ಥೇಟ್ ಡಾ ರಾಜ್‌ ತರ ಇರೋ ಅವರ ಸಂಬಂಧಿಕ ಡ್ಯೂಪ್ ಆಗಿ ಇರ್ತಿದ್ರು, ಯಾರವರು...?

Published : Jun 25, 2025, 05:57 PM ISTUpdated : Jun 25, 2025, 06:04 PM IST
Shankar Nag Dr Rajkumar

ಸಾರಾಂಶ

ನಟ ಶಂಕರ್‌ ನಾಗ್ ನಿರ್ದೇಶನದ ಹಲವು ಸಿನಿಮಾಗಳು ಗಳಿಕೆಯಲ್ಲಿ ಅಂದು ಭಾರೀ ಸಕ್ಸಸ್ ಕಂಡಿತ್ತು. ಆದರೆ, ಒಂದು ಮುತ್ತಿನ ಕಥೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿಲ್ಲ. ಸ್ಟಾರ್ ನಟ ಡಾ ರಾಜ್‌ಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಶಂಕರ್‌ ನಾಗ್ ಜೋಡಿ ಪ್ರೇಕ್ಷಕರಿಗೆ ತೆರೆಯಲ್ಲಿ ಕಮಾಲ್ 

ಶಂಕರ್‌ ನಾಗ್ (Shankar Nag) ನಿರ್ದೇಶನ ಹಾಗೂ ಡಾ ರಾಜ್‌ಕುಮಾರ್ (Dr Rajkumar) ನಟನೆಯ 'ಒಂದು ಮುತ್ತಿನ ಕಥೆ (Ondu Muttina Kathe)' ಸಿನಿಮಾ ಕನ್ನಡದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಅಂಡರ್‌ ವಾಟರ್ (ನೀರಿನಾಳಕ್ಕೆ ಇಳದು ಶೂಟಿಂಗ್) ಶೂಟಿಂಗ್ ಮಾಡಿದ ಕನ್ನಡದ ಮೊಟ್ಟಮೊದಲ ಸಿನಿಮಾ ಈ ಒಂದು ಮುತ್ತಿನ ಕಥೆ. ಅಷ್ಟೇ ಅಲ್ಲ, ವಿದೇಶದಲ್ಲಿ ಅಂಡರ್‌ ವಾಟರ್ ಶೂಟಿಂಗ್ ನಡೆಸಿದ ಈ ಸಿನಿಮಾ ಅಂದು ಸಾಕಷ್ಟು ಸುದ್ದಿಯಾಗಿತ್ತು. ಡಾ ರಾಕ್‌ಕುಮಾರ್ ಹಾಗೂ ಅರ್ಚನಾ ನಟನೆಯ ಈ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲಲಿಲ್ಲ.

ನಟ ಶಂಕರ್‌ ನಾಗ್ ನಿರ್ದೇಶನದ ಹಲವು ಸಿನಿಮಾಗಳು ಗಳಿಕೆಯಲ್ಲಿ ಅಂದು ಭಾರೀ ಸಕ್ಸಸ್ ಕಂಡಿತ್ತು. ಆದರೆ, ಒಂದು ಮುತ್ತಿನ ಕಥೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿಲ್ಲ. ಕನ್ನಡದ ಸ್ಟಾರ್ ನಟ ಡಾ ರಾಜ್‌ಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಶಂಖರ್‌ ನಾಗ್ ಜೋಡಿ ಪ್ರೇಕ್ಷಕರಿಗೆ ತೆರೆಯಲ್ಲಿ ಕಮಾಲ್ ಮಾಡಲು ಅದ್ಯಾಕೋ ಸಾಧ್ಯವಾಗಲೇ ಇಲ್ಲ. ಆದರೆ, ಈ ಸಿನಿಮಾವನ್ನು ವಿಮರ್ಶಕರು, ಬಹಳಷ್ಟು ಕನ್ನಡ ಪ್ರೇಕ್ಷಕರು ಹಾಗೂ ರಾಜ್‌ಕುಮಾರ್-ಶಂಕರ್‌ ನಾಗ್ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಇಂದಿಗೂ ಕೂಡ ಹಲವರು ಈ ಸಿನಿಮಾವನ್ನು ಕೊಂಡಾಡುತ್ತಾರೆ.

