Yash Toxic Trailer Launch: ಯಶ್ 'ಟಾಕ್ಸಿಕ್' ಟ್ರೇಲರ್; 'ಇಟ್ಸ್ ಟೈಮ್- ಐ ಆಮ್ ಕಮಿಂಗ್; ಅಪ್ಪ-ಮಗನ ಆಟ ಶುರು!

Published : Aug 08, 2026, 07:52 PM IST
Yash Toxic Trailer

ಸಾರಾಂಶ

ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇಂದು, 8 ಆಗಸ್ಟ್ 2026ರಂದು ಇದೀಗ ಬಿಡುಗಡೆ ಆಗಿದೆ. ಇದು ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ರೇಲರ್ ಹೊಸ ದಾಖಲೆ ಬರೆದರೂ ಅಚ್ಚರಿಯಲ್ಲ! ಅಂದಹಾಗೆ, ಇದೇ ತಿಂಗಳು ಅಂದರೆ 26 ಆಗಷ್ಟ್ 2026ರಂದು ಯಶ್ ನಟನೆಯ ಈ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ.

Yash Toxic Trailer Released- Toxic Movie Dialogue-It is Time I am Coming-Yash Dialogue became Viral: ಯಶ್ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ; 'ಇಟ್ಸ್ ಟೈಮ್- ಐ ಆಮ್ ಕಮಿಂಗ್' ಎನ್ನುವ ಡೈಲಾಗ್ ಭಾರೀ ವೈರಲ್!

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಆಗಿದ್ದು, 4 ನಿಮಿಷ 38 ಸೆಕೆಂಡ್ ಅವಧಿಯದ್ದಾಗಿದೆ. ಈ ಟ್ರೇಲರ್‌ನಲ್ಲಿ ತಂದೆ-ಮಗನ ಸೆಂಟಿಮೆಂಟ್ಸ್ ಇದೆ, ಐವರು ನಾಯಕಿಯರ ವಿಭಿನ್ನ ಪಾತ್ರವಿದೆ, ಕಥೆಯ ತಿರಳು ತಿಳಿಯಲಾಗದಿದ್ದರೂ ಎಲ್ಲೋ ಒಮದು ಕಡೆ ಇದು ಪ್ರೀತಿ ಹಾಗೂ ಮೋಸದ ಬಲೆಯ ಕಥೆ ಎಂಬ ಸಂದೇಹಕ್ಕೆ ದಾರಿ ಮಾಡಿಕೊಟ್ಟಿದೆ. ಟ್ರೇಲರ್‌ನಲ್ಲಿ ನಾಯಕ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಲುಕ್ ಹಾಗೂ ಮ್ಯಾನರಿಸಂ ಮೂಲಕ ಇಡೀ ಟ್ರೇಲರ್ ಅವರಿಸಿರುವುದು ಅರ್ಥವಾಗುವಂತಿದೆ.

ನಾಯಕಿಯರ ಪಾತ್ರಗಳು ವಿಭಿನ್ನವಾಗಿವೆ ಎಂಬ ಹಿಂಟ್ ಸಿಗುತ್ತದೆ. ತಾರಾ ಸುತಾರಿಯಾ ಹಾಗೂ ಕಿಯಾರಾ ಅಡ್ವಾನಿ ಇಬ್ಬರ ಪಾತ್ರಗಳೂ ರೊಮ್ಯಾಂಟಿಕ್ ಮೂಡ್ ಹಾಗೂ ಗ್ಲಾಮರಸ್ ಸೃಷ್ಟಿಸಿದ್ದರೆ ನಯನತಾರಾ ಹಾಗೂ ರುಕ್ಮಿಣಿ ವಸಂತ್ ಈ ಇಬ್ಬರ ಪಾತ್ರಗಳೂ ಅದಕ್ಕೆ ತದ್ವಿರುದ್ಧ ಎಂಬಂತೆ ಯಶ್ ಪಾತ್ರಕ್ಕೇ ಉಪದೇಶ ಮಾಡುವಂತೆ ಕಂಡುಬರುತ್ತಿವೆ. ಯಶ್ ಒಂದು ಹಂತದಲ್ಲಿ ಹೇಳುವ 'ಇಟ್ಸ್ ಟೈಂ ಐ ಆಮ್ ಕಮಿಂಗ್ (It's Time I'm Coming) ಡೈಲಾಗ್, ಹಿಂಸೆ ಮಿತಿಮೀರಿದಾಗ 'ಅವತಾರ ಎತ್ತುವಂತೆ' ಎನ್ನಿಸುತ್ತದೆ.

