ಗ್ಯಾಂಗ್-2 ಸಿನಿಮಾದ ತನ್ನ ನಗ್ನ ದೃಶ್ಯದ ಕುರಿತು ನಟಿ ಸಂಜನಾ ಹೇಳಿದ್ದೇನು?

Published : Jul 18, 2017, 11:39 AM ISTUpdated : Apr 11, 2018, 12:51 PM IST
ಗ್ಯಾಂಗ್-2 ಸಿನಿಮಾದ ತನ್ನ ನಗ್ನ ದೃಶ್ಯದ ಕುರಿತು ನಟಿ ಸಂಜನಾ ಹೇಳಿದ್ದೇನು?

ಸಾರಾಂಶ

ಹಿಂದಿನ ದಿನದ ಪತ್ರಿಕಾಗೋಷ್ಠಿ ವೇಳೆಯೂ ಸಂಜನಾ ಈ ಕುರಿತು ಮಾತನಾಡಿದ್ದರು. ದೃಶ್ಯದಲ್ಲಿ ತಾನು ಪೂರ್ಣಬೆತ್ತಲಾಗಿರಲಿಲ್ಲ. ಬೆನ್ನಿನ ಭಾಗ ಬೆತ್ತಲಾಗಿದ್ದು ನಿಜ. ಮುಂಭಾಗದಲ್ಲಿ ಬಟ್ಟೆ ತೊಟ್ಟಿದ್ದೆ. ಆದರೆ, ಸಿಜಿ ಗ್ರಾಫಿಕ್ಸ್ ವರ್ಕ್'ನಲ್ಲಿ ಪೂರ್ಣ ಬೆತ್ತಲಾದಂತೆ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು.

ಬೆಂಗಳೂರು(ಜುಲೈ 18): ಗ್ಯಾಂಗ್-2 ಸಿನಿಮಾದಲ್ಲಿ ಸಂಜನಾ ನಟಿಸಿರುವ ಬೆತ್ತಲೆ ದೃಶ್ಯದ ತುಣುಕೊಂದು ಲೀಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಈ ಕುರಿತು ಸುವರ್ಣನ್ಯೂಸ್ ಜೊತೆ ಮಾತನಾಡಿರುವ ನಟಿ ಸಂಜನಾ, ತಾನು ದೃಶ್ಯದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಲೀಕ್ ಆಗಿರುವ ದೃಶ್ಯದಲ್ಲಿ ತನ್ನನ್ನು ಬೆತ್ತಲೆಯಾಗಿ ತೋರಿಸಲಾಗುತ್ತಿದೆಯಾದರೂ ವಾಸ್ತವದಲ್ಲಿ ತಾನು ಪೂರ್ಣ ನಗ್ನಳಾಗಿರಲಿಲ್ಲ. ಟೆಕ್ನಿಕಲ್ ಆಗಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದೂ ಈ ವೇಳೆ ಸಂಜನಾ ಸ್ಪಷ್ಟನೆ ನೀಡಿದ್ದಾರೆ.

ಏನಿದೆ ವಿಡಿಯೋದಲ್ಲಿ..?
ಚಿತ್ರದಲ್ಲಿ ಸಂಜನಾಳ ಪಾತ್ರದ ಮೇಲೆ ಪೊಲೀಸರು ಹಿಂಸೆ ನೀಡುವ ದೃಶ್ಯವಿದೆ. ಮಹಿಳೆಯ ದೇಹದ ಮೇಲಿನ ಬಟ್ಟೆಯೆಲ್ಲವನ್ನೂ ತೆಗೆದು ನಗ್ನಗೊಳಿಸುವ ಪೊಲೀಸ್, ಕ್ಯಾಟರ್'ಪಿಲ್ಲರ್'ನಿಂದ ಆಕೆಯ ದೇಹಕ್ಕೆ ಹೊಡೆದು ಗಾಯಗೊಳಿಸುತ್ತಾನೆ. ಆ ಮಹಿಳೆ ನೋವಿನಿಂದ ಯಾತನೆ ಪಡುವ ದೃಶ್ಯವಿದೆ.