ಡಾ ರಾಜ್‌ಕುಮಾರ್ ನಟನೆಯ ಒಂದು ಮುತ್ತಿನ ಕಥೆ ಚಿತ್ರದ ಈ ಒಂದು ಸೀಕ್ರೆಟ್ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಬಯಲಾಗಿದೆ. ಅದೇನೆಂದರೆ, ಈ ಸಿನಿಮಾದ ಚಿತ್ರೀಕರಣದ ವೇಳೆ ಕೆಲವು ನಿಮಿಷಗಳ ಕಾಲ ಸ್ವತಃ ಡಾ ರಾಜ್‌ಕುಮಾರ್ ಅವರೇ ನೀರಿನ ಆಳದಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಆದ ಅದು ದೊಡ್ಡ ಸುದ್ದಿಯೂ ಆಗಿತ್ತು. ಆದರೆ, ಅಲ್ಲಿರುವ ಎಲ್ಲಾ ದೃಶ್ಯಗಳಲ್ಲಿ ಅಣ್ಣಾವ್ರು ನಿಜವಾಗಿ ನೀರಿನಾಳದ ಶೂಟಿಂಗ್‌ನಲ್ಲಿ ಭಾಗಿ ಆಗಿರಲಿಲ್ಲ. ಹಲವು ರೆಫರೆನ್ಸ್ ಶಾಟ್‌ಗಳಲ್ಲಿ ರಾಜ್‌ಕುಮಾರ್ ಅವರನ್ನೇ ಹೋಲುವ ವ್ಯಕ್ತಿಯನ್ನು ಬಳಸಿಕೊಳ್ಳಲಾಗಿತ್ತು. ಹಾಗಿದ್ದರೆ ಅವರು ಯಾರು ಗೊತ್ತೇನು?

ಹೌದು, 'ಒಂದು ಮುತ್ತಿನ ಕಥೆ' ಸೇರಿದಂತೆ ಡಾ ರಾಜ್‌ಕುಮಾರ್ ನಟನೆಯ ಹಲವು ಸಿನಿಮಾಗಳಲ್ಲಿ ಅವರನ್ನೇ ಹೋಲುವ ಅವರದೇ ಸಂಬಂಧಿಕರೊಬ್ಬರು ಶೂಟಿಂಗ್‌ನಲ್ಲಿ ಡ್ಯೂಪ್ ರೀತಿ ಬಳಕೆ ಆಗುತ್ತಿದ್ದರು. ಅವರೂ ಬೇರೆ ಯಾರೂ ಅಲ್ಲ, ಗಾಜನೂರಿನ ವೆಂಕಟಪ್ಪ ಎಂಬವರು. ಅಣ್ಣಾವ್ರ ಸಂಬಂಧಿಕರಾಗಿದ್ದ ವೆಂಕಟಪ್ಪ ಅವರು ಡಾ ರಾಜ್‌ಕುಮಾರ್ ಮಾಡಲಾಗದ ಹಲವು ರಿಸ್ಕಿ ಶಾಟ್‌ಗಳಲ್ಲಿ ಹಾಗೂ ಡ್ಯೂಪ್ ರೀತಿ ಕೆಲಸ ಮಾಡುತ್ತಿದ್ದರು. ಅವರು ನೋಡಲು ಥೇಟ್ ರಾಜ್‌ಕುಮಾರ್ ಅವರಂತೇ ಇದ್ದರು. ಹೀಗಾಗಿ, ಸಿನಿಮಾ ನೋಡುವ ಯಾರಿಗೂ ಕೂಡ ಸಂದೇಹ ಬರುವಂತೆಯೇ ಇರಲಿಲ್ಲ.

ಅದರಲ್ಲೂ ಮುಖ್ಯವಾಗಿ ಡಾ ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಸಿನಿಮಾದಲ್ಲಿ ಹಲವು ನಿಮಿಷಗಳ ಕಾಲ ನೀರಿನೊಳಕ್ಕೇ ಇದ್ದು ಶೂಟಿಂಗ್ ಮಾಡಬೇಕಾಗಿತ್ತು. ಅದರಲ್ಲಿ ಕೆಲವು ದೃಶ್ಯಗಳಲ್ಲಿ ಮಾತ್ರ ಡಾ ರಾಜ್‌ಕುಮಾರ್ ನೀರಿನಾಳಕ್ಕೆ ಇಳಿದಿದ್ದರು ಅಷ್ಟೇ. ಉಳಿದ ಹೆಚ್ಚಿನ ಸೀನ್‌ಗಳಲ್ಲಿ ಅಣ್ಣಾವ್ರ ಸಂಬಂಧಿಕ ವೆಂಕಟಪ್ಪನವೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಂಗತಿ ಅಂದು ಅಷ್ಟೇನೂ ಸುದ್ದಿಯಾಗಲಿಲ್ಲ. ಆದರೆ, ಇಂದು ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ಅದು ಜಗತ್ತಿನ ತುಂಬಾ ಹಬ್ಬುತ್ತಿದೆ. ಡ್ಯೂಪ್ ಬಳಸಿದವರಲ್ಲಿ ಡಾ ರಾಜ್‌ಕುಮಾರ್ ಅವರು ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ.. ಅದು ಅಂದಿನಿಂದ ಇಂದಿನವರೆಗೆ ಬಳಕೆಯಾಗುತ್ತಲೇ ಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep