ಮೀಟೂ ಅಭಿಯಾನಕ್ಕೆ ತುಪ್ಪದ ಹುಡುಗಿ ರಾಗಿಣಿ ಎಂಟ್ರಿ

Published : Oct 16, 2018, 04:12 PM IST
ಮೀಟೂ ಅಭಿಯಾನಕ್ಕೆ ತುಪ್ಪದ ಹುಡುಗಿ ರಾಗಿಣಿ ಎಂಟ್ರಿ

ಸಾರಾಂಶ

#MeToo ಅಭಿಯಾನಕ್ಕೆ ರಾಗಿಣಿ ದ್ವಿವೇದಿ ಎಂಟ್ರಿ |  ಬಾಲಿವುಡ್‌ ತಾರೆಯರಿಂದಲೂ ವ್ಯಕ್ತವಾಯ್ತು ಬೆಂಬಲ | ಭಾರೀ ಸಂಚಲನ ಮೂಡಿಸಿದೆ ಅಭಿಯಾನ 

ಹುಬ್ಬಳ್ಳಿ (ಅ. 16):  #MeToo ಅಭಿಯಾನಕ್ಕೆ ಎಲ್ಲಾ ಕಡೆಯಿಂದ ಬೆಂಬಲ ಸಿಗುತ್ತಿದ್ದು ಇದೀಗ ನಟಿ‌ ರಾಗಿಣಿ ದ್ವಿವೇದಿ ಕೂಡಾ ದನಿಗೂಡಿಸಿದ್ದಾರೆ.

ಕನ್ನಡದ ಆರ್‌ಜೆಯೊಬ್ಬರು ಬಿಚ್ಚಿಟ್ರು #MeToo ಅನುಭವ

ಒಂದು‌ ಒಳ್ಳೆಯ ಉದ್ದೇಶದಿಂದ ಇಂತದ್ದೊಂದು ಅಭಿಯಾನ ಆರಂಭಗೊಂಡಿದೆ. ಶೋಷಣೆಗೆ ಒಳಗಾದವರು ಮುಂದೆ ಬಂದು ಹೇಳಿಕೆ ನೀಡುತ್ತಿರುವುದು ಸ್ವಾಗತಾರ್ಹ.  ಶೋಷಣೆಗೆ ಒಳಗಾದ ಎಲ್ಲರೂ ಇಂಥ ಧೈರ್ಯ ತೋರಿಸಲೇಬೇಕು. ಸಮಾಜದಲ್ಲಿ ಇದರಿಂದ ಒಂದು ಉತ್ತಮ ಬದಲಾವಣೆ ತರಲು ಸಾಧ್ಯ.  ಯಾರೂ ಇದನ್ನು ‌ಪ್ರಚಾರದ ಗಿಮಿಕ್‌ ಅಗಿ ತೆಗೆದುಕೊಳ್ಳಬಾರದು ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ. 

ಇದು ಸ್ಯಾಂಡಲ್‌ವುಡ್ ಕಥೆಯಾದರೆ ಅತ್ತ ಬಾಲಿವುಡ್ ನಲ್ಲಿ ನಟಿ ನೇಹಾ ದೂಪಿಯಾ ಹಾಗೂ ಸೋಹಾಲಿ ಅಲಿ ಖಾನ್ ಕೂಡಾ ಮೀಟೂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾರೇ ಆಗಲಿ ನಟಿ ಅನ್ನೋದಕ್ಕಿಂತ ಮೊದಲು ಹೆಣ್ಣು ಅನ್ನೋದನ್ನ ನೋಡಬೇಕು. ಮೀಟೂ ಆರೋಪ ಮಾಡಿದಾಗ ಕೆಲವರು ಅದನ್ನ ಪ್ರಶ್ನಿಸುತ್ತಾರೆ. ಅದನ್ನೆಲ್ಲಾ ಪ್ರಶ್ನಿಸುವ ಅಗತ್ಯ ಇಲ್ಲ. ನಾವದನ್ನ ನಂಬಬೇಕು ಎಂದು ಹೇಳಿದ್ದಾರೆ. 

#MeToo : ಸಲ್ಲು ಬಗ್ಗೆ ಐಶ್ವರ್ಯಾ ರೈ ಆರೋಪವೇನು?

ಅದೇ ರೀತಿ ಸೋಹಾಲಿ ಖಾನ್ ಕೂಡಾ ತನುಶ್ರೀ ದತ್ತಾಗೆ ಬೆಂಬಲ ವ್ಯಕ್ತಪಡಿಸುತ್ತಾ, ಮಹಿಳೆಯರು ತಮ್ಮ ಮೇಲೆ ನಡೆದಿರುವ ದೌರ್ಜ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡುವುದನ್ನು ಶ್ಲಾಘಿಸಲೇಬೇಕು. ಭಾರತದಲ್ಲಿ ಮಹಿಳೆಯರು ದಿನನಿತ್ಯ ಇಂತದ್ದೇ ಸಮಸ್ಯೆ ಎದುರಿಸುತ್ತಾರೆ ಎಂದು ಹೇಳಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್
ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!