ಅಪ್ಪಟ ಹಳ್ಳಿ ಪ್ರತಿಭೆಯ ಅದ್ಭುತ ಸ್ವರ: ಹೂವಿನ ಬಾಣದಂತೆ ಈ ತಂಗಿನೂ ಸ್ವಲ್ಪ ಫೇಮಸ್ ಮಾಡ್ರೋ ಅಣ್ಣಂದಿರಾ..!

Published : Jan 14, 2026, 04:37 PM IST
social Media singer vijayalakshmi

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಮೆಡಿಕೋ ವಿದ್ಯಾರ್ಥಿನಿ ವಿಜಯಲಕ್ಷ್ಮಿ ತನ್ನ ಸುಶ್ರಾವ್ಯ ಕಂಠದಿಂದ ವೈರಲ್ ಆಗುತ್ತಿದ್ದಾರೆ. ಇವರ ಪ್ರತಿಭೆಗೆ ಖ್ಯಾತ ಗಾಯಕಿ ನಂದಿತಾ ಅವರೇ ಫಿದಾ ಆಗಿದ್ದು, ಕೆಟ್ಟ ಹಾಡುಗಳಿಂದ ಫೇಮಸ್ ಆದವರ ಬದಲು ಇಂತಹ ನಿಜವಾದ ಪ್ರತಿಭೆಯನ್ನು ಬೆಳೆಸುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಪ್ರತಿಭೆ ಇದ್ದವರು ಪ್ರತಿಭೆ ಇಲ್ಲದವರನ್ನು ಕೂಡ ಸೋಶಿಯಲ್ ಮೀಡಿಯಾ ಸಖತ್ ಫೇಮಸ್ ಮಾಡಿ ವೈರಲ್ ಮಾಡಿ ಬಿಡುತ್ತದೆ. ರಾತ್ರಿ ಬೆಳಗಾಗುವುದರೊಳಗೆ ಜನ ಸಾಮಾನ್ಯನೆನಿಸಿಕೊಂಡವನೋರ್ವ ಸೆಲೆಬ್ರಿಟಿಯಾಗಿ ಬಿಡುತ್ತಾನೆ. ವೈರಲ್ ಆಗುತ್ತಿದ್ದಂತೆ ಅನೇಕ ಬ್ರಾಂಡ್‌ಗಳು ಅವರ ಬ್ರಾಂಡ್‌ಗಳ ಪ್ರಮೋಷನ್ ಮಾಡುವಂತೆ ಅವರಿಗೆ ಒಳ್ಳೆಯ ಅವಕಾಶವನ್ನು ನೀಡುತ್ತವೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿ ಬದುಕು ಕಟ್ಟಿಕೊಂಡ ಅನೇಕರು ನಮ್ಮ ನಡುವೆ ಇದ್ದಾರೆ ಹಾಗೆಯೇ ಮಾನ ಮರ್ಯಾದೆಯನ್ನು ಸೋಶಿಯಲ್ ಮೀಡಿಯಾದಿಂದ ಕಳೆದುಕೊಂಡವರು ಇದ್ದಾರೆ. ಹೀಗಾಗಿ ಸೋಶಿಯಲ್ ಮಿಡಿಯಾದಿಂದ ಯಾರು ಯಾವಾಗ ಹೇಗೆ ಫೇಮಸ್ ಆಗುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆ ಹೂವಿನ ಬಾಣದಂತೆ ಹಾಡನ್ನು ಕರಾಬಾಗಿ ಹಾಡಿ ಫೇಮಸ್ ಆಗಿರುವ ಮೈಸೂರಿನ ಹುಡುಗಿ ಹಾಗೂ ಹೊಸವರ್ಷದಂದು ಮಿಲ್ಟ್ರಿ ಸರಕು ಅಂತ ಕೈಯಲ್ಲಿ ಎಣ್ಣೆ ಬಾಟಲಿ ಹಿಡಿದು ಫೇಮಸ್ ಆಗಿರುವಂತಹ ಸರಕು ಬಾಯ್ ಮುಂತಾದವರೇ ಸಾಕ್ಷಿಗಳು.

