
ಮುಂಬೈ (ನ.08) ಪುಟ್ಟ ಕಂದನ ಹೆಸರು ರಾಧಿಕಾ. 1 ವರ್ಷ ವಯಸ್ಸು. ಮಗುವಿನ ನಗು, ಅಮ್ಮಾ ಅನ್ನೋ ತೊದಲು ಮಾತಿನ ಹಿಂದೆ ನೋವಿತ್ತು. ತಾಯಿಗೆ ಮಗಳು ಎದ್ದು ನಡಯಬೇಕು ಎಂದು ಆಸೆ, ಅಜ್ಜಿಗೆ ಮೊಮ್ಮಗಳ ಬದುಕಿನ ಚಿಂತೆ. ಕಾರಣ ಈ ಪುಟ್ಟ ಕಂದಮ್ಮ ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ಇದರ ಚಿಕಿತ್ಸೆಗೆ ಲಕ್ಷ ಲಕ್ಷ ರೂಪಾಯಿ ಖರ್ಚು. ಆದರೆ ಅದನ್ನು ಭರಿಸುವ ಶಕ್ತಿ ಈ ಕುಟುಂಬಕ್ಕಿಲ್ಲ. ಆದರೆ ಪುಟ್ಟ ಕಂದನ ಉಳಿಸಲು ಎಲ್ಲಾ ದೇವರ ಪ್ರಾರ್ಥಿಸಿದ್ದಾರೆ. ಇದರ ನಡವೆ 90ರ ಹರೆಯದ ಅಜ್ಜಿ ತನ್ನ ಮೊಮ್ಮಗಳ ಬದುಕಿಸಲು ನೇರವಾಗಿ ಸೋನು ಸೂದ್ ಭೇಟಿಗೆ ಆಗಮಿಸಿದ್ದಾರೆ. ಕಣ್ಣೀರ ಮನವಿಗೆ ಸೋನು ಸೂದ್ ತಕ್ಷಣವೇ ಸ್ಪಂದಿಸಿದ್ದಾರೆ. ದೀಪಾವಳಿಗೆ ಪುಟ್ಟ ಕಂದಮ್ಮನಿಗೆ ಮರು ಜೀವ ಸಿಕ್ಕಿದೆ. ಸರ್ಜರಿ ಯಶಸ್ವಿಯಾಗಿದ್ದು, ಹೊಸ ಬದುಕು ಆರಂಭಗೊಂಡಿದೆ. ದೀಪಾವಳಿಗೆ ಸೋನು ಸೂದ್ ನೀಡಿದ ಉಡುಗೊರೆಗೆ ಹಲವ ಕಣ್ಣಾಲಿ ತೇವಗೊಂಡಿದೆ.
ಬಡ ಕುಟುಂಬದ ಪುಟ್ಟ ಕಂದಮ್ಮ ರಾಧಿಕಾ ಗಂಭೀರ ಆರೋಗ್ಯ ಸಮಸ್ಯೆ ಕುಟುಂಬದ ಖುಷಿಯನ್ನು ಕಸಿದುಕೊಂಡಿತ್ತು. ಇದ್ದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಹತ್ತಿ ಇಳಿದಿದ್ದಾರೆ. ಸಮಸ್ಯೆ ಆಳ ಗೊತ್ತಾಗಿದೆ. ಆದರೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಸುಸಜ್ಜಿತ ಹೃದಯ ಚಿಕಿತ್ಸೆಯ ಆಸ್ಪತ್ರೆಗೆ ತೆರಳಿ ವಿಚಾರಸಿದಾಗ ಚಿಕಿತ್ಸಾ ವೆಚ್ಚ ಹಲವು ಲಕ್ಷ ರೂಪಾಯಿ. ಈಗಾಗಲೇ ಸಾಲ ಮಾಡಿ ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಮತ್ತೊಂದು ಚಿಕಿತ್ಸೆ ಬಡ ಕುಟುಂಬಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ಪುಟ್ಟ ಕಂದನ ಬದುಕಿಸಲು ಎಲ್ಲಾ ಪ್ರಯತ್ನಗಳು ಆರಂಭಗೊಂಡಿತ್ತು. 90ರ ಅಜ್ಜಿ ಸೋನು ಸೂದ್ ಹಲವರಿಗೆ ನೆರವು ನೀಡಿರುವ ಬಗ್ಗೆ ತಿಳಿದಿದ್ದರು. ಹೀಗಾಗಿ ಹೇಗಾದರು ಮಾಡಿ ಸೋನು ಸೂದ್ ಭೇಟಿ ಮಾಡಲು ಮುಂದಾಗಿದ್ದಾರೆ.