ಇಡೀ ಕಥೆಯಲ್ಲಿ ಹಿಂಸೆ ಕ್ರೌರ್ಯ ಹಾಗೂ ಸೆಂಟಿಮೆಂಟ್ ಒದಕ್ಕೊಂದು ಬೆಸೆದುಕೊಂಡಿದೆ ಎಂಬಂತೆ ಟ್ರೇಲರ್ ಫೀಲ್ ಕೊಡುತ್ತಿದೆ. ಅಪ್ಪ-ಮಗನ ಬಾಂಧವ್ಯವೇ ಒಂದು ಹಂತದಲ್ಲಿ ದ್ವೇಷಕ್ಕೆ ದಳ್ಳುರಿಗೆ ದಾರಿ ಆಗಿರುವಂತೆ ಎನ್ನಿಸುತ್ತಿದೆ. ನಾಯಕನ ಮುಖಕ್ಕೇ ಉಗಿಯುವ ನಾಯಕಿ, 'ಅನಾಗರೀಕ'ನ ಜೊತೆ ಮಾತನಾಡಲ್ಲ ಎನ್ನುವ ಇನ್ನೊಬ್ಬ ನಾಯಕಿ ಹೀಗೆ ಇಡೀ ಟ್ರೇಲರ್‌ನಲ್ಲಿ ಕಥೆ ವಿಭಿನ್ನವಾಗಿವೆ ಎನ್ನುವ ಊಹೆಗೆ ಪಕ್ಕಾ ಆಸ್ಪದ ಕೊಟ್ಟಿದೆ. ಮಿಕ್ಕಂತೆ, ಟ್ರೇಲರ್ ನೋಡಿ ಪಕ್ಕಾ ಕಥೆ ಊಹೆ ಮಾಡುವುದು ಕಷ್ಟ ಎನ್ನುವುದರ ಜೊತೆಗೆ, ಊಹೆ ಮಾಡಲೂಬಾರದು ಎನ್ನುವುದೇ ಸರಿ.

ಒಟ್ಟಿನಲ್ಲಿ, ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇಂದು, ಇದೀಗ ಬಿಡುಗಡೆ ಆಗಿದೆ. ಇದು ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ರೇಲರ್ ಹೊಸ ದಾಖಲೆ ಬರೆದರೂ ಅಚ್ಚರಿಯಲ್ಲ! ಅಂದಹಾಗೆ, ಇದೇ ತಿಂಗಳು ಅಂದರೆ 26 ಆಗಷ್ಟ್ 2026ರಂದು ಯಶ್ ನಟನೆಯ ಈ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ. ಇಡೀ ಜಗತ್ತೇ ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಟಾಕ್ಸಿಕ್‌’ ಟ್ರೇಲರ್‌ನಲ್ಲಿ ಯಶ್‌ ಆ್ಯಕ್ಷನ್‌ಗೆ ಗಾಬರಿಗೊಂಡ ಪ್ರೇಕ್ಷಕರು: ಮಹಿಳಾ ಪಾತ್ರಗಳ ಬಗ್ಗೆ ಮತ್ತೆ ಚರ್ಚೆ!
Yash Toxic Trailer Launch: 'ಟಾಕ್ಸಿಕ್' ಟ್ರೇಲರ್; ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'.. ಹಾಲಿವುಡ್ ರೇಂಜ್ ಮೇಕಿಂಗ್!