ಆದರೂ ಹೀಗೆ ಫೇಮಸ್ ಆಗೋದಕ್ಕೂ ಅದೃಷ್ಟ ಬೇಕೇ ಬೇಕು. ಏಕೆಂದರೆ ಅನೇಕ ಅತ್ಯಾದ್ಭುತವಾದ ಪ್ರತಿಭೆಗಳನ್ನು ಹೊಂದಿರುವ ಸಾಕಷ್ಟು ಪ್ರತಿಭಾಶೀಲರು ಸೋಶಿಯಲ್ ಮೀಡಿಯಾದಲ್ಲಿ ಇದ್ದಾರೆ. ಆದರೆ ಅಂತಹ ಪ್ರತಿಭೆ ಹೊಂದಿರುವ ಅನೇಕರಿಗೆ ತಿಪ್ಪರಲಾಗ ಹಾಕಿದರು ಫೇಮಸ್ ಆಗುವುದಕ್ಕೆ ಸಾಧ್ಯವಾಗುತ್ತಿಲ್ಲ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಬೇಕೆಂದು ಬಯಸಿದ ಅನೇಕರು ಇದನ್ನು ಹಲವು ಬಾರಿ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗೋದು ದುಡ್ಡು ಮಾಡೋದು ಸುಲಭ ಅಲ್ಲ, ಅದಕ್ಕೂ ತಾಕತ್ತು ಅದೃಷ್ಟ ಬೇಕು ಪ್ರತಿಭೆಯೊಂದು ಸಾಕಾಗಲ್ಲ ಅಂತ. ಜನರ ಈ ಮನಸ್ಥಿತಿ ಹೇಗೆ ಅಂತ ಅರಿತುಕೊಳ್ಳುವುದೇ ಬಹಳ ದೊಡ್ಡ ಕಷ್ಟದ ಕೆಲಸ.

ಇದನ್ನೂ ಓದಿ: ಬಿಜ್ನೋರ್‌ನ ದೇವಾಲಯದಲ್ಲಿ ವಿಚಿತ್ರ ಘಟನೆ: ಕಳೆದ 48 ಗಂಟೆಗಳಿಂದ ಹನುಮನ ಪ್ರತಿಮೆಗೆ ನಿರಂತರ ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ

ಹಾಗೆಯೇ ಇಲ್ಲೊಬ್ಬರು ತಂಗಿ ಬಹಳ ಸುಶ್ರಾವ್ಯವಾಗಿ ಹಾಡುತ್ತಾರೆ. ಅವರ ಕೋಗಿಲೆ ಕಂಠಕ್ಕೆ ಸ್ವತಃ ಗಾಯಕಿ ನಂದಿತಾ ಅವರೇ ಫಿದಾ ಆಗಿ ಚಪ್ಪಾಳೆಯ ಕಾಮೆಂಟ್ ಹಾಕಿದ್ದಾರೆ. ಅಂದಹಾಗೆ ಹೀಗೆ ಸುಂದರ ಸ್ವರದಿಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಸೆಳೆಯುತ್ತಿರುವ ಈ ಮಹಿಳೆಯ ಹೆಸರು ವಿಜಯಲಕ್ಷಿ. ಇವರ ಇನ್ಸ್ಟಾಗ್ರಾಮ್ ಖಾತೆ vijayalaxmi5843ನಲ್ಲಿ ಇವರು ಹಾಡಿರುವ ಹಲವು ಹಾಡುಗಳ ವಿಡಿಯೋಗಳಿದ್ದು, ಒಂದಕ್ಕಿಂತ ಒಂದು ಹಾಡಿನಲ್ಲಿ ಇವರ ಸೊಗಸಾದ ಸ್ವರ ಮಾಧುರ್ಯವನ್ನು ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಈ ತಂಗಿಯ ಹಾಡಿಗೆ ಮನಸೋತ್ತಿದ್ದು, ಇವರನ್ನು ಕೂಡ ಫೇಮಸ್ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಕೆಟ್ಟ ಕೆಟ್ಟದಾಗಿ ಹಾಡಿದವರನ್ನೆಲ್ಲಾ ಫೇಮಸ್ ಮಾಡುತ್ತಿರುವ ಜನರೇ ಇವರನ್ನು ಸ್ವಲ್ಪ ಫೇಮಸ್ ಮಾಡಿ ಇವರಿಗೂ ಅವಕಾಶ ಸಿಗುವಂತೆ ಮಾಡಿ ಎಂದು ಜನ ಕಾಮೆಂಟ್‌ಗಳಲ್ಲಿ ಕೇಳುತ್ತಿದ್ದಾರೆ.

