
ದಕ್ಷಿಣ ಭಾರತದ ಮಲೆಯಾಳ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಚಕ್ಕಪಳಂ ಧಾರಾವಾಹಿಯಲ್ಲಿ ಜನಪ್ರಿಯ ಹಾಸ್ಯನಟ ರಫಿ. ಸುಮೇಶ್ ಪಾತ್ರದಲ್ಲಿ ನಟಿಸಿ ಮಲೆಯಾಳಂನಲ್ಲಿ ಜನಪ್ರಿಯ ನಟ ಎನಿಸಿಕೊಂಡಿದ್ದರು. ಚಕ್ಕಪಳಂ ನಂತರ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿ ನೋಡಿದ ಮಹೀನಾ ಮುನ್ನ ರಫಿಯನ್ನ ಇಷ್ಟಪಟ್ಟರು. ಇದಾದ ಕೆಲವೇ ದಿನಗಳಲ್ಲಿ ನಟ ರಫಿ ಹಾಗೂ ಮಹಿನಾಳ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಕಳೆದ ವರ್ಷ ದುಬೈಗೆ ಹೋದ ವಿಷಯ ಮಹೀನಾ ಹಂಚಿಕೊಂಡಿದ್ದರು. ಜೊತೆಗೆ, ಅಲ್ಲಿಂದ ವಾಪಸ್ ಊರಿಗೆ ಬಂದಾಗಲೂ ಈ ವಿಷಯವನ್ನು ವ್ಲಾಗ್‌ಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಈಗ ಮಾಡಿದ ವಿಡಿಯೋ ಹಾಗೂ ಫೋಟೋಗಳಲ್ಲಿ ರಫಿ ಇರಲಿಲ್ಲ. ಆಗ ನೆಟ್ಟಿಗರು ಮಹಿನಾ ರಫಿ ಜೊತೆಗಿನ ಸಂಬಂಧದಿಂದ ಬೇರ್ಪಟ್ಟಿದ್ದಾರಾ? ಎಂಬ ಅನುಮಾನದ ಪ್ರಶ್ನೆಗಳು ಕೂಟ ಹುಟ್ಟಿಕೊಂಡಿಡದ್ದವು. ಆದರೆ, ಈ ಬಗ್ಗೆ ಮಹೀನಾ ಏನೂ ಹೇಳಿರಲಿಲ್ಲ. ಇದೀಗ ಮಹೀನಾ ಒಂದು ಹೊದ ವಿಡಿಯೋ ಮಾಡಿ ಬಿಟ್ಟಿದ್ದು, ಅದರಲ್ಲಿ ನೆಟ್ಟಿಗರ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಬಂದಿವೆ.
ಈ ವಿಡಿಯೋದಲ್ಲಿ 'ರಫಿ ಜೊತೆ ಬೇರ್ಪಟ್ಟಿದ್ದೇನೆ' ಅಂತ ಮಹೀನಾ ಹೇಳಿದ್ದಾರೆ. ನನಗೆ ನಡೆದಿದ್ದನ್ನೆಲ್ಲಾ ಹೇಳೋಕೆ ಇಷ್ಟ ಇಲ್ಲ. ನಮ್ಮಿಬ್ಬರ ಗೌಪ್ಯತೆಯನ್ನು ಪರಿಗಣಿಸಿ ನಮ್ಮ ಖಾಸಗಿತನಕ್ಕೆ ಗೌರವ ಕೊಡಿ. ನಾನು ನಮ್ಮ ಸಂತೋಷವನ್ನು ಮಾತ್ರ ನಿಮಗೆ ತೋರಿಸಿದ್ದೇನೆ. ಆದರೆ, ಇಲ್ಲಿನ ನಿಜ ಜೀವನದ ಸ್ವರೂಪವೇ ಬೇರೆಯಾಗಿತ್ತು. ರಫಿ ಫೇಮಸ್ ಅಂತ ಮದುವೆ ಆಗಿ, ಅದರಿಂದ ತಾನೂ ಫೇಮಸ್ ಆಗಿ ನಂತರ ಮದುವೆ ಮುರಿದುಕೊಂಡು ಬಿಟ್ಟು ಹೋಗಿದ್ದಾಳೆ ಎಂದು ಕೆಲವರು ಹೇಳಿದ್ದಾರೆ.
ಆದರೆ, ನಾನು ರಫಿಯನ್ನು ಇಷ್ಟಪಟ್ಟು ಪ್ರೀತಿಸಿ ಮದುವೆ ಮಾಡಿಕೊಂಡಿದ್ದೆನು. ಹಾಸ್ಯನಟ ಅಂದರೆ ನಿಜ ಜೀವನದಲ್ಲಿಯೂ ಹಾಗೆಯೇ ನಗಿಸುತ್ತಲೇ ಇರುತ್ತಾರೆ ಎಂದು ತಿಳಿದುಕೊಳ್ಳಬೇಡಿ. ಅವರಿಗೆ ಇನ್ನೊಂದು ಜೀವನ ಇರುತ್ತದೆ ಎಂದು ಮಹೀನಾ ಹೇಳಿದ್ದಾರೆ.
ಇನ್ನು ರಫಿಯನ್ನ ಬಿಟ್ಟು ದುಬೈಗೆ ಬಂದು ಬದಲಾಗಿದ್ದೀನಿ ಅನ್ನೋ ಕಮೆಂಟ್‌ಗಳಿಗೆ ಮಹೀನಾ ಉತ್ತರಿಸಿದ್ದಾರೆ. ಕೆರಿಯರ್, ಸ್ವಾವಲಂಬನೆ, ಅಪ್ಪ-ಅಮ್ಮನನ್ನ ನೋಡ್ಕೊಳ್ಳೋಕೆ ಇಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹೀನಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.