Puneeth Rajkumar: ಮೊದಲ ದಿನವೇ 5.28 ಕೋಟಿ ಗಳಿಸಿದ ಅಪ್ಪು ‘ಗಂಧದ ಗುಡಿ’

Published : Oct 30, 2022, 02:45 AM IST
Puneeth Rajkumar: ಮೊದಲ ದಿನವೇ 5.28 ಕೋಟಿ ಗಳಿಸಿದ ಅಪ್ಪು ‘ಗಂಧದ ಗುಡಿ’

ಸಾರಾಂಶ

ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ, ಅಮೋಘವರ್ಷ ನಿರ್ದೇಶನದ ‘ಗಂಧದ ಗುಡಿ’ ಚಿತ್ರದ ಮೊದಲ ದಿನವೇ 5.28 ಕೋಟಿ ರು. ಗಳಿಸಿದೆ. ಮುಂಗಡ ಬುಕಿಂಗ್‌ನಿಂದಲೇ 1.72 ಕೋಟಿ ಹಾಗೂ ಗುರುವಾರ ಸಂಜೆ ಆಯೋಜಿಸಿದ್ದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಂದ 28 ಲಕ್ಷ ರು. ಕಲೆಕ್ಷನ್‌ ಆಗಿದೆ. 

ಬೆಂಗಳೂರು (ಅ.30): ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ, ಅಮೋಘವರ್ಷ ನಿರ್ದೇಶನದ ‘ಗಂಧದ ಗುಡಿ’ ಚಿತ್ರದ ಮೊದಲ ದಿನವೇ 5.28 ಕೋಟಿ ರು. ಗಳಿಸಿದೆ. ಮುಂಗಡ ಬುಕಿಂಗ್‌ನಿಂದಲೇ 1.72 ಕೋಟಿ ಹಾಗೂ ಗುರುವಾರ ಸಂಜೆ ಆಯೋಜಿಸಿದ್ದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಂದ 28 ಲಕ್ಷ ರು. ಕಲೆಕ್ಷನ್‌ ಆಗಿದೆ. ಒಟ್ಟಾರೆ ಮೊದಲ ದಿನ ಅಪ್ಪು ನಟನೆಯ ಕೊನೆಯ ಚಿತ್ರ ಗಳಿಸಿದ್ದು 5.28 ಕೋಟಿ ರು. ಎನ್ನಲಾಗುತ್ತಿದೆ. 

ರಾಜ್ಯಾದ್ಯಂತ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಗಳು ಬರುತ್ತಿದ್ದು, ಈಗಾಗಲೇ ಶೇ.62.77ರಷ್ಟು ಟಿಕೆಟ್‌ಗಳು ಮಾರಾಟ ಆಗಿವೆ. ಸಿನಿಮಾ ಗಳಿಕೆಯ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಹೇಳಬೇಕಿದೆ. ಆದರೆ, ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಗಂಧದ ಗುಡಿ’ ತೆರೆಕಂಡಿದೆ. ಮೊದಲ ದಿನವೇ 1800ಕ್ಕೂ ಹೆಚ್ಚು ಶೋಗಳನ್ನು ಕಂಡಿದ್ದು, ಪ್ರತಿ ಚಿತ್ರಮಂದಿರಗಳಲ್ಲೂ ಒಂದೇ ದಿನ 6 ರಿಂದ 7 ಪ್ರದರ್ಶನಗಳನ್ನು ಕಂಡಿದೆ.

Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

ಗಂಧದ ಗುಡಿ ಚಿತ್ರ ವೀಕ್ಷಿಸಲು ಉಚಿತ ವ್ಯವಸ್ಥೆ: ಮಾಜಿ ಸಚಿವ ಸೊಗಡು ಶಿವಣ್ಣ ಅವರ ಕುಟುಂಬ ನಗರದ ಎಸ್‌. ಮಾಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಸ್ನೇಹಿತ ವರ್ಗಕ್ಕೆ ಕರ್ನಾಟಕ ರತ್ನ ಪುನೀತ್‌ರಾಜ್‌ ಕುಮಾರ್‌ ನಟನೆಯ ಗಂಧದ ಗುಡಿ ಚಿತ್ರವನ್ನು ವೀಕ್ಷಿಸಲು ಉಚಿತ ವ್ಯವಸ್ಥೆ ಮಾಡುವುದರ ಜತೆಗೆ ಚಿತ್ರ ವೀಕ್ಷಿಸಿದ ನಂತರ ಉಚಿತವಾಗಿ ಗಂಧದ ಸಸಿಗಳನ್ನು ವಿತರಣೆ ಮಾಡಿ ಪರಿಸರ ಕಾಳಜಿ ಮೆರೆದಿದ್ದಾರೆ. 

