ಗಿಣಿ ಹೇಳಿದ ಕಥೆ: ನಾಯಕಿಯನ್ನೂ ಮುಟ್ಟದ ಹೀರೋ!

Published : Jan 09, 2019, 12:27 PM IST
ಗಿಣಿ ಹೇಳಿದ ಕಥೆ: ನಾಯಕಿಯನ್ನೂ ಮುಟ್ಟದ ಹೀರೋ!

ಸಾರಾಂಶ

ಸಿನಿಮಾಗಳಲ್ಲಿನ ಪ್ರೀತಿ ಅಂದ್ರೆ ತಬ್ಬಿಕೊಂಡು ಕುಣಿದಾಡಿ, ಲೊಚ ಲೆಚನೆ ಕಿಸ್ಸು ಕೊಟ್ಟು ಬಿಸಿಯೇರಿಸೋದೆಂಬ ವಾತಾವರಣವಿದೆ. ಇಂಥಾ ಮಾರುಕಟ್ಟೆ ಸ್ಟ್ರಾಟಜಿಯ ನಡುವೆ ನಿಜವಾದ ಪ್ರೀತಿಯ ನವಿರು ಭಾವಗಳೆಲ್ಲ ಮಂಕಾಗಿದೆ ಅನ್ನಿಸೋದರಲ್ಲಿಯೂ ಅರ್ಥವಿದೆ. ಆದರೆ ಗಿಣಿ ಹೇಳಿದ ಕಥೆಯಲ್ಲಿನ ಗಂಡು ಗಿಣಿ ಅಪ್ಪಿ ತಪ್ಪಿಯೂ ಹೆಣ್ಣು ಗಿಣಿಯನ್ನು ಮುಟ್ಟೋದಿಲ್ಲವಂತೆ.

ಇದು ಹಳ್ಳಿ ಘಮಲಿನ ಕಥಾನಕ. ಬೇರೆಲ್ಲ ಅಂಶಗಳ ಜೊತೆ ಇದರಲ್ಲಿ ನವಿರಾದೊಂದು ಪ್ರೇಮ ಕಥಾನಕವಿದೆ. ಅದು ಚಿತ್ರದುದ್ದಕ್ಕೂ ಹರಡಿಕೊಂಡಿರುತ್ತೆ. ದಶಕಗಳ ಹಿಂದೆ ಹಳ್ಳಿ ಸೀಮೆಯಲ್ಲಿ ಪ್ರೀತಿ ಅರಳಿಕೊಳ್ಳುತ್ತಿತ್ತಲ್ಲಾ? ಅದನ್ನೇ ಇಲ್ಲಿ ಫ್ರಶ್ ಆಗಿ ಕಟ್ಟಿ ಕೊಡಲಾಗಿದೆಯಂತೆ.

ಇಲ್ಲಿನ ನಾಯಕ ಅಪ್ಪಿ ತಪ್ಪಿಯೂ ನಾಯಕಿಯ ಮೈ ಸೋಕೋದಿಲ್ಲ. ಖುದ್ದು ನಾಯಕಿಯೇ ಮುಟ್ಟಲು ಬಂದರೂ ಕೊಸರಿಕೊಂಡು ಓಡೋ ಕ್ಯಾರೆಕ್ಟರ್ ನಾಯಕನದ್ದು. ಆದರೆ ಇಂಥಾದ್ದರ ನಡುವೆಯೂ ನಾಯಕ ನಾಯಕಿಯನ್ನ ಮುಟ್ಟಲೇ ಬೇಕಾದ ಸಂದಿಗ್ಧ ಸನ್ನಿವೇಶವೊಂದು ಬಂದೊದಗುತ್ತದೆಯಂತೆ. ಆಗೇನಾಗುತ್ತದೆ ಎಂಬುದೂ ಗಿಣಿ ಹೇಳಿದ ಕಥೆಯ ಆಕರ್ಷಣೆಗಳಲ್ಲೊಂದು. ಅಂಥಾ ಹತ್ತಾರು ನವಿರು ಭಾವಗಳು ಈ ವಾರ ಪ್ರೇಕ್ಷಕರಿಗೆ ಕಚಗುಳಿ ಇಡಲಿವೆ.

ಇದರಲ್ಲಿ ಬಹುಪಾಲು ರಂಗಭೂಮಿ ಕಲಾವಿದರೇ ನಟಿಸಿದ್ದಾರೆ. ಗಿಣಿ ಹೇಳಿದ ಕಥೆಯಲ್ಲಿ ಒಟ್ಟು ಎಂಬತ್ತೇಳು ಪಾತ್ರಗಳಿವೆ. ಅದರಲ್ಲಿ ಎಂಬತ್ನಾಲಕ್ಕು ಪಾರತ್ರಗಳಿಗೆ ರಂಗಭೂಮಿ ಕಲಾವಿದರೇ ಜೀವ ತುಂಬಿದ್ದಾರೆ.

’ಗಿಣಿ ಹೇಳಿದ ಕಥೆ’ ಹಾಡಿಗೆ ವ್ಯಾಪಕ ಮೆಚ್ಚುಗೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್