ರಮಣಂಗೆ ಪಾಠ ಹೇಳಿಕೊಡುವ ರಾಧಾ ಮಿಸ್ ಈಗ ಸ್ಯಾಂಡಲ್‌ವುಡ್‌ಗೆ | ’ಕಳ್ಬೆಟ್ಟದ ದರೋಡೆಕೋರರು’ ಸಿನಿಮಾಗೆ ನಾಯಕಿಯಾಗಿ ಶ್ವೇತಾ ಆರ್ ಪ್ರಸಾದ್ |
ಬೆಂಗಳೂರು (ಫೆ. 23): ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಮುಗ್ಧ ಅಭಿನಯದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಕಿರುತೆರೆ ಲೋಕದಲ್ಲಿ ಮೋಡಿ ಮಾಡಿದ್ದಾರೆ.
ರಾಧಾ ರಮಣ’ ಖ್ಯಾತಿಯ ರಾಧಾ ಮಿಸ್ ಗ್ಲಾಮರಸ್ ಫೋಟೋಗಳು
ಶ್ವೇತಾ ಈಗ ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಹಾರಿದ್ದಾರೆ. ನಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಈ ವಾರ ತೆರೆ ಕಂಡ ’ಕಳ್ಬೆಟ್ಟದ ದರೋಡೆಕೋರರು’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ಈ ಚಿತ್ರದಲ್ಲಿ ಮುಗ್ಧ ಹುಡುಗಿ ಪಾತ್ರದಲ್ಲಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ದೀಪಕ್ ಮಧುವನಹಳ್ಳಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಶ್ವೇತಾಗೆ ’ರಾಮ ರಾಮರೇ’ ಚಿತ್ರದ ಖ್ಯಾತಿಯ ನಟರಾಜ್ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ದಾನಪ್ಪ, ಹೇಮಂತ್ ಸುಶೀಲ್, ಸಿದ್ದರಾಜ್, ಕುಮುದವಲ್ಲಿ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ನಟಿಸಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು ಅನೂಪ್ ಸೀಳೀನ್ ಸಂಗೀತ ಸಂಯೋಜನೆ ಮಾಡಿದ್ದಾರೆ.