ಕಥೆಗೆ ಬೇಕಿತ್ತು..
ಈ ದೃಶ್ಯದ ಬಗ್ಗೆ ಮಾತನಾಡಿದ ಸಂಜನಾ, ಥಾಯ್ಲೆಂಡ್'ಗೆ ಹೋಗಿ ಬೀಚ್'ನಲ್ಲಿ ಡುಯೆಟ್ ಚಿತ್ರೀಕರಿಸಲು ಆಗುವುದಿಲ್ಲ. ಚಿತ್ರದ ಕಥೆ ಹೇಗಿದೆಯೋ ಹಾಗೆಯೇ ಶೂಟ್ ಮಾಡಬೇಕಾಗುತ್ತದೆ. ಅದನ್ನೇ ನಾವು ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಚಾರಕ್ಕೋಸ್ಕರ ಈ ದೃಶ್ಯವನ್ನು ಆನ್'ಲೈನ್'ನಲ್ಲಿ ಲೀಕ್ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಜನಾ, ಇದು ಪ್ರಚಾರದ ಗಿಮಿಕ್ ಖಂಡಿತ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ನಾನು ಚಿತ್ರರಂಗಕ್ಕೆ ಬಹಳ ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಈ ದೃಶ್ಯದಲ್ಲಿ ನಡೆಯಬೇಕಿದ್ದೇ ಬೇರೆ, ನಡೆದದ್ದೇ ಬೇರೆ.. ಆನ್'ಲೈನ್'ನಲ್ಲಿ ಲೀಕ್ ಆಗಿರುವುದರಲ್ಲಿ ಏನೋ ತಪ್ಪಾಗಿದೆ ಅನಿಸುತ್ತೆ. ಚಿತ್ರತಂಡದ ಜೊತೆ ಮಾತನಾಡಿ ಸ್ಪಷ್ಟನೆ ನೀಡುತ್ತೇನೆ. ನಿರ್ದೇಶಕರು ಸೇರಿದಂತೆ ಚಿತ್ರತಂಡದವರು ನಿಜಕ್ಕೂ ತುಂಬಾ ಡಿಗ್ನಿಫೈಡ್ ಜನರು. ಇವರಿಂದ ಇಂಥ ಕೆಲಸ ಆಗಿರಲಿಕ್ಕಿಲ್ಲ. ಸುವರ್ಣನ್ಯೂಸ್ ಸ್ಟುಡಿಯೋಗೆ ನಮ್ಮ ಇಡೀ ಚಿತ್ರತಂಡದ ಜೊತೆ ಬಂದು ಮಾತನಾಡುತ್ತೇನೆ," ಎಂದು ಸಂಜನಾ ಹೇಳಿದ್ದಾರೆ.

ಹಿಂದಿನ ದಿನದ ಪತ್ರಿಕಾಗೋಷ್ಠಿ ವೇಳೆಯೂ ಸಂಜನಾ ಈ ಕುರಿತು ಮಾತನಾಡಿದ್ದರು. ದೃಶ್ಯದಲ್ಲಿ ತಾನು ಪೂರ್ಣಬೆತ್ತಲಾಗಿರಲಿಲ್ಲ. ಬೆನ್ನಿನ ಭಾಗ ಬೆತ್ತಲಾಗಿದ್ದು ನಿಜ. ಮುಂಭಾಗದಲ್ಲಿ ಬಟ್ಟೆ ತೊಟ್ಟಿದ್ದೆ. ಆದರೆ, ಸಿಜಿ ಗ್ರಾಫಿಕ್ಸ್ ವರ್ಕ್'ನಲ್ಲಿ ಪೂರ್ಣ ಬೆತ್ತಲಾದಂತೆ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು.

ಸಹನಟ ಕರಿಸುಬ್ಬು ಸ್ಪಷ್ಟನೆ:
ದೃಶ್ಯದಲ್ಲಿರುವುದು ಸಂಜನಾಳೇ. ಆದರೆ, ಚಿತ್ರೀಕರಣದ ವೇಳೆ ನಮ್ಮ ಕಣ್ಮುಂದೆ ಸಂಜನಾ ಬೆತ್ತಲಾಗಿರಲಿಲ್ಲ. ತಮ್ಮ ರಿಯಾಕ್ಷನ್'ನ ದೃಶ್ಯಗಳನ್ನು ಪ್ರತ್ಯೇಕವಾಗಿ ಶೂಟ್ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಶ್ರೀನಿವಾಸರಾಜು ನಿರ್ದೇಶನದ ಗ್ಯಾಂಗ್-2 ಸಿನಿಮಾದಲ್ಲಿ ಸಂಜನಾ ಗಲ್'ರಾಣಿ, ಪೂಜಾ ಗಾಂಧಿ, ರವಿಶಂಕರ್, ಕರಿಸುಬ್ಬು ಮೊದಲಾದವರು ನಟಿಸಿದ್ದಾರೆ. ನೈಜ ಕಥೆಯನ್ನಾಧರಿಸಿದ ಸಿನಿಮಾ ಇದೆನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Nandini Reddy ಕಣ್ಣೀರಿಗೆ ಕಾರಣರಾದ ನಿರ್ದೇಶಕ ಕೃಷ್ಣವಂಶಿ: ಬೆನ್ನಿಗೆ ನಿಂತ ರಮ್ಯಾ ಕೃಷ್ಣನ್ ಮಾಡಿದ್ದೇನು?
Samantha Pregnant Secret: 'ಸಮಂತಾ ಗರ್ಭಿಣಿ' ಗಾಸಿಪ್ ಬೆನ್ನಲ್ಲೇ ನಂದಿನಿ ರೆಡ್ಡಿ ಹೇಳಿಕೆ ಸಖತ್ ವೈರಲ್; ಗೆಳತಿ ಹೇಳಿದ್ದೇನು ಗೊತ್ತಾ?