
ಬೆಂಗಳೂರು(ಜು.18): ನವರಸ ನಾಯಕ ಜಗ್ಗೇಶ್ ಒಬ್ಬ ಅದ್ಭುತ ನಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದಾ ರಸಭರಿತವಾದ ಡೈಲಾಗ್'ಗಳ ಮೂಲಕವೇ ಹಾಸ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಜಗ್ಗೇಶ್, ಒಳ್ಳೆ ಗಾಯಕರೂ ಹೌದು ಇದೀಗ ಕರಾಟೆ ಕಿಂಗ್ ಶಂಕರ್ನಾಗ್ ಅವರ ಆಟೋರಾಜ ಚಿತ್ರದಲ್ಲಿರುವ, ಎವರ್ಗ್ರೀನ್ ಸಾಂಗ್ ‘ನಲಿವಾ ಗುಲಾಬಿ ಹೂವೇ’ ಹಾಡನ್ನ ಜಗ್ಗೇಶ್ ಅಭ್ಯಾಸ ಮಾಡಿದ್ದಾರೆ.
ರಾಜನ್-ನಾಗೇಂದ್ರ ಸಂಗೀತದ ಈ ಅದ್ಭುತ ಹಾಡನ್ನ ಅಷ್ಟೇ ತನ್ಮಯತೆಯಿಂದಲೇ ಹಾಡಿರೋ ಜಗ್ಗೇಶ್, ಫೇಸ್ ಬುಕ್ನಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಅಲ್ದೆ, ಯಾಕೋ ಶಂಕರ್ ತುಂಬಾ ನೆನಪಾದರು. ಅವರ ಹಾಡನ್ನ ನಿಮಗಾಗಿ ಹಾಡ್ತಿದ್ದೇನೆ ಅಂತಲೂ ಬರೆದು ಕೊಂಡಿದ್ದಾರೆ. ಇನ್ನು ಜಗ್ಗೇಶ್ ಹಾಡಿರೋ ಈ ಸಾಂಗ್ ಸಖತ್ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.