
ಮ್ಯಾನ್ ಆಫ್ ದಿ ಲುಕ್ ಆ್ಯಂಡ್ ಮ್ಯಾನ್ ಆಫ್ ಚಾರ್ಮ್ 'ಜೊತೆ ಜೊತೆಯಲಿ' ಧಾರಾವಾಹಿಯ ಹೀರೋ ಅರ್ಯವರ್ಧನ್ ಅಲಿಯಾಸ್ ಅನಿರುದ್ಧ್ ವಯಸ್ಸಿಗೆ ತಕ್ಕಂತೆ ಘನತೆ, ಗಾಂಭೀರ್ಯ, ಪ್ರಬುದ್ಧತೆ ಇರುವ ವ್ಯಕ್ತಿ. ನಟನೆ ಕೂಡಾ ಅಷ್ಟೇ ಅದ್ಭುತವಾಗಿದೆ. ಇದು ವರ್ಧನ್ ಗ್ರೂಪ್ ಆಫ್ ಕಂಪನಿ ಒಡೆಯನಿಗೆ ಒಂದು ಚಾರ್ಮನ್ನು ತಂದುಕೊಟ್ಟಿದೆ. ಆರ್ಯವರ್ಧನ್ ಪಾತ್ರಕ್ಕೆ ಇರುವ ಸ್ಟೈಲ್ ಹಾಗೂ ಮ್ಯಾನರಿಸಂ ಹುಡುಗಿಯರ ಡ್ರಿಮ್ ಬಾಯ್ ಕ್ವಾಲಿಟೀಸ್ ಹೊಂದಿದೆ.
ಏನಪ್ಪಾ! ಆರ್ಯವರ್ಧನ್‌ಗೆ ಅನು ಮಾತ್ರ ಅನ್ಕೊಂಡ್ರೆ ಊರ್ ಹುಡ್ಗಿರೆಲ್ಲಾ ಫ್ಯಾನ್ಸ್!
‘ದಿ ಮೋಸ್ಟ್ ಅಟ್ರ್ಯಾಕ್ಟಿವ್ ಲುಕ್’ ಎಂದೇ ಖ್ಯಾತಿ ಪಡೆದಿರುವ ಅನಿರುದ್ಧ್ ಗೆ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಹರಿದು ಬರುತ್ತಿದೆ. ಆದರೆ ಕಾಲ್ ಶೀಟ್ ಫ್ರೀ ಇಲ್ಲದಷ್ಟು ತಮ್ಮ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಿಂದ ಕಿರುತೆರೆಗೆ ಬಂದ ಮೇಲೆ ಇವರ ಸಂಭಾವನೆ ಗಗನ ಮುಟ್ಟಿದೆ. ಒಂದು ದಿನಕ್ಕೆ ಇವರು ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಿ!
'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?
ಒಂದು ದಿನದ ಶೂಟಿಂಗ್‌ಗೆ ಅನಿರುದ್ಧ್ ಸುಮಾರು 35 ಸಾವಿರ ಸಂಭಾವನೆ ಪಡೆಯುತ್ತಾರೆ ಎಂದು ಸಿನಿ ಮೂಲಗಳಿಂದ ಕೇಳಿ ಬರುತ್ತಿದೆ. ಐಶಾರಾಮಿ ಜೀವನ ನಡೆಸುತ್ತಿರುವ ಅರ್ಯವರ್ಧನ್‌ಗೆ 20 ವರ್ಷದ ತುಂಟ ಹುಡುಗಿ ಅನು ಜೊತೆ ಆಗುವ ಸ್ನೇಹ ಹಾಗೂ ಪ್ರೀತಿಯೇ ಧಾರಾವಾಹಿಯ ಕುತೂಹಲ ಹೆಚ್ಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.