನೇಹಿತರು, ಆಪ್ತರು, ಗಣ್ಯರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ. ಬುಧವಾರ ಸಾರ್ವಜನಿಕ ದರ್ಶನ ಮುಗಿದ ಬಳಿಕ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ.

Spandana Death: 16 ಕೇಜಿ ದೇಹತೂಕ ಇಳಿಸಿದ್ದೇ ಸ್ಪಂದನಾ ಸಾವಿಗೆ ಮುಳುವಾಯ್ತಾ?

ಸ್ಪಂದನಾ ಸಾವಿಗೆ ಸಾ.ರಾ.ಗೋವಿಂದ ತೀವ್ರ ಸಂತಾಪ: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಅವರು ಆ.6ರಂದು ಬ್ಯಾಂಕಾಂಕ್‌ನಲ್ಲಿ ಮೃತಪಟ್ಟಿದ್ದು, ಅವರ ನಿಧನಕ್ಕೆ ಸಾ.ರಾ.ಗೋವಿಂದ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ 30 ವರ್ಷದ ಹಿಂದಿನ ನೋವು ನನಗೆ  ನೆನಪು ಆಗ್ತಿದೆ. 29 ವರ್ಷದ ಹಿಂದೆ ಈ ರೀತಿಯ ನೋವು ನನಗೆ ಆಗಿತ್ತು. ಅದನ್ನು ತಡೆದುಕೊಳ್ಳುವುದು ಎಷ್ಟು ಕಷ್ಟ ಅನ್ನೋದು ನನಗೆ ಗೊತ್ತು. ಮಕ್ಕಳು ಹೆಚ್ಚಾಗಿ ತಂದೆಗಿಂತ ತಾಯಿಯ ಬಳಿ ಬೆಳೆಯುತ್ತಾರೆ. ತಾಯಿಯನ್ನ ಕಳೆದುಕೊಂಡು ಮಕ್ಕಳು ಹೇಗೆ ಇರಲು ಸಾಧ್ಯ ಎಂದು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

ವಿಜಯ್‌ ಪತ್ನಿ ಸ್ಪಂದನಾ ಅವರು  ಮೂರು ದಿನಗಳ ಹಿಂದೆ ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದರು. ನಿನ್ನೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.  ಇನ್ನು ಸ್ಪಂದನಾ ವಿಜಯ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರುವ ಬಗ್ಗೆ ಮಾತುಕತೆ ನಡೆದಿದ್ದು, ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಬರುವ ಸಾಧ್ಯತೆ ಇದೆ. ಪುನೀತ್ ರಾಜ್​ಕುಮಾರ್ ಸೇರಿ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈಗ ಸ್ಪಂದನಾ ಕೂಡ ನಿಧನ ಹೊಂದಿದ್ದು ನಿಜಕ್ಕೂ ಶಾಕಿಂಗ್ ಆಗಿದೆ. 

ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ. ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ವಿಜಯ್, ಚಲನಚಿತ್ರ ನಿರ್ಮಾಪಕ ಚಿನ್ನೆಗೌಡರ ಹಿರಿಯ ಸೊಸೆ. ಈಗ ಇವರ ಹಠಾತ್ ನಿಧನದಿಂದ ಎರಡೂ ಕುಂಟುಂಬಗಳು ಕಂಗೆಟ್ಟು ಹೋಗಿದೆ. ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಮುದ್ದಾದ ಜೋಡಿ. ಇಡೀ ಚಿತ್ರರಂಗ ಮಾತ್ರವಲ್ಲ ಅವರ ಅಭಿಮಾನಿಗಳಿಗೆ ಕೂಡ ಈ ಸುದ್ದಿ ಶಾಕ್ ತಂದಿದೆ. ಸ್ಪಂದನಾ ಇತ್ತೀಚೆಗೆ ತೂಕ ಇಳಿಸಿಕೊಂಡಿದ್ದರು. 16 ಕೆಜಿ ತೂಕ ಇಳಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು, ಅವರಿಗೆ 39 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.

click me!