ರಾಗಿಣಿ ತರಲೆಗೆ ಶರಣಾಗತ!

By Web Desk  |  First Published Oct 4, 2019, 3:27 PM IST

ಶರಣ್‌-ರಾಗಿಣಿ ಅಭಿನಯದ ‘ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರ ಇಂದೇ(ಅ.4)ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದೇ ಮೊದಲು ಒಂದಾಗಿರುವ ಶರಣ್‌- ರಾಗಿಣಿ ನಡುವಿನ ತುಂಟಾಟಗಳ ಕತೆ ಹೇಗಿದೆ? ಅವರಿಬ್ಬರ ಜತೆಗಿನ ಮಾತುಕತೆ ಇಲ್ಲಿದೆ.


ದೇಶಾದ್ರಿ ಹೊಸ್ಮನೆ

ನಿಮ್ಮ ಸಿನಿಮಾಗಳ ಪೈಕಿ ಇದು ಹೇಗೆ ವಿಭಿನ್ನ?

Latest Videos

undefined

ನನ್ನ ಕೆರಿಯರ್‌ನಲ್ಲಿ ಇದು ಮಹತ್ವದ ಚಿತ್ರ. ಸಾಕಷ್ಟುವಿಭಿನ್ನ ಮತ್ತು ವಿಶೇಷತೆ ಇರುವಂತಹ ಸಿನಿಮಾವೂ ಕೂಡ. ಮೊದಲಿಗೆ ಅದು ಶುರುವಾಗುವುದು ಕತೆಯಿಂದ. ಆನಂತರ ಅದು ನನ್ನ ಪಾತ್ರಕ್ಕೂ ಅನ್ವಯ. ನೀವೇ ನೋಡಿರುವ ಹಾಗೆ ಇದುವರೆಗಿನ ನನ್ನ ಸಿನಿಮಾಗಳಲ್ಲಿ ಮೊದಲು ಪ್ರೀತಿ, ಆನಂತರ ಮದುವೆ. ಅದಕ್ಕೆ ತದ್ವಿರುದ್ಧ ಈ ಸಿನಿಮಾ. ಮೊದಲು ಮದುವೆ, ಆನಂತರ ಪ್ರೀತಿ, ರೀತಿ, ನೀತಿ ಇತ್ಯಾದಿ. ಕತೆಯಲ್ಲಿ ಒಂದೊಳ್ಳೆಯ ಮೆಸೇಜ್‌ ಇದೆ. ಅದನ್ನು ನವಿರಾದ ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

‘ಅಧ್ಯಕ್ಷ ಇನ್ ಅಮೆರಿಕಾ’ ದಲ್ಲಿ ಮೋಡಿ ಮಾಡಲಿದೆ ರಾಗಿಣಿ- ಶರಣ್ ಜೋಡಿ!

ಅಧ್ಯಕ್ಷ ಓಕೆ , ಚಿತ್ರದಲ್ಲಿ ಅಮೆರಿಕಾ ಯಾಕೆ?

ಅಧ್ಯಕ್ಷ ಮತ್ತು ಅಮೆರಿಕ ಅವೆರಡಕ್ಕೂ ಹತ್ತಿರದ ನಂಟಿದೆ. ಹಾಗಂತ ಇದು ಅಧ್ಯಕ್ಷ ಚಿತ್ರದ ಸೆಕೆಂಡ್‌ ಪಾರ್ಟ್‌ ಅಲ್ಲ. ಆ ಸಿನಿಮಾಕ್ಕೂ ಈ ಸಿನಿಮಾಕ್ಕೂ ಕಿಂಚಿತ್ತು ಲಿಂಕ್‌ ಇಲ್ಲ. ನಾಯಕ ಅಧ್ಯಕ್ಷನ ಗುಣದವನು. ಹಾಗಾಗಿ ಆತನಿಗೆ ಅಧ್ಯಕ್ಷ ಅಂತ ಹೆಸರಿಟ್ಟಿದ್ದಾರೆ ನಿರ್ದೇಶಕರು. ಹಳ್ಳಿಯೊಂದರಲ್ಲಿ ಏನೊಂದು ಅರಿಯದವನು ಅಮೆರಿಕಕ್ಕೆ ಹೋದರೆ ಏನಾಗುತ್ತದೆ ಎನ್ನುವುದು ಚಿತ್ರದ ಒನ್‌ಲೈನ್‌ ಕತೆ. ಹಾಗಾಗಿ ಅಧ್ಯಕ್ಷ ಇನ್‌ ಅಮೆರಿಕಾ ಎನ್ನುವುದು ಚಿತ್ರದ ಟೈಟಲ್‌.

ಇದು ಕೂಡ ಫುಲ್‌ ಕಾಮಿಡಿ ಜಾನರ್‌ ಸಿನಿಮಾನಾ?

ಕಾಮಿಡಿ ನನ್ನ ಟ್ರಂಪ್‌ಕಾರ್ಡ್‌. ಅದನ್ನು ಬಿಟ್ಟು ಹೋಗುವುದು ಕಷ್ಟ. ಅದಕ್ಕೆ ತಕ್ಕಂತೆ ಇದು ಕೂಡ ಕಾಮಿಡಿ ಪ್ರಧಾನ ಚಿತ್ರ. ಹಾಗಂತ ಇಡೀ ಸಿನಿಮಾನೇ ಕಾಮಿಡಿ ಅಲ್ಲ. ಸೆಂಟಿಮೆಂಟ್‌ ಈ ಸಿನಿಮಾ ಇನ್ನೊಂದು ಪ್ರಧಾನ ಅಂಶ. ನನ್ನ ಮೊದಲಿನ ಸಿನಿಮಾಗಳಿಗೆ ಹೋಲಿಸಿದರೆ, ಇಲ್ಲಿ ಸೆಂಟಿಮೆಂಟ್‌ ತುಸು ಜಾಸ್ತಿಯೇ ಇದೆ.

