ಸ್ಯಾಂಡಲ್‌ವುಡ್ ಜೂನಿಯರ್ ರೆಬೆಲ್ ಸ್ಟಾರ್ ಹಾಗೂ ಮಂಡ್ಯದ ಮೊಮ್ಮಗ ಅಭಿಷೇಕ್ ಅಂಬರೀಶ್ ಅಕ್ಟೋಬರ್ 3 ರಂದು 25 ನೇ ವರ್ಷದ ಹುಟ್ಟು ಹಬ್ಬವನ್ನು ಸಿಂಪಲ್ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ದಾಡಿ ಬಂದ ಮೇಲೆ ಡ್ಯಾಡಿಯಂತಾದ ಅಭಿಷೇಕ್ ಅಂಬರೀಶ್!
ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಹಾಗೂ ಸ್ವಾಭಿಮಾನಿ ಮಂಡ್ಯ ಮಹಾಜನತೆಗೆ ಹುಟ್ಟುಹಬ್ಬಕ್ಕೆ ನಿಮ್ಮ ಮನೆಯ ಅಸುಪಾಸಿನಲ್ಲಿ ಗಿಡ ನೆಡಿ ಎಂದು ಮನವಿ ಮಾಡಿಕೊಂಡಿದ್ದರು. ಅದ್ಧೂರಿ ಆಚರಣೆ ಬೇಡ, ಸಮಾಜಮುಖಿ ಕೆಲಸಗಳನ್ನು ಮಾಡೋಣ ಎಂದು ಹೇಳಿದ್ದರು. ಅದರಂತೆ ಅಭಿಮಾನಿಗಳು ಸಸಿಗಳನ್ನು ನೆಟ್ಟಿದ್ದಾರೆ.
ಅಭಿಷೇಕ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್
ಬರ್ತಡೇಯನ್ನು ಆಪ್ತ ಸ್ನೇಹಿತರು ಹಾಗೂ ತಾಯಿಯೊಂದಿಗೆ ಆಚರಿಸಿಕೊಂಡಿದ್ದಾರೆ. ಅಭಿ ತಾಯಿ ಸುಮಲತಾ ಸಿಹಿ ಮುತ್ತು ನೀಡಿದರೆ, ಅಣ್ಣ ದರ್ಶನ್ ಸ್ಪೆಶಲ್ ವಿಶ್ ಮಾಡಿದ್ದಾರೆ. ಅಮೂಲ್ಯ ಕ್ಷಣಗಳ ಫೋಟೋವನ್ನು ಸುಮಲತಾ ಅಪ್ಲೋಡ್ ಮಾಡಿ 'ಹ್ಯಾಪಿ ಬರ್ತಡೇ #AbishekAmbareesh, ಅವನಿಗೆ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಸಿಗಲಿ ' ಎಂದು ಬರೆದುಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೋವನ್ನು ಅಪ್ಲೋಡ್ ಮಾಡಿ 'ನನ್ನ ಪ್ರೀತಿಯ ಅಭಿಷೇಕ್‌ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ' ಎಂದು ವಿಶ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.