ವಿಶಿಷ್ಟ, ವಿಭಿನ್ನ ‘ಪಡ್ಡೆಹುಲಿ’ ಚಿತ್ರದ ಟ್ರೈಲರ್ 'ದರ್ಶನ'

Published : Feb 25, 2019, 10:04 PM IST
ವಿಶಿಷ್ಟ, ವಿಭಿನ್ನ ‘ಪಡ್ಡೆಹುಲಿ’ ಚಿತ್ರದ ಟ್ರೈಲರ್ 'ದರ್ಶನ'

ಸಾರಾಂಶ

ಕನ್ನಡದ ಬಹುನಿರೀಕ್ಷಿತ  ಪಡ್ಡೆಹುಲಿ ಚಿತ್ರದ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಜನಮನ್ನಣೆ ಗಳಿಸಿದೆ. ಇದೀಗ ಚಿತ್ರದ  ಟ್ರೈಲರ್ ಬಿಡುಗಡೆಯಾಗುತ್ತಿದೆ.

ಬೆಂಗಳೂರು[ಫೆ.25] ನಿರ್ಮಾಪಕ ಕೆ. ಮಂಜು  ಪುತ್ರ  ಶ್ರೇಯಸ್  ಅಭಿನಯದ  'ಪಡ್ಡೆಹುಲಿ' ಚಿತ್ರದ  ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೆ. 26 ರಂದು ಸಂಜೆ 6 ಗಂಟೆಗೆ ಅನಾವರಣ ಮಾಡಲಿದ್ದಾರೆ.

ಇರೋದು ಸಿಂಪಲ್ಲು... ಮನುಷ್ಯ ಸೂಪರ್ರು... ಫೆವರೇಟ್ ನಂಬರ್ ಸಿಕ್ಸು.. ಇವರು 26th ಬರೋದು ಫಿಕ್ಸು... ಬರೋದ್ ಯಾರ್ ಅಂತ ಗೊತ್ತಾಗಬೇಕು ಅಂದ್ರೆ ನಾಳೆ ಸಂಜೆ 6 ಘಂಟೆಗೆ PRK ಆಡಿಯೋ ಯೌಟ್ಯೂಬ್ ಚಾನಲ್ ನೋಡಿ.. ಹೌದು... ದರ್ಶನ್ ನಾಳೆ ಸಂಜೆ 6 ಘಂಟೆಗೆ ಅವರಿಂದ ಪಡ್ಡೆಹುಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ’

ಗುರು ದೇಶಪಾಂಡೆ ನಿರ್ದೇಶನದಲ್ಲಿ ಹುಲಿ ಮೂಡಿಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್‌ನ ಪಿಆರ್‌ಕೆ ಆಡಿಯೋದ ಮೂಲಕ ಹಾಡು ಲಾಂಚ್ ಮಾಡಲಾಗಿದ್ದು ಪುನೀತ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಶರಣ್ ಸೇರಿದಂತೆ ಅನೇಕರು ಶ್ರೇಯಸ್‌ಗೆ ಶುಭ ಕೋರಿದ್ದರು. ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿತ್ತು. ಪ್ರೇಮಿಗಳ ದಿನದಂದು ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?