ಶರಣ್‌ ಅವರಿಗೆ ಕಾಮಿಡಿ ಮಾಡುವುದು ಎಷ್ಟುಸುಲಭ?

ಸುಲಭ ಅಲ್ಲ, ಅದು ಬಲು ಕಷ್ಟ. ಕಲಾವಿದರಿಗೆ ಯಾವುದಾದರೂ ಸವಾಲಿನ ಪಾತ್ರ ಎನ್ನುವಂತಿದ್ದರೆ ಅದು ಹಾಸ್ಯ ಪಾತ್ರ. ನನಗದೂ ಥ್ರಿಲ್ಲಿಂಗ್‌ ಜಾಬ್‌. ನಟನಾಗಿ ನನ್ನನ್ನು ನಾನು ಕಂಡುಕೊಳ್ಳುವುದಕ್ಕಾಗಿ ಆಯ್ಕೆ ಮಾಡಿಕೊಂಡ ದಾರಿ ಅದು. ಅದರ ಜತೆಗೆ ಪ್ರೇಕ್ಷಕರಿಗೆ ಈಗ ನಗು ಬೇಕು. ಒತ್ತಡದ ಬದುಕಲ್ಲಿ ಅವರಿಗೆ ಒಂದಷ್ಟುರಿಲ್ಯಾಕ್ಸ್‌ ಬೇಕು ಅಂದ್ರೆ ಹಾಸ್ಯ ಸಿಗಬೇಕು. ಅದನ್ನು ಕೊಡಬೇಕೆನ್ನುವುದು ನನ್ನಾಸೆ. ಒಂದು ಮಟ್ಟಿಗೆ ಆ ಶ್ರಮಕ್ಕೆ ಫಲ ಸಿಕ್ಕಿದೆ. ಜನರ ಆಶೀರ್ವಾದ ಮಾಡಿದ್ದಾರೆ. ಸಂಪಾದನೆಗಿಂತ ನನಗಿರುವ ಖುಷಿಯೇ ಅದು.

ರಾಗಿಣಿ ಮತ್ತು ನಿಮ್ಮ ಕಾಂಬಿನೇಷನ್‌ ಬಗ್ಗೆ ಹೇಳಿ..

ರಾಗಿಣಿ ಅವರು ಇದೇ ಮೊದಲು ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಿದ್ದು. ಆನ್‌ಸ್ಕ್ರೀನ್‌ ನಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ ಎನ್ನುವುದು ಚಿತ್ರತಂಡದ ಮಾತು. ಹಾಗೆಯೇ ಪೋಸ್ಟರ್‌ ನೋಡಿದವರು ಇದನ್ನು ಒಪ್ಪಿಕೊಂಡಿದ್ದಾರೆ. ಇದರ ಕ್ರೆಡಿಟ್‌ ರಾಗಿಣಿ ಅವರಿಗೆ ಸಲ್ಲುತ್ತದೆ. ನಾವಿಬ್ಬರು ಮೊದಲಿನಿಂದಲೂ ಒಳ್ಳೆಯ ಸ್ನೇಹಿತರಾಗಿದ್ದು ಚಿತ್ರಕ್ಕೆ ಪ್ಲಸ್‌ ಆಗಿದೆ. ಕ್ಯಾಮರಾ ಮುಂದೆ ತುಂಬಾ ಡಾಮಿನೇಟ್‌ ಆಗಿ ಅಭಿನಯಿಸಿದ್ದಾರೆ. ತೆರೆಯ ಆಚೆ ಅಷ್ಟೇ ತರ್ಲೆ ಮಾಡುತ್ತಾ ನಗಿಸುತ್ತಿದ್ದರು.

ಶರಣ್ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಸೆಟ್‌ನಲ್ಲಿ ರಾಗಿಣಿ ತುಂಬಾ ಕಾಟ ಕೊಟ್ರಂತೆ ಹೌದಾ?

ಚಿತ್ರದಲ್ಲಿ ನಾವಿಬ್ಬರು ಗಂಡ-ಹೆಂಡತಿ ಅಲ್ವಾ ಅದ್ಕೆ ಆ ಕಾಟ. ಅವರು ಇರೋದೇ ಹಾಗೆ. ಅವರು ಸೆನ್ಸಿಬಲ್‌ ಆ್ಯಕ್ಟರ್‌. ಕ್ಯಾಮರಾ ಮುಂದೆ ಸಿಕ್ಕಾಪಟ್ಟೆಸೀರಿಯಸ್‌ ಆಗಿರುತ್ತಿದ್ದರು. ತೆರೆ ಆಚೆ ಇದ್ದಾಗ ಸಿಕ್ಕಾಪಟ್ಟೆತರ್ಲೆ. ನಾನೇ ತರ್ಲೆ ಅಂದ್ರೆ, ಅವರು ನನಗಿಂತ ತರ್ಲೆ. ಸುಮ್ನೆ ಇರುತ್ತಿರಲಿಲ್ಲ, ಬರೀ ಕೀಟ್ಲೆ.

click me!