ಬಳಿಕ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಪುತ್ರ ಕುಮಾರಸ್ವಾಮಿ, ನಟ ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮನ್ನು ಅಗಲಿ ಒಂದು ವರ್ಷ ಸಂದಿದ್ದು, ಗಂಧದಗುಡಿ ಚಿತ್ರದ ಮೂಲಕ ನಾಡಿನ ನೆಲ, ಜಲ, ಅರಣ್ಯ ಸಂಪತ್ತು ಪ್ರವಾಸಿ ತಾಣಗಳನ್ನು ಕಣ್ಮುಂದೆ ತಂದು ನಿಲ್ಲಿಸಿರುವ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌, ಅಭಿಮಾನಿಗಳ ಮನದಲ್ಲಿ ಪರಿಸರ ಕಾಳಜಿ ಬಿತ್ತಿದ್ದಾರೆ. ಈ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಕೋರಿದರು.

ಇದು ಪುನೀತ್‌ ಅವರ ಕನಸಿನ ಪ್ರಾಜೆಕ್ಟ್ ಎಂದು ಬಿಂಬಿಸಲಾಗಿದ್ದು, ಈ ಚಿತ್ರವು ಕರ್ನಾಟಕದ ಕಾಡುಗಳು, ಸುಂದರವಾದ ಕಡಲತೀರಗಳು ಮತ್ತು ನೀರೊಳಗಿನ ಪ್ರಪಂಚವನ್ನು ಪರಿಶೋಧಿಸುತ್ತದೆ. ಪುನೀತ್‌ ರಾಜ್‌ಕುಮಾರ್‌ ಅವರು ಪರಿಸರ ಕಾಳಜಿಯನ್ನು ಹೊಂದಿದ್ದು, ಉತ್ತಮ ಪರಿಸರಕ್ಕಾಗಿ ಅವರಿಗಿದ್ದ ಕಾಳಜಿಯನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ಅವರ ತಂದೆಯವರ ಆಸೆಯನ್ನು ಕಾರ್ಯಗತ ಮಾಡಿದ್ದಾರೆ ಎಂದು ತಿಳಿಸಿದರು.

ಅಪ್ಪು ಚಿತ್ರ ಗಂಧದ ಗುಡಿ ಇಂದು 200 ಕಡೆ ತೆರೆಗೆ: 80% ಟಿಕೆಟ್‌ ಮಾರಾಟ

ನಾಗರತ್ನ ಎಸ್‌. ಶಿವಣ್ಣ ಮಾತನಾಡಿ, ‘ಗಂಧದ ಗುಡಿ’ಯಂತಹ ಚಿತ್ರವನ್ನು ಕನ್ನಡ ಚಿತ್ರರಂಗ ನಿರ್ಮಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಈ ಚಿತ್ರದಲ್ಲಿ ಅವರನ್ನು ನೋಡಿದಾಗ ನನ್ನ ಕಣ್ಣಲ್ಲಿ ನೀರು ಬಂದಿತು ಎಂದು ನುಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್‌, ರಾಷ್ಟ್ರೀಯ ಮಂಡಳಿ ಸದಸ್ಯರಾದ ಶಾಂತರಾಜು, ಸುದ್ದಿಬಿಂಬ ಸತೀಶ್‌, ಮಾಜಿ ಸಚಿವರಾದ ಸೊಗಡು ಶಿವಣ್ಣ ಮತ್ತಿತರರು ಪಾಲ್ಗೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!
ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