
ಬೆಂಗಳೂರು[ಫೆ. 24] ಬಂಡೀಪುರದ ಅವಘಡದ ಬಗ್ಗೆ ಸಿನಿಮಾ ನಾಯಕರು ದನಿ ಎತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ದುನಿಯಾ ವಿಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಸಹಾಯ ನೀಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು.
ದುನಿಯಾ ವಿಜಯ್ ತಾವೇ ಮುಂದೆ ನಿಂತು ಸ್ವಯಂ ಸೇವಕರಿಗೆ ಆಹಾರ ಮತ್ತು ನೀರು ಪೂರೖಕೆ ಮಾಡುತ್ತಿದ್ದಾರೆ. ಅಲ್ಲದೇ ಹೆಂಡತಿಯ ನೆರವನ್ನು ಪಡೆದುಕೊಂಡಿದ್ದು ಸ್ವತಃ ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಅಭಯಾರಣ್ಯದ ಕಡೆ ಹೊರಟ ಚಂದನವನದ ‘ಕರಿಚಿರತೆ’
ಸ್ವಯಂ ಸೇವಕರಿಗಾಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಚಂದನದವನದ ಕರಿಚಿರತೆ ಭಾನುವಾರವೇ ಅರಣ್ಯಕ್ಕೆ ಧಾವಿಸಿತ್ತು. ಈ ಮೂಲಕ ದುನಿಯಾ ವಿಜಯ್ ಉಳಿದ ನಟರಿಗೆ ಮಾದರಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.