ಬಿಡುಗಡೆ ಮುನ್ನವೇ ₹100 ಕೋಟಿ ಕ್ಲಬ್ ಸೇರಿದ ಯಶ್ ರಾಮಾಯಣ: ಬೆಂಗಳೂರಿಗೆ ಸಿಕ್ಕಿದ ಸ್ಥಾನ ಏನು?

Published : Nov 04, 2026, 09:48 PM IST
Yash Ramayana

ಸಾರಾಂಶ

ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಸ್ಯಾಕ್‌ನಿಲ್ಕ್ ವರದಿ ಪ್ರಕಾರ, ಬ್ಲಾಕ್ಡ್ ಸೀಟ್‌ಗಳು ಸೇರಿದಂತೆ ಭಾರತದಾದ್ಯಂತ ಮುಂಗಡ ಟಿಕೆಟ್ ಬುಕಿಂಗ್..

ನಿತೇಶ್ ತಿವಾರಿ ನಿರ್ದೇಶನದ, ನಮಿತ್ ಮಲ್ಹೋತ್ರಾ ನಿರ್ಮಾಣದ, ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಅಭಿನಯದ ‘ರಾಮಾಯಣ’ ಚಿತ್ರವು ಬಿಡುಗಡೆ ಮುನ್ನ ಮುಂಗಡ ಟಿಕೆಟ್ ಬುಕಿಂಗ್‌ನಲ್ಲೇ ಬರೋಬ್ಬರಿ ₹100 ಕೋಟಿ ಮೊತ್ತದ ಗಡಿ ದಾಟಿ ಹೊಸ ದಾಖಲೆ ಬರೆದಿದೆ. ಈ ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಬಾಕ್ಸಾಫೀಸ್ ವಿಶ್ಲೇಷಣಾ ಸಂಸ್ಥೆ ಸ್ಯಾಕ್‌ನಿಲ್ಕ್ ನೀಡಿರುವ ವರದಿಯ ಪ್ರಕಾರ, ಬ್ಲಾಕ್ಡ್ ಸೀಟ್‌ಗಳು ಸೇರಿದಂತೆ ಚಿತ್ರವು ಭಾರತದಾದ್ಯಂತ ಅಡ್ವಾನ್ಸ್ ಬುಕಿಂಗ್ ಮೂಲಕ ಇದುವರೆಗೆ ಬರೋಬ್ಬರಿ ₹104.58 ಕೋಟಿ ಒಟ್ಟು ಕಲೆಕ್ಷನ್ ಬಾಚಿಕೊಂಡಿದೆ. ದೇಶದ 907 ಪ್ರಮುಖ ನಗರಗಳಲ್ಲಿ ನಿಗದಿಯಾಗಿರುವ ಒಟ್ಟು 87,881 ಪ್ರದರ್ಶನಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬರೋಬ್ಬರಿ 27.69 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ.

ಜಾಗತಿಕವಾಗಿ 59,000 ಸ್ಕ್ರೀನ್‌ಗಳಲ್ಲಿ ದಾಖಲೆಯ ಬಿಡುಗಡೆ

ಚಿತ್ರವು ವಿಶ್ವಾದ್ಯಂತ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಬರೋಬ್ಬರಿ 59,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಸುಮಾರು 9,000 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದರೆ, ಸೋನಿ ಪಿಕ್ಚರ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ವಿತರಣಾ ಪಾಲುದಾರಿಕೆಯಲ್ಲಿ ವಿದೇಶಗಳ 100ಕ್ಕೂ ಹೆಚ್ಚು ದೇಶಗಳ ಬರೋಬ್ಬರಿ 50,000 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಾಣುವ ಮೂಲಕ ಹಾಲಿವುಡ್ ಸಿನಿಮಾಗಳ ದಾಖಲೆಯನ್ನೂ ಹಿಂದಿಕ್ಕಿದೆ.

ಹಿಂದಿಯಲ್ಲಿ ಗರಿಷ್ಠ, ಕನ್ನಡದಲ್ಲೂ ಭರ್ಜರಿ ಕಲೆಕ್ಷನ್

ಹಿಂದಿ ಆವೃತ್ತಿಯು ₹85.37 ಕೋಟಿ ಗಳಿಸುವ ಮೂಲಕ ಸಿಂಹಪಾಲು ಪಡೆದುಕೊಂಡಿದೆ. ತೆಲುಗು ಆವೃತ್ತಿಯು ₹8.57 ಕೋಟಿ ಕಲೆಕ್ಷನ್ ಮಾಡಿದ್ದರೆ, ಕನ್ನಡ ಆವೃತ್ತಿಯು ₹7.86 ಕೋಟಿ ಗಳಿಸಿದೆ. ತಮಿಳು ಅವತರಣಿಕೆ ₹2.23 ಕೋಟಿ ಹಾಗೂ ಮಲಯಾಳಂ ಆವೃತ್ತಿ ₹54.74 ಲಕ್ಷ ಮೊತ್ತವನ್ನು ಮುಂಗಡ ಬುಕಿಂಗ್‌ನಲ್ಲಿ ಗಳಿಸಿವೆ.

ಬೆಂಗಳೂರಿಗೆ 3ನೇ ಸ್ಥಾನ

ನಗರವಾರು ಮುಂಗಡ ಟಿಕೆಟ್ ಮಾರಾಟದಲ್ಲಿ ರಾಷ್ಟ್ರ ರಾಜಧಾನಿ ವಲಯ ₹15.07 ಕೋಟಿ ಮೊತ್ತದೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮುಂಬೈ ₹12.93 ಕೋಟಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ₹10.63 ಕೋಟಿ ಕಲೆಕ್ಷನ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.

ವಿದೇಶಗಳಲ್ಲೂ ‘ರಾಮಾಯಣ’ ಸುನಾಮಿ

ವಿದೇಶಿ ಮಾರುಕಟ್ಟೆಗಳಲ್ಲೂ ಚಿತ್ರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಉತ್ತರ ಅಮೆರಿಕದಲ್ಲಿ ಪೇಯ್ಡ್ ಪ್ರಿವ್ಯೂಗಳ ಮೂಲಕವೇ ಚಿತ್ರ ಬರೋಬ್ಬರಿ ಸುಮಾರು ₹10 ಕೋಟಿಗೂ ಅಧಿಕ ಗಳಿಸಿದೆ. ಅಮೆರಿಕದಲ್ಲಿ ಮೊದಲ ವಾರಾಂತ್ಯದ ಒಟ್ಟಾರೆ ಮುಂಗಡ ಟಿಕೆಟ್ ಮಾರಾಟವು ಸದ್ಯ ಸುಮಾರು ₹25 ಕೋಟಿ ಸಮೀಪಿಸುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಮಂತಾ ಅವಳಿ ಮಕ್ಕಳಿಗೆ ತಾಯಿಯಾಗ್ತಿದ್ದಾರಾ? ಗೂಗ್ಲಿ ಬೆಡಗಿ ಕೊಟ್ರು ಸುಳಿವು: ಅಸಲಿಯತ್ತೇನು?
ತೆಲುಗು, ತಮಿಳಿನಲ್ಲಿ ಅಂಕಲ್‌ಗಳ ಜೊತೆ ಮದುವೆ, ರೊಮ್ಯಾನ್ಸ್: ಕೀರ್ತಿ, ರಾಧಿಕಾ ಕಾಮೆಂಟ್ ವೈರಲ್