ಶರಣ್‌ ಚಿತ್ರಕ್ಕೆ ಸಾಲು ಸಾಲು ರಜೆಯ ಅಡ್ವಾಂಟೇಜ್‌!

Published : Sep 28, 2019, 10:28 AM IST
ಶರಣ್‌ ಚಿತ್ರಕ್ಕೆ ಸಾಲು ಸಾಲು ರಜೆಯ ಅಡ್ವಾಂಟೇಜ್‌!

ಸಾರಾಂಶ

ಸಿನಿಮಾಕ್ಕೂ ಹಬ್ಬಗಳಿಗೂ ಅವಿನಾಭಾವ ಸಂಬಂಧ. ಪ್ರತಿವರ್ಷವೂ ಹಬ್ಬದ ಹೊತ್ತಿಗೆ ಬಿಡುಗಡೆ ಮಾಡಲಿಕ್ಕೆಂದೇ ಸಿನಿಮಾ ನಿರ್ಮಾಣ ಮಾಡಿ ಕಾಯುವ ನಿರ್ಮಾಪಕರಿದ್ದಾರೆ. ವರಮಹಾಲಕ್ಷ್ಮೇ,, ದೀಪಾವಳಿ, ಗಣೇಶೋತ್ಸವ ಮುಂತಾದ ಹಬ್ಬಗಳ ಹಾಗೆಯೇ ದಸರಾ ಕೂಡ ಹೊಸ ಸಿನಿಮಾಗಳಿಗೆ ವಿಶೇಷ ಆಕರ್ಷಣೆ. ಈಗ ಶಾಲೆಗಳಿಗೆ ದಸರಾ ರಜೆಯೂ ಶುರುವಾಗುವುದರಿಂದ ಸಿನಿಮಾ ನಿರ್ಮಾಪಕರಿಗೆ ಡಬಲ್‌ ಬೋನಸ್ಸು.

ಈ ಅವಕಾಶವನ್ನು ಕನ್ನಡ ಚಿತ್ರರಂಗ ಬಳಸಿಕೊಳ್ಳುತ್ತಿಲ್ಲ ಎಂದೇ ಹೇಳಬೇಕು. ಹಿಂದಿಯ ಅದ್ದೂರಿ ಸಿನಿಮಾ ವಾರ್‌, ತೆಲುಗಿನ ಬಹುನಿರೀಕ್ಷಿತ ಸೈರಾ - ಈ ವಾರ ತೆರೆಕಾಣುತ್ತಿವೆ. ಆದರೆ ಕನ್ನಡದಲ್ಲಿ ದಸರಾ ಸಂಭ್ರಮಕ್ಕೆ ಹೊಸ ಚಿತ್ರಗಳು ಬರುತ್ತಿಲ್ಲ. ಹಾಗೆ ನೋಡಿದರೆ ಅಕ್ಟೋಬರ್‌ 2 ಕನ್ನಡ ಚಿತ್ರರಂಗದ ಪಾಲಿಗೆ ಸಡಗರದ ವಾರವೇನೂ ಅಲ್ಲ. ಹಬ್ಬದ ಸಂಭ್ರಮಕ್ಕೆ ಸ್ಟಾರುಗಳ ಸಿನಿಮಾ ಸಾಥ್‌ ನೀಡುತ್ತಿಲ್ಲ.

ನಾಗಿಣಿ ಪಾತ್ರದಲ್ಲಿರುವ ಈ ನಟ ಯಾರೆಂದು ಥಟ್ ಅಂತ ಹೇಳಿ!

ಶರಣ್‌ ನಿರ್ದೇಶನದ ಅಧ್ಯಕ್ಷ ಇನ್‌ ಅಮೆರಿಕಾ ಮಾತ್ರ ದಸರಾ ಸಮಯಕ್ಕೆ ಬರಲೆಂದು ಪ್ಲಾನ್‌ ಮಾಡಿಕೊಂಡ ಸಿನಿಮಾ. ಹೀಗಾಗಿ ದಸರಾ ರಜೆಯ ಅನುಕೂಲವನ್ನು ಶರಣ್‌ ಪೂರ್ತಿಯಾಗಿ ಪಡೆದುಕೊಳ್ಳಲಿದ್ದಾರೆ. ಹಾಗೆ ನೋಡಿದರೆ ಮಕ್ಕಳ ಪಾಲಿಗೆ ಶರಣ್‌ ಕ್ರೇಜ್‌ ಎಂದೇ ಹೇಳಬೇಕು. ಅವರ ಹಿಂದಿನ ಸಿನಿಮಾಗಳು ಕೂಡ ಮಕ್ಕಳ ಮನಗೆದ್ದಿದ್ದವು.

ಅಧ್ಯಕ್ಷ ಇನ್ ಅಮೆರಿಕಾ: ಶರಣ್ ಕಾಮಿಡಿ ನೋಡಿ ಮಜಾ ತಗೊಳ್ಳಿ!

ಮಿಕ್ಕ ದಿನಗಳಲ್ಲಿ ಸ್ಟಾರುಗಳ ಎರಡೋ ಮೂರೋ ಸಿನಿಮಾ ಬಂದರೆ ಕ್ಲಾಷ್‌ ಆಗುತ್ತದೆ. ಅದೇ ಹಬ್ಬದ ಸಂದರ್ಭದಲ್ಲಾದರೆ ಮೂರು ಸಿನಿಮಾಗಳಿಗೂ ಪ್ರೇಕ್ಷಕರು ಬರುತ್ತಾರೆ. ಹಿಂದೆಲ್ಲ ಹಬ್ಬದ ದಿನ ಮೂರು ನಾಲ್ಕು ಚಿತ್ರಗಳು ತೆರೆಕಾಣುತ್ತಿದ್ದವು. ಕನ್ನಡದಲ್ಲಿ ಐದಾರು ಸೂಪರ್‌ಸ್ಟಾರುಗಳಿದ್ದರೂ, ಹಬ್ಬದ ಹೊತ್ತಿಗೆ ಒಂದು ಸಿನಿಮಾ ಸಿದ್ಧಮಾಡಲು ಆಗದೇ ಇರುವುದು ಪ್ಲಾನಿಂಗ್‌ ಕೊರತೆಯೆಂದೇ ಹೇಳಬಹುದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!