
ಬೆಂಗಳೂರು (ಆ. 20): ಸಂಭಾವನೆ ವಿಚಾರದಲ್ಲಿ ‘ಆರೋಹಣ’ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ಕಲಾವಿದರ ನಡುವಿನ ವೈಮನಸ್ಸು ಬೀದಿಗೆ ಬಿದ್ದಿದೆ. ಮೂರು ತಿಂಗಳಾದರೂ ತಮಗೆ ಪೇಮೆಂಟ್ ನೀಡದೆ ನಿರ್ಮಾಪಕರು ಸತಾಯಿಸುತ್ತಿದ್ದಾರೆ. ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಚಿತ್ರದ ಸಹ ನಟ ರೋಹಿತ್ ಶೆಟ್ಟಿ ಆರೋಪಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಸಾಫ್ಟ್‌ವೇರ್ ಉದ್ಯೋಗಿ ಸುಶೀಲ್ ಕುಮಾರ್ ನಿರ್ಮಿಸಿ, ನಾಯಕರಾಗಿ ನಟಿಸಿರುವ ‘ಆರೋಹಣ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶದಿಂದ ನಿರ್ದೇಶಕ ಶ್ರೀಧರ್ ಶೆಟ್ಟಿ ಚಿತ್ರ ತಂಡದೊಂದಿಗೆ ಪತ್ರಿಕಾಗೋಷ್ಟಿ ಕರೆದಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಚಿತ್ರದ ಸಹ ನಟ ರೋಹಿತ್, ‘ಮೊದಲು ಚಿತ್ರದಲ್ಲಿ ಅಭಿನಯಿಸಲು ಎರಡು ಲಕ್ಷ ಸಂಭಾವನೆಗೆ ಒಪ್ಪಿಕೊಂಡಿದ್ದೆ. 50 ಸಾವಿರ ಅಡ್ವಾನ್ಸ್ ಕೊಟ್ಟಿದ್ದರು. ಶೂಟಿಂಗ್ ಮುಗಿಸಿ, ಬಾಕಿ ಪೇಮೆಂಟ್ ಕೇಳಿದರೆ ನಿರ್ಮಾಪಕರು ಬೆದರಿಕೆ ಹಾಕುತ್ತಿದ್ದಾರೆ. ನನಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿದರು.
ಈ ಆರೋಪಕ್ಕೆ ನಿರ್ಮಾಪಕ ಸುಶೀಲ್ ಕುಮಾರ್, ‘ಇದು ನಿರ್ದೇಶಕರು ಮತ್ತು ರೋಹಿತ್ ನಡುವಿನ ಜಗಳ. ಇವರ ಜಗಳದಿಂದ ಚಿತ್ರಕ್ಕೆ ತೊಂದರೆಯಾಗಿದೆ. ಕೇಳಿದರೆ ನಿರ್ದೇಶಕರೇ ನನಗೇ ದನ ಕಾಯೋನು ಅಂತ ಅವಮಾನಿಸಿದರು’ ಎಂದು ಆರೋಪಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ನಿರ್ದೇಶಕ ಶ್ರೀಧರ್ ಸಿಡಿಮಿಡಿಗೊಂಡು ಹಾಗೆಲ್ಲಾ ನಾನು ಮಾತನಾಡಿಲ್ಲ. ಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ಸುಶೀಲ್ ತಿರುಗೇಟು ನೀಡಿದರು. ಕಡೆಗೆ ಚಿತ್ರ ತಂಡ ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.