’ಪಡ್ಡೆಹುಲಿ’ ಟೀಂನಿಂದ ವ್ಯಾಲಂಟೈನ್ಸ್ ಡೇಗೆ ಲವ್ ಸಾಂಗ್

Published : Feb 13, 2019, 12:03 PM ISTUpdated : Feb 13, 2019, 12:05 PM IST
’ಪಡ್ಡೆಹುಲಿ’ ಟೀಂನಿಂದ ವ್ಯಾಲಂಟೈನ್ಸ್ ಡೇಗೆ ಲವ್ ಸಾಂಗ್

ಸಾರಾಂಶ

ವ್ಯಾಲಂಟೈನ್ಸ್ ಡೇಗೆ ಪಡ್ಡೆಹುಲಿ ಟೀಂನಿಂದ ಲವ್ ಸಾಂಗ್ | ನಿರ್ದೇಶಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ಚಿತ್ರ ಪಡ್ಡೆಹುಲಿ | ಸಂಜೀತ್ ಹೆಗ್ಡೆ ಧ್ವನಿಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ ಈ ಸಾಂಗ್ 

ಬೆಂಗಳೂರು (ಫೆ. 13): ಪಡ್ಡೆಹುಲಿ ಚಿತ್ರತಂಡ  ವ್ಯಾಲಂಟೈನ್ಸ್ ಡೇಯನ್ನು ಇನ್ನಷ್ಟು ಕಲರ್ ಫುಲ್ ಆಗಿಸಿದೆ. ವ್ಯಾಲಂಟೈನ್ಸ್ ಡೇಗೆ ಪ್ರೇಮಿಗಳಿಗಾಗಿ ಲವ್ ಸಾಂಗ್‌ವೊಂದನ್ನು ರಿಲೀಸ್ ಮಾಡಿದೆ.  

ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರುವ ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿದೆ. ಈ ಚಿತ್ರದ ಹಾಡನ್ನು ರಿಲೀಸ್ ಮಾಡಲಾಗಿದ್ದು ಪ್ರೇಮಿಗಳಿಗೆ ಇಷ್ಟವಾಗುವಂತಿದೆ.

ಪಡ್ಡೆಹುಲಿ ಚಿತ್ರದಲ್ಲಿ ಸಾಹಸಸಿಂಹನಿಗೆ ಸಲಾಂ!

ಒಂದು ಮಾತು ನೂರು ಹೇಳಲೇ..... ಎಂಬ ಹಾಡಿನಲ್ಲಿ ಶ್ರೇಯಸ್ ಹಾಗೂ ನಟಿ ನಿಶ್ವಕಾ ನಾಯ್ಡು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕಾಲೇಜು ಹುಡುಗಿಯ ಹಿಂದೆ ಸುತ್ತುವ ಪ್ರೇಮಿಯ ದೃಶ್ಯಗಳಲ್ಲಿ ಶ್ರೇಯಸ್ ಇಷ್ಟವಾಗುತ್ತಾರೆ. 

ಈ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಸರಿಗಮಪ ಖ್ಯಾತಿಯ ಸಂಜೀತ್ ಹೆಗ್ಡೆ ಧ್ವನಿ ನೀಡಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟನ ಜೊತೆ ಕಾಣಿಸಿಕೊಂಡ ದುನಿಯಾ ವಿಜಯ್ ಪುತ್ರಿ: ಯಾಕೆ ಗೊತ್ತಾ?
ಲವ್ ಅಲ್ಲ, ಥ್ರಿಲ್ಲರ್ ಅಲ್ಲ.. ಇದು ಫ್ಯಾಂಟಸಿ + ಲಾಜಿಕ್: 45 ಬಗ್ಗೆ ಅರ್ಜುನ್ ಜನ್ಯಾ ಹೇಳಿದ್ದೇನು?