ಸೋನು ಸೂದ್, ಸೋನೂ ಸೂದ್ ಚಾರಿಟಿ ಸೇರದಂತೆ ಯಾರ ಸಂಪರ್ಕವೂ ಅಜ್ಜಿಗಿಲ್ಲ. ಹೀಗಾಗಿ ಹಲವರ ಸಂಪರ್ಕಿಸಿ ಕೊನೆಗೆ ಸೋನೂ ಸೂದ್ ಭೇಟಿಯಾಗಿದ್ದಾರೆ. ಮಗುವಿನ ಚಿಕಿತ್ಸೆಯ ವಿವರ ಹಿಡಿದು ಸೋನು ಸೂದ್‌ಗಾಗಿ ಕಾಯುತ್ತಿದ್ದ ನಿಂತಿದ್ದ ಅಜ್ಜಿಗೆ ಅಚ್ಚರಿಯಾಗಿದೆ. ಸೋನು ಸೂದ್ ಅಜ್ಜಿಯ ಬಳಿ ಬಂದು ಮಾತನಾಡಿಸಿದ್ದಾರೆ. ಅಜ್ಜಿಯ ಮನವಿ ಕೇಳಿಸಿಕೊಂಡಿದ್ದಾರೆ. ಸೋನು ಸೂಜ್ ಚಾರಿಟಿ ಫೌಂಡೇಶನ್ ಮೂಲಕ ನೆರವಿನ ಭರವಸೆ ನೀಡಿದ್ದಾರೆ.
ಅಜ್ಜಿ ಮನವಿ ಕೇಳಿಸಿಕೊಂಡ ತಕ್ಷಣವೇ ರಾಧಿಕಾ ಪೋಷಕರಿಗೆ ಕರೆ ಮಾಡಿದ್ದಾರೆ. ಪೋಷಕರ ಜೊತೆ ಮಾತನಾಡಿದ್ದಾರೆ. ಆತಂಕ ಬೇಡ, ಎಲ್ಲವೂ ಸರಿಯಾಗಲಿದೆ ಎಂದು ಭರವಸೆ ನೀಡಿದ್ದಾರೆ. ಇತ್ತ ತಮ್ಮ ಫೌಂಡೇಷನ್ ಸಿಬ್ಬಂದಿಗಳಿಗೆ ಕರೆ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಅಷ್ಟೇ ವೇಗದಲ್ಲಿ ಜುಪಿಟರ್ ಆಸ್ಪತ್ರೆಯಲ್ಲಿ ಮಗವನ್ನು ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಡಾ.ಆಶುತೋಶ್ ತಂಡ ಮಗುವಿಗೆ ಸರ್ಜರಿ ಮಾಡಿದೆ.
ಕೆಲ ಪ್ರಾಥಮಿಕ ಚಿಕಿತ್ಸೆ ಬಳಿಕ ಮಗುವಿಗೆ ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ. ದೀಪಾವಳಿ ಹಬ್ಬದ ಶುಭದಿನ ಒಂದು ವರ್ಷದ ರಾಧಿಕಾ ಮರಜೀವ ಪಡೆದಿದ್ದಾಳೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮಗು ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ಸೋನು ಸೂದ್ ಹಂಚಿಕೊಂಡಿದ್ದಾರೆ. ಈ ಬಾರಿಯ ದೀಪಾವಳಿ ಅತ್ಯಂತ ಸಂಭ್ರಮದಿಂದ ಕೂಡಿದೆ. ರಾಧಿಕಾಗೆ ಹೊಸ ಬದುಕು ಸಿಕ್ಕಿದೆ ಎಂದು ಸೋನು ಸೂದ್ ಹೇಳಿಕೊಂಡಿದ್ದಾರೆ.
ದೀಪಾವಳಿ ಸಂಭ್ರಮದಲ್ಲಿ ಸೋನು ಸೂದ್ ನೆರವಿಗೆ ಹಲವರ ಕಣ್ಣಾಲಿ ತೇವಗೊಂಡಿದೆ. ಸೋನು ಸೂದ್ ಕಾರ್ಯಕ್ಕೆ ಸಲ್ಯೂಟ್ ಹೊಡೆದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸೋನು ಸೂದ್‌ಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಸಾಮಾಜಿಕ ಕಾರ್ಯ, ನೆರವಿನ ಹಸ್ತ ಮುಂದುವರಿಯಲಿ, ನಿಮ್ಮಿಂದ ಹಲವರ ಬದುಕು ಹಸನಾಗಲಿ ಎಂದು ಹಾರೈಸಿದ್ದಾರೆ.
This Diwali, God gave me the most beautiful gift — the chance to be a part of saving a little life. ❤️
A 90-year-old grandmother came to me with just one desperate wish: to save her one-year-old granddaughter, Radhika, who was battling a serious heart condition.
Today, by God’s grace, her surgery has been successful. A little heart gets a new chance to beat, and a grandmother gets her biggest reason to smile.
My heartfelt gratitude to Jupiter Hospital, Dr. Ashutosh and the entire medical team.
This Diwali, the brightest diya for me is the hope shining in little Radhika’s life.
Happy Diwali! ❤️🪔🙏
— sonu sood (@SonuSood) November 8, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.