'Period. End of Sentence' ಗೆ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ

By Web DeskFirst Published Feb 25, 2019, 12:01 PM IST
Highlights

91 ನೇ ಅಕಾಡೆಮಿ ಪ್ರಶಸ್ತಿಗಳ ಸಾಕ್ಷ್ಯಚಿತ್ರ ವಿಭಾಗದಲ್ಲಿ ’ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್’  ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. 

ಬೆಂಗಳೂರು (ಫೆ. 25): 91 ನೇ ಅಕಾಡೆಮಿ ಪ್ರಶಸ್ತಿಗಳ ಸಾಕ್ಷ್ಯಚಿತ್ರ ವಿಭಾಗದಲ್ಲಿ ’ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್’  ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. 

ಈ ವಿಚಾರದಲ್ಲಿ ಕರೀನಾಳನ್ನು ಫಾಲೋ ಮಾಡುತ್ತಾರಂತೆ ಕತ್ರಿನಾ!

ಮಸಾನ್, ಲಂಚ್ ಬಾಕ್ಸ್, ಹರಾಮ್ ಕೋರ್ ಖ್ಯಾತಿಯ ಗುನೀತ್ ಮೋಂಗ್ಯಾ ಈ ಚಿತ್ರದ ನಿರ್ಮಾಪಕರು. ಅಮೆರಿಕನ್ ನಿರ್ದೇಶಕ ರಾಯಕಾ ಖೆತಾಬ್ದಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.  

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಒಟ್ಟು ಹತ್ತು ಚಿತ್ರಗಳು ಆಯ್ಕೆಯಾಗಿತ್ತು. ಎಂಡ್ ಗೇಮ್, ಬ್ಲಾಕ್ ಶೀಪ್, ಲೈಫ್ ಬೋಟ್ ಹಾಗೂ ಎ ನೈಟ್ ಎಟ್ ದಿ ಗಾರ್ಡನ್ ಸಿನಿಮಾಗಳು ಪೈಪೋಟಿ ನೀಡಿದ್ದವು. 

ಶ್ರೀಮುರಳಿ 'ಮದಗಜ' ಚಿತ್ರದಲ್ಲಿ ವಿಜಯಲಕ್ಷ್ಮಿ!

ದೆಹಲಿ ಹೊರವಲಯದಲ್ಲಿರುವ ಹಳ್ಳಿಯೊಂದರಲ್ಲಿ ಋತುಸ್ರಾವದ ಬಗ್ಗೆ ಇರುವ ಸಂಪ್ರದಾಯದ ವಿರುದ್ಧ ನಿಂತ ಮಹಿಳೆಯರ ಬಗ್ಗೆ ಈ ಸಿನಿಮಾ ಹೇಳುತ್ತದೆ. ಪ್ಯಾಡ್ ಗಳನ್ನು ಮಾಡುವುದನ್ನೇ ಇವರೇ ಕಲಿಯುತ್ತಾರೆ. ಹೆಣ್ಣು ಮಕ್ಕಳೆಲ್ಲಾ ಸೇರಿ ಹಣ ಒಗ್ಗೂಡಿಸಿ ಪ್ಯಾಡ್ ಮಾಡುವ ಮಷಿನ್ ನನ್ನು ತೆಗೆದುಕೊಳ್ಳುತ್ತಾರೆ. 

ಒಟ್ಟಿನಲ್ಲಿ ಮುಟ್ಟಿನ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. 

 

click me!