’ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ನೋಡ್ಲೇಬೇಕಪ್ಪ!

By Web Desk  |  First Published Feb 15, 2019, 12:18 PM IST

’ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಇಂದು ಬಿಡುಗಡೆಯಾಗಿದೆ. ಪಕ್ಕಾ ಎಂಟರ್‌ಮೆಂಟ್ ಚಿತ್ರ ಇದು. ಹೇಗಿದೆ ಈ ಚಿತ್ರ? ಇಲ್ಲಿದೆ ಚಿತ್ರ ವಿಮರ್ಶೆ.  


ಬೆಂಗಳೂರು (ಫೆ. 15): ’ಕೆಮಿಸ್ಟ್ರಿ ಆಫ್ ಕರಿಯಪ್ಪ’ ಎನ್ನುವ ಕಾಮಿಡಿ ಚಿತ್ರವೊಂದು ಇಂದು ತೆರೆಗೆ ಬಂದಿದೆ. ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಕಾಮಿಡಿ ಚಿತ್ರ. 

ಸಿಕ್ಕಾಪಟ್ಟೆ ಎಂಟರ್‌ಟೇನ್ಮೆಂಟ್ ನೀಡಲಿದೆ ’ಕೆಮಿಸ್ಟ್ರಿ ಆಫ್ ಕರಿಯಪ್ಪ’!

Tap to resize

Latest Videos

ಯುವ ಪ್ರತಿಭೆ ಚಂದನ್ ಆಚಾರ್ ನಾಯಕನಾಗಿ ನಟಿಸಿದ್ದರೆ ಸಂಜನಾ ಆನಂದ್ ನಟಿಯಾಗಿ ಅಭಿನಯಿಸಿದ್ದಾರೆ.  ಹಿರಿಯ ನಟ ತಬಲಾ ನಾಣಿ ಹಾಗೂ ಸುಚೇಂದ್ರ ಪ್ರಸಾದ್ ಕೂಡಾ ಇದ್ದಾರೆ. 

ಅಪ್ಪ-ಅಮ್ಮ, ಮಗ ಹಾಗೂ ಸೊಸೆ ಸುತ್ತ ನಡೆಯುವ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಚಂದನ್ ಆಚಾರ್ ಮೊದಲ ಬಾರಿ ಕ್ಯಾಮೆರಾ ಎದುರಿಸಿದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಕ್ಕಾ ನಮ್ಮ, ನಿಮ್ಮ ಮನೆಯ ಹುಡುಗನಂತೆ ಆತ್ಮೀಯನೆನಿಸುತ್ತಾರೆ. ತಬಲಾ ನಾಣಿ ಕಾಮಿಡಿ ಬಗ್ಗೆ ಹೇಳೋದೇ ಬೇಡ. ಸಿನಿಮಾ ನೋಡುತ್ತಿದ್ದರೆ ಅರೇ, ನಮ್ಮ ಮನೆ ಕಥೆ ಇದ್ದಂತೆ ಇದೆಯಲ್ಲ ಎಂದೆನಿಸುತ್ತದೆ. ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. 

ಪೋಸ್ಟರ್‌ಗಳಿಂದಲೇ ಗಮನ ಸೆಳೆಯುತ್ತಿದೆ ’ಕೆಮಿಸ್ಟ್ರಿ ಆಫ್ ಕರಿಯಪ್ಪ’

ಮನರಂಜನೆಯನ್ನೇ ಮೂಲವಾಗಿಟ್ಟುಕೊಂಡಿರುವ ಚಿತ್ರವಿದು. ನಾಯಕಿ ಸಂಜನಾ ಹಳ್ಳಿ ಹುಡುಗಿ. ಮದುವೆಯಾದ ನಂತರ ಗಂಡನ ಮೇಲೆ ಅನುಮಾನ ಪಡುವವಳು. ಕೊನೆಗೆ ಅದನ್ನು ಮಾವ ಸರಿಪಡಿಸಬೇಕಾಗುತ್ತದೆ. ಸಂಸಾರದಲ್ಲಿ ಸಮಸ್ಯೆಗಳು ಬರುತ್ತವೆ. ಅದನ್ನು ಸರಿಪಡಿಸಿಕೊಳ್ಳುತ್ತಾ ಮುಂದೆ ಸಾಗಬೇಕು. ಒಬ್ಬ ವ್ಯಕ್ತಿ ಸಂಸಾರ ಉಳಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಾನೆ ಎಂಬುದೇ ಚಿತ್ರದ ತಿರುಳು. 

ಕುಟುಂಬದ ಜೊತೆ ಒಂದೊಳ್ಳೆ ಮನರಂಜನೆ ಚಿತ್ರ ನೋಡಿ ನಕ್ಕು ಹಗುರಾಗಿ. 

click me!