ಸೆಟ್‌ನಲ್ಲಿ ಶರಣ್‌ಗೆ ಕಾಟ ಕೊಡೋ ರಾಗಿಣಿ ಕಾಮಿಡಿ ಕ್ವೀನ್ ಆಗ್ತಾರಾ?

By Web DeskFirst Published Oct 4, 2019, 4:14 PM IST
Highlights

ಶರಣ್-ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕಾ' ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದೇ ಮೊದಲು ಒಂದಾಗಿರುವ ಶರಣ್- ರಾಗಿಣಿ ನಡುವಿನ ತುಂಟಾಟಗಳ ಕತೆ ಹೇಗಿದೆ? ಅವರಿಬ್ಬರ ಜೊತೆ ಮಾತುಕತೆ ಇಲ್ಲಿದೆ...

ಕೆಂಡಪ್ರದಿ

ಕಾಮಿಡಿ ಪಾತ್ರ ತುಂಬಾ ಖುಷಿ ಕೊಟ್ಟಿದೆ ಅನ್ಸುತ್ತೆ?

ಡೆಫನೆಟ್ಲಿ. ಕಲಾವಿದರು ಒಂದೇ ಜಾನರ್‌ಗೆ ಸ್ಟಿಕ್‌ಆನ್‌ ಆಗಬಾರದು. ಎಲ್ಲಾ ಜಾನರ್‌ಗೂ ಒಂದೊಂದು ಟೈಂ ಇರುತ್ತದೆ. ಅದು ಬಂದಾಗ, ನಮಗೆ ಸಿಕ್ಕಾಗ ಮಾಡುತ್ತಾ ಹೋಗಬೇಕು. ಇಡೀ ಚಿತ್ರ ಮಾಡುವಾಗ ನಾನು ತುಂಬಾ ಎಂಜಾಯ್‌ ಮಾಡಿದ್ದೇನೆ. ಸಾಕಷ್ಟುನಕ್ಕಿದ್ದೇವೆ, ನಲಿದಿದ್ದೇವೆ. ಪ್ರೇಕ್ಷಕರಿಗೂ ಚಿತ್ರ ನೋಡಿದಾಗ ಇದೇ ಖುಷಿ ಸಿಗುತ್ತದೆ.

ನಿಮ್ಮ ಪಾತ್ರ ಯಾವ ರೀತಿಯದ್ದು?

ನಾನಿಲ್ಲಿ ನಂದಿನಿ ಎನ್ನುವ ಪಾತ್ರ ಮಾಡುತ್ತಿದ್ದೇನೆ. ಸಿನಿಮಾದ ನಾಲ್ಕನೇ ದೃಶ್ಯಕ್ಕೆ ನನ್ನ ಶರಣ್‌ ಮದುವೆಯಾಗುತ್ತದೆ. ಎರಡು ಭಿನ್ನ ಸಂಸ್ಕೃತಿಯ ಜೋಡಿ ಮದುವೆಯ ಮೂಲಕ ಒಂದಾದಾಗ ಏನಾಗುತ್ತದೆ ಎನ್ನುವುದು ಕಥೆಯ ಥೀಮ್‌. ಇದರ ಮೇಲೆಯೇ ಸಾಗುವ ಚಿತ್ರದಲ್ಲಿ ಮುಖ್ಯವಾಗಿ ನಗು ಇದ್ದರೆ, ಎಮೋಷನ್ಸ್‌, ಗ್ಲಾಮರ್‌, ಬೋಲ್ಡ್‌ನೆಸ್‌ ಸೇರಿದಂತೆ ಎಲ್ಲಾ ರೀತಿಯ ಎಲಿಮೆಂಟ್ಸ್‌ ಇವೆ. ನನ್ನ ತಮ್ಮ ರುದ್ರಾಕ್‌್ಷ ದ್ವಿವೇದಿಯೇ ನನಗೆ ಕಾಸ್ಟೂಮ್‌ ಡಿಸೈನ್‌ ಮಾಡಿದ್ದಾನೆ.

ರಾಗಿಣಿ ತರಲೆಗೆ ಶರಣಾಗತ!

ಸೆಟ್‌ನಲ್ಲಿ ಶರಣ್‌ಗೆ ತುಂಬಾ ಕಾಟ ಕೊಟ್ರಂತೆ ಹೌದಾ?

