ಎಂಬತ್ನಾಲ್ಕು ಪಾತ್ರಗಳು ರಂಗಭೂಮಿ ಪಾಲಾದ ‘ಗಿಣಿ ಹೇಳಿದ ಕಥೆ’ !

By Web DeskFirst Published Jan 9, 2019, 11:32 AM IST
Highlights

ಸಾಕಷ್ಟು ವರ್ಷಗಳ ಕಾಲ ಧ್ಯಾನಿಸದೇ ದೃಷ್ಯ ಕಾವ್ಯವೊಂದು ಸಾಕಾರಗೊಳ್ಳಲು ಸಾಧ್ಯವಿಲ್ಲ. ಅದರ ಹಿಂದೆ ಶ್ರದ್ಧೆ ಇಲ್ಲದಿದ್ದರೆ ಒಂದೊಳ್ಳೆ ಚಿತ್ರವಾಗಿ ರೂಪುಗೊಳ್ಳುವುದೂ ದೂರದ ಮಾತು. ಆದರೆ ಗಿಣಿ ಹೇಳಿದ ಕಥೆಯ ಹಿಂದೆ ಅಂಥಾ ಧ್ಯಾನವಿದೆ. ವರ್ಷಾಂತರಗಳ ಪರಿಶ್ರಮ ಮತ್ತು ಶ್ರದ್ಧೆಗಳಿವೆ.

ಹೇಳಿಕೇಳಿ ಈ ಚಿತ್ರದ ನಿರ್ಮಾಪಕ, ನಾಯಕ ಮತ್ತು ಕಥೆ ಚಿತ್ರಕಥೆ, ಸಭಾಷಣೆಕಾರ ದೇವ್ ಅವರು ರಂಗಭೂಮಿಯಿಂದಲೇ ಬಂದವರು. ತಾವೊಂದು ಚಿತ್ರ ಮಾಡಿದರೆ ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಆಧ್ಯತೆ ಕೊಡಬೇಕೆಂಬ ಮಹದಾಸೆ ಅವರಿಗಿತ್ತು. ಅದನ್ನು ಈ ಸಿನಿಮಾ ಮೂಲಕ ಅಕ್ಷರಶಃ ಮಾಡಿ ತೋರಿಸಿದ್ದಾರೆ.

ಧ್ರುವ ಮೆಚ್ಚಿದ ಗಿಣಿ ಹೇಳಿದ ಕತೆ ಜ.11ಕ್ಕೆ

ಅದಕ್ಕೆ ಈ ಚಿತ್ರದ ತಾರಾಗಣವೇ ಸಾಕ್ಷಿಯಾಗುತ್ತೆ. ಯಾಕೆಂದರೆ, ಇದರಲ್ಲಿ ಬಹುಪಾಲು ರಂಗಭೂಮಿ ಕಲಾವಿದರೇ ನಟಿಸಿದ್ದಾರೆ. ಗಿಣಿ ಹೇಳಿದ ಕಥೆಯಲ್ಲಿ ಒಟ್ಟು ಎಂಬತ್ತೇಳು ಪಾತ್ರಗಳಿವೆ. ಅದರಲ್ಲಿ ಎಂಬತ್ನಾಲಕ್ಕು ಪಾರತ್ರಗಳಿಗೆ ರಂಗಭೂಮಿ ಕಲಾವಿದರೇ ಜೀವ ತುಂಬಿದ್ದಾರೆ. ಸಾಮಾನ್ಯವಾಗಿ ಚಿತ್ರಗಳಲ್ಲಿ ರಂಗಭೂಮಿ ಕಲಾವಿದರಿಗೆ ಅವಕಾಶ ಸಿಗೋದೇ ಅಪರೂಪ. ಆದರೆ ಈ ಚಿತ್ರದಲ್ಲಿ ಕರ್ನಾಟಕದ ಮೂಲೆ ಮೂಲೆಯ ಕಲಾವಿದರೂ ನಟಿಸಿದ್ದಾರೆ.

ದೇಸಿ ಕಥೆಗೆ ಕ್ರಿಯೇಟಿವ್ ಝಲಕ್ ನೀಡಿದ ’ಗಿಣಿ ಹೇಳಿದ ಕಥೆ’

ಈ ಸಿನಿಮಾ ಸಂಗೀತ ನಿರ್ದೇಶನ ಮಾಡಿರುವವರು ಹಿತನ್ ಹಾಸನ್. ಅವರ ಮೂರನೇ ಚಿತ್ರವಿದು. ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಚಿತ್ರದ ಭಿನ್ನವಾದ ಕಥೆಗೆ ಪೂರಕವಾದ ಸಂಗೀತ ಸಂಯೋಜನೆ ಮಾಡುವುದೇ ಸವಾಲಾಗಿತ್ತು. ಅದನ್ನು ಹಿತನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಸೀಮಿತ ಬಜೆಟ್ಟಿನಲ್ಲಿ, ಸೀಮಿತವಾದ ಪರಿಕರಗಳೊಂದಿಗೆ ಹಿತನ್ ಹಾಡುಗಳನ್ನು ರೂಪಿಸಿದ್ದಾರೆ. 

click me!