
ಸೆ.28ರಂದು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಗುರುದತ್ತ ಗಾಣಿಗ ನಿರ್ದೇಶನದ ಈ ಸಿನಿಮಾದ ನಿರ್ಮಾಪಕ ಜ್ಯಾಕ್ ಮಂಜುನಾಥ್. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಸೆಪ್ಟೆಂಬರ್
16ರಂದು ನಡೆಯಲಿದೆ. ಭಾನುವಾರ ಸಂಜೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ ಚಿತ್ರ ತಂಡ. ನಿರ್ಮಾಪಕ ಜಾಕ್‌ಮಂಜು ಈಗಾಗಲೇ ಹೇಳಿಕೊಂಡಿರುವ ಪ್ರಕಾರ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಆಡಿಯೋ ಲಾಂಚ್ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿದೆ. ಯಾಕಂದ್ರೆ, ಕನ್ನಡ ಚಿತ್ರೋದ್ಯಮದ ಘಟಾನುಘಟಿ ಸ್ಟಾರ್‌ಗಳ ಸಮ್ಮುಖದಲ್ಲೇ ಆಡಿಯೋ ಲಾಂಚ್ ಮಾಡುವ ಪ್ಲ್ಯಾನ್ ಅವರದ್ದು. ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಹ್ವಾನಿಸಲು ಯೋಚಿಸಿದ್ದೇವೆ ಅಂತ ಅವರು ಈ ಹಿಂದೆ ಹೇಳಿಕೊಂಡಿದ್ದರು.
ಅಂಬಿ ನಿಂಗೆ ವಯಸ್ಸಾಯ್ತೋ... ಫಸ್ಟ್ ಸಾಂಗ್ ರಿವೀಲ್ ! ಹೇಗಿದೆ ನೋಡಿ
’ಅಂಬಿ ನಿಂಗೆ ವಯಸ್ಸಾಯ್ತೋ’ ಮುಂದಕ್ಕೆ ಹೋಗಿದ್ಯಾಕೆ?
ಸುದೀಪ್ ಪ್ರೇರಣೆಯೇ ಈ ಚಿತ್ರಕ್ಕೆ ಕಾರಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.