
ಉತ್ತಮ ಕಥಾಹಂದರ ಹೊಂದಿರುವ ನೀನಾಸಂ ಸತೀಶ್ ರವರ ’ಚಂಬಲ್’ ಸಿನಿಮಾ ರಿಲೀಸ್ ಆಗಿದೆ. ಜನಪರ ಅಧಿಕಾರಿಯೊಬ್ಬರು ಭ್ರಷ್ಟರನ್ನು ಮಟ್ಟ ಹಾಕುವ ಕಥೆಯೊಂದನ್ನು ನಿರ್ದೇಶಕರು ಚಂಬಲ್ ಮೂಲಕ ಹೇಳ ಹೊರಟಿದ್ದಾರೆ.
ಡಕಾಯಿತರ ಚಂಬಲ್: ಸಿನಿರಸಿಕರಿಗೆ ಫುಲ್ ಫ್ಯಾಮಿಲಿ ಪ್ಯಾಕೇಜ್!
ಈ ಸಿನಿಮಾ ಕರ್ನಾಟಕದ ದಕ್ಷ ಅಧಿಕಾರಿಯೊಬ್ಬರ ಜೀವನ ಕಥೆಯನ್ನು ಹೋಲುವಂತಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಇದು ಯಾರ ಬದುಕಿನ ಕಥೆಯನ್ನೂ ಆಧರಿಸಿದ ಸಿನಿಮಾವಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ದಕ್ಷ ಅಧಿಕಾರಿ ಪಾತ್ರದಲ್ಲಿ ನೀನಾಸಂ ಸತೀಶ್ ಅದ್ಭುತವಾಗಿ ನಟಿಸಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸತೀಶ್ ರನ್ನು ನೋಡುತ್ತಿದ್ದರೆ ದಕ್ಷ ಅಧಿಕಾರಿಯೆಂದರೆ ಹೀಗಿರಬೇಕು ಎಂದು ಪ್ರೇಕ್ಷಕನಿಗೆ ಅನಿಸುವಂತಿದೆ.
ಊರಿಗೂರನ್ನೇ ಹರಿದುಮುಕ್ಕುವ ಡಕಾಯಿತರ ಚಂಬಲ್!
ಒಬ್ಬ ಅಮಾಯಕ ಯುವಕ ಹೇಗೆ ದುಷ್ಟಕೂಟದಲ್ಲಿ ಸಿಲುಕಿಕೊಳ್ಳುತ್ತಾನೆ, ಹೇಗೆ ಆಚೆ ಬರುತ್ತಾನೆ ಎಂಬುದನ್ನು ನಿರ್ದೇಶಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಈ ಸಿನಿಮಾ ಕೇವಲ ದಕ್ಷ ಅಧಿಕಾರಿ, ಭ್ರಷ್ಟ ಕುಳಗಳ ಸುತ್ತ ಮಾತ್ರ ಸುತ್ತುವುದಿಲ್ಲ. ಅಲ್ಲಲ್ಲಿ ಕಾಮಿಡಿ ಇದೆ. ಗಂಭೀರವಾಗಿದ್ದ ಪ್ರೇಕ್ಷಕರನ್ನು ಅಲ್ಲಲ್ಲಿ ನಗಿಸುತ್ತದೆ. ನವಿರಾದ ಪ್ರೇಮ ಕಚಗುಳಿ ಇಡುತ್ತದೆ.
ಈ ಚಿತ್ರದ ಹಾಡುಗಳೂ ಮೆಲೋಡಿಯಸ್ ಆಗಿವೆ. ರೋಜರ್ ನಾರಾಯಣ್, ಸೋನು ಗೌಡ, ಸರ್ದಾರ್ ಸತ್ಯ, ಅಚ್ಯುತ್ ಕುಮಾರ್ ಮುಂತಾದವರು ಚಿತ್ರದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಜೇಕಬ್ ವರ್ಗೀಸ್ ನಿರ್ದೇಶನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.