
‘ಲಂಡನ್‌ನಲ್ಲಿ ಲಂಬೋದರ’ ಚಿತ್ರದೊಂದಿಗೆ ನಟಿ ಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಶ್ರುತಿ ಪ್ರಕಾಶ್ ಈಗಾಗಲೇ ಮತ್ತೆರೆಡು ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ. ಇದೀಗ ಮಂಜು ಮಾಂಡವ್ಯ ನಿರ್ದೇಶನ ಹಾಗೂ ಅಭಿನಯದ ‘ಶ್ರೀಭರತ್ ಬಾಹುಬಲಿ’ ಚಿತ್ರದಲ್ಲಿನ ಸ್ಪೆಷಲ್ ಸಾಂಗ್‌ವೊಂದಕ್ಕೆ ಸೊಂಟ ಬಳುಕಿಸಲು ರೆಡಿ ಆಗಿದ್ದಾರೆ.
‘ನಟಿಯಾಗಿ ಜನ ಮೆಚ್ಚುವ ಪಾತ್ರಗಳಲ್ಲಿ ಗುರುತಿಸಿಕೊಳ್ಳಬೇಕೆನ್ನುವುದು ನನ್ನಾಸೆ. ಅದು ನಾಯಕಿ ಪಾತ್ರವೇ ಆಗಬೇಕು ಅಂತಿಲ್ಲ. ಒಂದೊಳ್ಳೆ ಕತೆಯ ಚಿತ್ರದಲ್ಲಿ ಅಷ್ಟೇ ಸೊಗಸಾದ ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೂ ಕೂಡ ಅದರದ್ದೇ ಆದ ಮಹತ್ವ ಇರುತ್ತದೆ. ಹಾಗಾಗಿಯೇ ಈ ಅವಕಾಶ ಒಪ್ಪಿಕೊಂಡೆ.’ ? ಶ್ರುತಿ ಪ್ರಕಾಶ್
ಇದು ಕತೆಯ ಸಾರಾಂಶಕ್ಕೆ ಪೂರಕವಾಗಿರುವ ಕಂಟೆಂಟ್ ಆಧರಿತ ಹಾಡು. ಅದರಲ್ಲಿ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿ ದ್ದಾರಂತೆ ನಟಿ ಕಮ್ ಗಾಯಕಿ ಶ್ರುತಿ ಪ್ರಕಾಶ್. ‘ಜನಪ್ರಿಯ ನಟಿ ಯಾವುದೋ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂ ದಾಗ ಅದೊಂದು ಐಟಂ ಸಾಂಗ್ ಇರಬೇಕೆನ್ನುವುದು ಸಹಜವಾದ ನಂಬಿಕೆ. ಆದರೆ ನಮ್ಮ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ಕತೆಯ ಒಟ್ಟು ಸಾರಾಂಶವನ್ನೇ ಹೇಳುವ ಚಿತ್ರದ ಟೈಟಲ್ ಸಾಂಗ್‌ನಲ್ಲಿ. ಸೋಮವಾರ(ಜ.21) ದಿಂದ ಚಿತ್ರೀಕರಣ ಶುರುವಾಗುತ್ತಿದೆ. ಹಾಡಿನ ಚಿತ್ರೀಕರಣಕ್ಕಾಗಿಯೇ ಅದ್ಧೂರಿ ಸೆಟ್ ಹಾಕಲಾಗಿದೆ.’ ಎನ್ನುತ್ತಾರೆ ನಿರ್ದೇಶಕ ಮಂಜು ಮಾಂಡವ್ಯ. ಸೊಗಸಾದ ಸಾಹಿತ್ಯದ ಹಾಡಿನಲ್ಲಿ ತಾವು ಕಾಣಿಸಿಕೊಳ್ಳುತ್ತಿರುವುದಕ್ಕೆ ನಟಿ ಶ್ರುತಿ ಪ್ರಕಾಶ್ ಕೂಡ ಖುಷಿ ಆಗಿದ್ದಾರೆ. ಮಂಜು ಮಾಂಡವ್ಯ ನಿರ್ದೇಶಿಸಿ, ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ಅಚ್ಯುತ್ ಕುಮಾರ್, ಹೊಸ ಪ್ರತಿಭೆ ಶ್ರೇಯಾ ಸೇರಿದಂತೆ ಹಲವರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.