ಇದನ್ನೂ ಓದಿ: ಕನಸುಗಳು ನಿಜವಾಗುತ್ತಾ: ಕನಸು ಬಿದ್ದ ಕೆಲ ವಾರದಲ್ಲೇ ಕನಸಲ್ಲಿ ಕಂಡ ರೀತಿಯಲ್ಲೇ ಸಾವನಪ್ಪಿದ ಗಾಯಕ

ತಮ್ಮ ಪ್ರೊಫೈಲ್‌ನಲ್ಲಿ ಮೆಡಿಕೋ ಸ್ಟೂಡೆಂಟ್ ಎಂದು ಇವರು ಬರೆದುಕೊಂಡಿದ್ದು, ಓದಿನ ಜೊತೆಗೆ ಹಾಡುವ ಹವ್ಯಾಸವನ್ನು ಬೆಳೆಸಿಕೊಂಡಂತೆ ಕಾಣುತ್ತಿದೆ. ಎಂತೆಂಥವರನೆಲ್ಲಾ ಫೇಮಸ್ ಮಾಡ್ತಿರುವ ಜನಗಳೇ ಇವರನ್ನು ಕೂಡ ಸ್ವಲ್ಪ ಫೇಮಸ್ ಮಾಡಿ ಆಕೆಗೂ ಒಳ್ಳೆಯ ವೇದಿಕೆ ಒದಗಿಸಿಕೊಡಬೇಕು ಎಂಬುದು ಈ ಹುಡುಗಿಯ ಧ್ವನಿ ಕೇಳಿದ ಅನೇಕರ ಅಭಿಪ್ರಾಯವಾಗಿದೆ. ಹೂವಿನ ಬಾಣನಾ ಅಲ್ರೋ ಬೆಳೆಸೋದು ಈ ಅಕ್ಕನ ನಿಜವಾದ ಪ್ರತಿಭೆನ ಬೆಳೆಸಿ ನಿಮಗೆ ಮನುಷ್ಯತ್ವ ಅನ್ನೋದು ಇದ್ರೆ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಗಾಯಕಿ ನಂದಿತಾ ಅವರು ಕೂಡ ಈಕೆಯ ವೀಡಿಯೋಗೆ ಚಪ್ಪಾಳೆಯ ಕಾಮೆಂಟ್ ಮಾಡಿದ್ದಾರೆ. ಇದಕ್ಕೆಪ್ರತಿಕ್ರಿಯಿಸಿದ ಜನ ಆಕೆಗೂ ಒಂದು ಒಳ್ಳೆಯ ವೇದಿಕೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ನಿಮಗೂ ಈಕೆಯ ಅದ್ಭುತವಾದ ಸ್ವರವನ್ನು ಕೇಳಬೇಕು ಎಂದು ಬಯಸಿದರೆ ನೀವು ಕೂಡ ಆಕೆಯ ಇನ್ಸ್ಟಾ ಖಾತೆಗೊಮ್ಮೆ ಭೇಟಿ ನೀಡಿ. ಆಕೆಯ ಸ್ವರ ಮಾಧುರ್ಯ ನಿಮ್ಮನ್ನು ಸೆಳೆಯುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನ್ನ ಸಿನಿಮಾ ನೋಡಿ' ಎಂದು ಪಾಂಪ್ಲೆಂಟ್ ಹಂಚಿದ್ದ ಯಶ್'.. ಓಲ್ಡ್ ಫೋಟೋ ಈಗ ವೈರಲ್!
Karna Serial: ಕರ್ಣ-ನಿಧಿ ಮತ್ತೆ ದೂರ… ಪ್ರೇಮಿಗಳನ್ನು ಒಂದು ಮಾಡದ ಸೀರಿಯಲ್ ತಂಡಕ್ಕೆ ವೀಕ್ಷಕರ ಹಿಡಿಶಾಪ