
ಬೆಂಗಳೂರು (ಜ. 23): ರಚಿತಾ ರಾಮ್ ಸಖತ್ ಖುಷಿಯಲ್ಲಿದ್ದಾರೆ. 2019 ಅವರಿಗೆ ಲಕ್ಕಿ ಇಯರ್. ಅವರು ಅಭಿನಯಿಸಿದ ಸಿನಿಮಾಗಳು ಈ ವರ್ಷ ಸರಣಿಯಲ್ಲಿ ತೆರೆಗೆ ಬರಲಿವೆ. ಸದ್ಯಕ್ಕೀಗ ‘ಸೀತಾರಾಮ ಕಲ್ಯಾಣ’ ಇದೇ ವಾರ ರಿಲೀಸ್ ಆಗುತ್ತಿದೆ. ಬಿಗ್ ಬಜೆಟ್ ಸಿನಿಮಾ. ಅದ್ಧೂರಿ ಮೇಕಿಂಗ್. ‘ಸೀತಾರಾಮ ಕಲ್ಯಾಣ’ದಲ್ಲಿ ಲಂಗ- ದಾವಣಿ ಹಾಗೂ ಚೂಡಿದಾರ ತೊಟ್ಟು ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಜ. 25ಕ್ಕೆ ನಿಖಿಲ್ ಅಭಿನಯದ ’ಸೀತಾರಾಮ ಕಲ್ಯಾಣ’ ತೆರೆಗೆ
ಈ ಚಿತ್ರದಲ್ಲಿ ಅವರ ಪಾತ್ರವೇನು? ಅದಕ್ಕಿರುವ ಮಹತ್ವ ಎಂಥದ್ದು? ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರಿಸಿದ್ದಾರೆ.
- ನಾನಿಲ್ಲಿ ಸಂಪ್ರದಾಯಸ್ಥ ಹಳ್ಳಿ ಹುಡುಗಿ. ಸಿನಿಮಾ ಪೂರ್ತಿ ಟ್ರೆಡಿಷನಲ್ ಲುಕ್. ಸಿನಿಮಾ ಪೂರ್ತಿ ಹಾಗೆ ಕಾಣಿಸಿಕೊಳ್ಳುವುದೆಂದರೆ ಸುಲಭವಲ್ಲ. ಜತೆಗೆ ಎಲ್ಲರಿಗೂ ಆ ರೀತಿಯ ಟ್ರೆಡಿಷನಲ್ ಲುಕ್ ಸೂಟ್ ಆಗುವುದಿಲ್ಲ. ಆದ್ರೆ ನನಗೆ ಎಲ್ಲಿಯೂ ಬೇಸರವಾಗದಂತೆ ನಿರ್ದೇಶಕರು ಕಾಸ್ಟೂ್ಯಮ್ ಡಿಸೈನ್ ಮಾಡಿಸಿದ್ದರು. ಅದು ಪ್ಲಸ್ ಆಯಿತು. ಹಾಗಾಗಿ ಆ ಪಾತ್ರವನ್ನು ಎಂಜಾಯ್ ಮಾಡುತ್ತಲೇ ಅಭಿನಯಿಸಿದೆ. ಅದು ಪಾತ್ರಕ್ಕೆ ನೈಜವಾಗಿಯೇ ಬಂತು.
ನಟಸಾರ್ವಭೌಮದಲ್ಲಿ ಪುನೀತ್ ಫೈಟ್ ಹೇಗಿದೆ ಗೊತ್ತಾ?