ಅಹಹ... ಲೈಫ್‌ನಲ್ಲಿ ಮಜಾ ಇಲ್ಲ ಎಂದರೆ ಏನು ಮಾಡುವುದು, ನಮ್ಮ ಟೀಂ ಪಾಲಿಸಿಯೂ ಹಾಗೆಯೇ ಇತ್ತು. ನಾವು ಸೆಟ್‌ನಲ್ಲಿ ಎಷ್ಟುಜೋಶ್‌ನಲ್ಲಿ ಇರುತ್ತೆವೆಯೋ ಅಷ್ಟೇ ಚೆಂದದ ಚಿತ್ರವನ್ನು ಕಟ್ಟಲು ಸಾಧ್ಯವಾಗುವುದು. ನಮ್ಮದು ಕಾಮಿಡಿ ಚಿತ್ರ, ಶೂಟಿಂಗ್‌ ಅನ್ನು ಕಾಮಿಡಿ ಮೂಡ್‌ನಲ್ಲಿ ಮಾಡಿದರೆ ಅಲ್ಲವೇ ಅದರ ಪ್ರತಿಫಲ ಪರದೆಯ ಮೇಲೆ ಕಾಣುವುದು. ಶರಣ್‌ಗೆ ಕಾಟ ಕೊಟ್ಟೆಅಂತ ಅಲ್ಲ, ನಾವೆಲ್ಲರೂ ಫುಲ್‌ ಎಂಜಾಯ್‌ ಮಾಡಿಕೊಂಡೇ ಶೂಟ್‌ ಮುಗಿಸಿದೆವು.

ಹತ್ತು ವರ್ಷದಲ್ಲಿ 25 ಚಿತ್ರ ಮುಗಿಸಿಬಿಟ್ರಿ, ಈ ಬಗ್ಗೆ ಏನಂತೀರಿ?

ಇದು ನನಗೆ ಗೊತ್ತೇ ಇರಲಿಲ್ಲ, ನಮ್ಮ ಸ್ನೇಹಿತರು ಇದು ನಿನ್ನ 25ನೇ ಚಿತ್ರ ಎಂದು ಹೇಳಿದಾಗಲೇ ನನಗೆ ಗೊತ್ತಾಗಿದ್ದು. ನಮ್ಮ ಅನುಭವ ಮತ್ತು ಶ್ರಮದ ಮೇಲೆ ನಾವು ನಂಬಿಕೆ ಇಟ್ಟು ಮುಂದೆ ಸಾಗಬೇಕು. 25 ಚಿತ್ರಗಳು ಕಂಪ್ಲೀಟ್‌ ಆಗಿವೆ. ಇದಕ್ಕೆ ನಾನು ನನ್ನ ಅಭಿಮಾನಿಗಳಿಗೆ ಥ್ಯಾಂಕ್ಸ್‌ ಹೇಳುತ್ತೇನೆ. ಅವರು ನನ್ನನ್ನು ಮೆಚ್ಚಿಕೊಂಡು ಈ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ಶರಣ್ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಹತ್ತು ವರ್ಷದ ಸಿನಿ ಯಾನ ಹೇಗಿತ್ತು?

ಈ ಪ್ರಶ್ನೆಗೆ ಉತ್ತರಿಸುವ ಮೊದಲು ನಾನು ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಿಬಿಡುವೆ. ಯಾಕೆಂದರೆ ನಾನು ಈ ಹಂತಕ್ಕೆ ಬಂದಿರುವುದೇ ಅವರಿಂದ. ಕೆಲವು ಕಷ್ಟದ ಸಂದರ್ಭಗಳನ್ನೂ ನಾನು ಎದುರಿಸಿದ್ದೇನೆ. ಕೆಲವರು ನನ್ನನ್ನು ಕೆಳಗೆ ಎಳೆಯಬೇಕು ಎಂದು ಪ್ರಯತ್ನಪಟ್ಟರೂ ಅದು ಆಗಲಿಲ್ಲ. ಗೆಲ್ಲಬೇಕು ಎನ್ನುವ ಛಲ ಮನಸ್ಸಿನಲ್ಲಿ ಇದ್ದರೆ, ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡರೆ ಖಂಡಿತ ಗೆಲ್ಲಬಹುದು. ಈಗ ನನ್ನ ಚಿತ್ರ ‘ಅಧ್ಯಕ್ಷ ಇನ್‌ ಅಮೆರಿಕಾ’ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಇದನ್ನು ಖಂಡಿತವಾಗಿಯೂ ಎಲ್ಲಾ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನಗಿದೆ.

click me!