- ನಿಖಿಲ್ ಕುಮಾರಸ್ವಾಮಿ ತುಂಬಾ ಬದ್ಧತೆವುಳ್ಳ ನಟ. ಸಿನಿಮಾ ಅವರ ಪ್ಯಾಷನ್. ಯಾವುದೇ ಅಹಂ ಇಲ್ಲದೆ ಪಾತ್ರದಲ್ಲಿ ತಾವಾಗುತ್ತಾರೆ. ಅವರ ಜತೆಗೆ ಅಭಿನಯಿಸುವಾಗ ನಾನು ಅವರಲ್ಲಿ ಕಂಡಿದ್ದು ಅದು. ಮೊದಲ ಸಿನಿಮಾಗಿಂತ ಈಗವರು ತುಂಬಾ ಕಲಿತಿದ್ದಾರೆ. ಐದಾರು ಸಿನಿಮಾ ಮಾಡಿದ ನಟನಂತೆ ಅಭಿನಯಿಸಿದ್ದಾರೆ. ನಾನಿದನ್ನು ಯಾವುದೇ ಪೂರ್ವಗ್ರಹದಲ್ಲಿ ಹೇಳುತ್ತಿಲ್ಲ, ಸೆಟ್‌ನಲ್ಲಿ ಕಂಡಿದ್ದನ್ನು, ತೆರೆ ಮೇಲೆ ನೋಡಿದ್ದನ್ನು ಹೇಳುತ್ತಿದ್ದೇನೆ. ಈ ಸಿನಿಮಾ ನೋಡಿದಾಗ ಅದು ಪ್ರೇಕ್ಷಕರಿಗೂ ಗೊತ್ತಾಗಲಿದೆ.
ಅರೆ.. ನಾನೇನು ಮಾಡಬಾರದ್ದು ಮಾಡಿಲ್ಲವಲ್ಲ!
‘ಟ್ರೇಲರ್‌ನಲ್ಲಿ ಬೋಲ್ಡ್ ಇದ್ದ ಮಾತ್ರಕ್ಕೆ ಇಡೀ ಸಿನಿಮಾದಲ್ಲಿ ನಾನು ಹಾಗೆ ಇರುತ್ತೇನೆ ಅಂದಲ್ಲ. ಟ್ರೇಲರ್ ಮಾಡುವುದು ಸಿನಿಮಾದ ಬಗ್ಗೆ ಗಮನ ಸೆಳೆಯುವುದಕ್ಕೆ, ಕುತೂಹಲ ಸೃಷ್ಟಿಸುವುದಕ್ಕಾಗಿ ಅಷ್ಟೇ. ತುಂಬ ಜನ ‘ಅಯ್ಯೋ ರಚಿತಾ ಹೀಗೆಲ್ಲ ಮಾಡಿದ್ದಾರಾ? ಅವರಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ’ ಅಂದ್ರು. ಅರೇ.. ನಾನೇನು ಮಾಡಬಾರದ್ದು ಮಾಡಿಲ್ಲವಲ್ಲ!
ಒಂದೇ ಥರದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡರೆ, ‘ರಚಿತಾ ಒಂದೇ ಥರ ಮಾಡ್ತಾರೆ’ ಅಂತಾರೆ. ಈ ರೀತಿ ಪಾತ್ರಗಳಲ್ಲಿ ಪ್ರಯೋಗ ಮಾಡಿದರೆ, ‘ಅಯ್ಯೋ ಯಾಕಿಂಗ್ ಮಾಡಿದ್ರು’ ಅಂತಾರೆ. ‘ಐ ಲವ್ ಯೂ’ ಚಿತ್ರದಲ್ಲಿ ಗ್ಲಾಮರಸ್ ಪಾತ್ರವಿದ್ದರೂ, ನಾನು ಎಲ್ಲೂ ಕೆಟ್ಟದಾಗಿ ಕಾಣಿಸಿಕೊಂಡಿಲ್ಲ.
ಒಂದು ಪಾತ್ರಕ್ಕೆ ಅದು ಬೇಕಿತ್ತು, ಅದನ್ನು ನಿರ್ವಹಿಸಿದ್ದೇನೆ. ಇತಿಮಿತಿ ನನಗೂ ಗೊತ್ತು. ಅದಕ್ಕೆ ತಕ್ಕಂತೆ ನಾನೊಬ್ಬ ಕಲಾವಿದೆಯಾಗಿ ಬೆæೕರೆ ಬೇರೆ ಥರದ ಪಾತ್ರಗಳನ್ನು ಯಾಕೆ ಮಾಡಬಾರದು? ನನಗೂ ನನ್ನ ಮಿತಿಗಳೇನು ಎಂಬುದು ತಿಳಿದಿದೆ’ ಎನ್ನುತ್ತಾ ‘ಐ ಲವ್ ಯು’ ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಟ್ರೇಲರ್ ಲುಕ್ ಬಗ್ಗೆ ವಿವರ ನೀಡುತ್ತಾರೆ ರಚಿತಾರಾಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.